Posts

ಎಲ್ಲರೂ ಜೊತೆಯಲ್ಲಿ ಬೇಲೂರಿಗೆ ಹೋಗಿ ದೇವಸ್ಥಾನಕ್ಕೆ ಭೆಟ್ಟಿಕೊಟ್ಟರು !

Image
ಪ್ರಕಾಶ ರವಿ, ಸರೋಜ, ಪ್ರಸಾದನ ಮನೆಗೆ ಹೋದಾಗ ತೆಗೆದ ಫೋಟೋ. (ಏಪ್ರಿಲ್, ೨೦೨೪) ರಜದ ದಿನವಾದ್ದರಿಂದ ಚಿ ಅಮೃತ ಸಹಿತ ಅವರ ಜತೆಗೆ ಇದ್ದಳು. ಎಲ್ಲರೂ ಜೊತೆಯಲ್ಲಿ ಬೇಲೂರಿಗೆ ಹೋಗಿ ದೇವಸ್ಥಾನಕ್ಕೆ ಭೆಟ್ಟಿಕೊಟ್ಟರು.                                                                                           https://photos.app.goo.gl/U7bJwv7bPQGvrsj97                  https://photos.app.goo.gl/PMZgv2kVQfz92CmPA

ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು !

Image
                                                                 ನಿಮ್ಮೆಲ್ಲರಿಗೂ                                         ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು  !                                          ನಿಮ್ಮ ಜೀವನದಲ್ಲಿ ಎಳ್ಳು-ಬೆಲ್ಲದ ಸವಿ ಸದಾ  ಸಿಹಿ-ಸಿಹಿ ಯಾಗಿರಲಿ ....   

Chi. Gagana shridhar's birth day (2023) !

Image
                        Chi. Gagana shridhar's birth day (2023)                                                                                                                      Celebrated on 21st, Dec, 2023

ನಮ್ಮ ಪ್ರೀತಿಯ ವಿಶ್ವಣ್ಣ (ಎಚ್. ಆರ್. ವಿಶ್ವನಾಥರಾವ್) ೨೦ ನೆಯ ಗುರುವಾರ, ಜುಲೈ ೨೦೨೩ ರ ಮಧ್ಯಾನ್ಹ ೨-೪೫ ಕ್ಕೆ ವಿಧಿವಶರಾದರು.

Image
ನಮ್ಮ ಪ್ರೀತಿಯ ವಿಶ್ವಣ್ಣ  (ಎಚ್. ಆರ್. ವಿಶ್ವನಾಥರಾವ್) ೨೦ ನೆಯ ತಾರೀಖು,  ಗುರುವಾರ, ಜುಲೈ ೨೦೨೩ ರ ಮಧ್ಯಾನ್ಹ ೨-೪೫ ಕ್ಕೆ ವಿಧಿವಶರಾದರು. ಹೊಳಲ್ಕೆರೆಯ   ನಮ್ಮ ಸುಂಕದವರ ವಂಶದ ಅಣ್ಣ-ತಮ್ಮಂದಿರೆಲ್ಲಾ ಮರಣಿಸಿದ ಮೇಲೆ  ಹಿರಿಯರಾದ ಅವರೇ ಕೊನೆಯ ಕೊಂಡಿಯಂತಿದ್ದರು.  ವಿಶ್ವಣ್ಣನವರ ನಿಧನದಿಂದಾಗಿ  ನಮ್ಮೆಲ್ಲರಿಗೆ ದಿಗ್ದರ್ಶನ ಮಾಡುವ ಹಿರಿಯರ ಉಪಸ್ಥಿತಿ ಇಲ್ಲದಂತಾಗಿದೆ.  ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ.  - ಸುಂಕದ ವಂಶದ ಶ್ಯಾನುಭೋಗರ ಮನೆತನದವರು.  ನಮ್ಮ ಪೂಜ್ಯ ತಂದೆಯವರಾದ ಹೆಚ್.ಆರ್. ವಿಶ್ವನಾಥ ಅವರು ದಿನಾಂಕ 2೦-೦7-2023ರಂದು ಗುರುವಾರ ಮಧ್ಯಾಹ್ನ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ತತ್ಸಂಬಂಧವಾಗಿ ಉತ್ತರಕ್ರಿಯಾದಿ ಕಾರ್ಯಗಳನ್ನು ' ಮೋ‌ಕ್ಷಧಾಮ, ನಾಗರಬಾವಿ,  ಬೆಂಗಳೂರು'  ಇಲ್ಲಿ ಕೆಳಕಂಡಂತೆ ನೆರವೇರಿಸಲಾಗುವುದು.  * ದಿನಾಂಕ 29-07-2023 ಶನಿವಾರ ' ಧರ್ಮೋದಕ'  (ಬೇಳಿಗ್ಗೆ 9 ರಿಂದ 11.0 ಗಂಟೆ) * ದಿನಾಂಕ 01-08-2023 ಮಂಗಳವಾರ ' ಮಾಸಿಕ' ( ಬೆಳಿಗ್ಗೆ 11.30 ರಿಂದ 1.0 ಗಂಟೆ) * ದಿನಾಂಕ 02-08-2023 ಬುದವಾರ ' ವೈಕುಂಠ ಸಮಾರಾಧನೆ' ( ಬೆಳಿಗ್ಗೆ 11.30 ರಿಂದ 1.0 ಗಂಟೆ) ಹೆಚ್. ವಿ. ರಮೇಶ್ ಮತ್ತು ಹೆಚ್.ವಿ. ಲಕ್ಷ್ಮೀಶ  * 9448769069 * 9448060332 ಎಲ್ಲಾ ವಿಧಿ ವಿಧಾನಗಳೂ ಪೂರ್ವನಿಯೋಜನೆಯ ಪ್ರಕಾರ ನೆರವೇರಿದವು. ಹಾಗೆಯೇ ವೈಕುಂಠ ಸಮಾರಾ

ಶ್ರೀ. ಎಚ್. ಆರ್. ನಾಗರಾಜರಾಯರ ವರ್ಷಾಂತ್ಯ ಸಮಾರಂಭ !

Image
                  Video link :   https://photos.app.goo.gl/YdA5oM3pqE7YHiCM6 ನನ್ನ ತಂದೆ,  ಶ್ರೀ. ಎಚ್. ಆರ್. ನಾಗರಾಜರಾಯರ ವರ್ಷಾಂತ್ಯ ಸಮಾರಂಭವನ್ನು ೨೮, ಶನಿವಾರ, ಹಾಗೂ  ವೈಕುಂಠ ಸಮಾರಾಧನೆಯನ್ನು ೨೯, ರವಿವಾರದಂದು ಬೆಂಗಳೂರಿನ "ಧರ್ಮವನ" ದಲ್ಲಿ ನೆರವೇರಿಸಲು ಗುರುಹಿರಿಯರ ಆಜ್ಞೆಯ  ಮೇರೆಗೆ  ಆಯೋಜಿಸಿಕೊಂಡಿದ್ದೇನೆ. ದಯಮಾಡಿ ಕೆಳಗೆ ಕೊಟ್ಟಿರುವ ವಿಳಾಸವನ್ನು ಜ್ಞಾಪಕದಲ್ಲಿಟ್ಟುಕೊಳ್ಳುವಿರೆಂದು ನಂಬುತ್ತೇನೆ.                                                   -ಹೊಳಲ್ಕೆರೆ  ನಾಗರಾಜರಾವ್  ಶ್ರೀಧರ ,  "Dharmavana" No, 66, 60 ft. Road, Shyan bhogue Nagappa lay out, Bilekana halli, Bengaluru-560 076, Phone No : 9916968109/9964754186 ಶ್ರೀ. ಕುಮಾರಸ್ವಾಮಿ, ಶ್ರೀಮತಿ ವಿಜಯಮ್ಮ ಪ್ರಾಣೇಶ ಮೂರ್ತಿ,  ಶ್ರೀಮತಿ. ಸುಚರಿತ ಅನಂತಮೂರ್ತಿ, ಶ್ರೀಮತಿ ಪ್ರಸನ್ನ, ನನಗೆ ಪರಿಚಯ. ಬೇರೆಯವರ ಹೆಸರು ಗೊತ್ತಿಲ್ಲದ್ದಕ್ಕೆ ಕ್ಷಮೆ ಬೇಡುವೆ.                        ಪೂಜೆ ಮತ್ತು ಆಶೀರ್ವಚನ ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದು. 

ಸೌ ಉಷಾ ಶ್ರೀಧರ, ಯೋಗ ಶಿಕ್ಷಣ ಪಡೆದು ಪದವಿಯನ್ನು ಗಳಿಸಿದ್ದಾಳೆ. ಮುಂದೆ ಯೋಗಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸುತ್ತಾಳೆ....

Image
ನಮ್ಮ ಸುಂಕದ ಶ್ಯಾನುಭೋಗರ ವಂಶದಲ್ಲಿ ಯೋಗಾಭ್ಯಾಸ ಮಾಡಿದ ಯುವ-ವ್ಯಕ್ತಿಗಳ ಹೆಸರುಗಳು ದಾಖಲಾಗಿರುವ ಬಗ್ಗೆ ಮಾಹಿತಿಗಳಿಲ್ಲ.  ನಮ್ಮ ವಂಶದವರೇ ಆದ ಶ್ರೀ. ಶಂಕರಲಿಂಗ ಭಾಗವಾನರೆಂದು ಪ್ರಸಿದ್ಧರಾಗಿದ್ದ ರಂಗಪ್ಪನವರು, ಯತಿಗಳು. ಅವರು  ಮಾಳೇನಹಳ್ಳಿ, ಮತ್ತು ಕೋಮಾರನ ಹಳ್ಳಿಯಲ್ಲಿ ಆಶ್ರಮಗಳನ್ನು ಸ್ಥಾಪಿಸಿ ಭಕ್ತರನ್ನು ಆಶೀರ್ವದಿಸಿದ್ದರು. ನಾಥಪಂಥದಲ್ಲಿ ಅವರಿಗೆ ಅಪಾರ ಭಕ್ತಿ ಶ್ರದ್ಧೆಗಳಿದ್ದವು. ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮವನ್ನು ಸ್ಥಾಪಿಸಿದ ಶ್ರೀ. ರಾಘವೇಂದ್ರ ಸ್ವಾಮಿಗಳು ಶ್ರೀ. ಶಂಕರ ಲಿಂಗ ಭಗವಾನರ ಅನುಯಾಯಿಯಾಗಿದ್ದರು.  ಶ್ರೀಮತಿ ಉಷಾ ಶ್ರೀಧರ ಯೋಗದಲ್ಲಿ ಆಸಕ್ತಿವಹಿಸಿ ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದಲ್ಲಿ ಸೇರಿ ಅಧ್ಯಯನ ನಡೆಸಿ ಒಂದು ಪದವಿಯನ್ನು ಪಡೆದಿದ್ದಾರೆ. ಇದು ನಮಗೆಲ್ಲಾ ಹೆಮ್ಮೆಯ ವಿಷಯವಾಗಿದೆ. ನಮ್ಮ ದಾಯಾದಿಗಳಲ್ಲಿ ಒಬ್ಬರಾದ ಶ್ರೀ. ಸಿ. ಎಂ. ಭಟ್ಟರು ಯೋಗಾಚಾರ್ಯರೆಂದು ಪ್ರಸಿದ್ದರಾಗಿದ್ದರು. ಅವರು ಚಿತ್ರದುರ್ಗದಿಂದ  ಮೈಸೂರಿಗೆ ಹೋಗಿ  ತಮ್ಮ ಚಿಕ್ಕ ಪ್ರಾಯದಲ್ಲಿಯೇ ಸಂಸ್ಕೃತವನ್ನು ಕಲಿತರು. ಯೋಗಾಚಾರ್ಯ ಶ್ರೀ. ಷ್ಣಮಾಚಾರ್ಯರು ಉತ್ತರ ಭಾರತದಿಂದ ಮೈಸೂರಿಗೆ ಆಗಮಿಸಿ ಅರಮನೆಯ ಯೋಗ ಶಿಕ್ಷಣ ಶಾಲೆಯಮೇಲ್ವಿಚಾರಣೆಯನ್ನು ಕೈಗೆತ್ತಿಕೊಂಡಮೇಲೆ ಯುವ ಸಂಸ್ಕೃತ ಪಂಡಿತ ಶ್ರೀ ಮಹಾದೇವ ಭಟ್ಟರು ಕೃಷ್ಣಮಾಚಾರ್ಯರ ಮಾರ್ಗದರ್ಶನದಲ್ಲಿ ಯೋಗವಿದ್ಯೆಯನ್ನು ಕಲಿತು, ಮುಂದೆ ಮುಂಬಯಿ ಮಹಾನಗರಕ್ಕೆ ಹೋಗಿ ಅಲ

ಶ್ರೀ. ಗೋಪಾಲ ಎಸ್ ಜಮದಗ್ನಿ. !

Image
ಶ್ರೀ ದಿವಂಗತ ಸೇತುರಾಮಣ್ಣನವರ ಮಗ ಶ್ರೀ. ಗೋಪಾಲ ಎಸ್ ಜಮದಗ್ನಿಯವರ ವೈಕುಂಠ ಸಮಾರಾಧನೆ, ಹೊಳಲ್ಕೆರೆಯ  ಶ್ರೀ. ಗೋಪಾಲ ಕೃಷ್ಣ ದೇವರ ಗುಡಿಯಲ್ಲಿ :             (ಜನನ : ೧೯೪೧-ನಿಧನ : ೨೦, ಮಂಗಳವಾರ, ಡಿಸೆಂಬರ್, ೨೦೨೨ ರಂದು  ಸಾಯಂಕಾಲ ೭-೩೦ಕ್ಕೆ)                                                                       (ಬೆಂಗಳೂರಿನಲ್ಲಿ)