Posts

ಇನ್ನೇನು ಟೊರಾಂಟೋ ಬಿಡೋ ಸಮಯ ಬಂತು !

Image
ಹತ್ತತ್ರ ೨ ತಿಂಗಳು ೨೮ ದಿನ ಆಯ್ತಲ್ಲ ಇನ್ನೇನು ! ಇಲ್ಲಿ ನೋಡಿದ್ದು,  ಕಲ್ತಿದ್ದು ಅಪಾರ. ಹೊಸ ಹೊಸ ವಿಷಯಗಳ್ನ , ಈಗಿರೋ ಇದುವರೆಗಿನ ನಮ್ಮ ಜ್ಞಾನದ ಅರಿವಿನಲ್ಲಿ ಹೊಸ ವಿಶ್ವವನ್ನು ನೋಡೋದ್ ಒಂದ್ಕಡೆಯಾದರೆ. ಸಿಕ್ಕ ಜ್ಞಾನವನ್ನು  ಉಜ್ಜಿ ಪ್ರಜ್ವಲ ಗೊಳಿಸೋದು, ಮತ್ತೊಂದುಕಡೆ....ಈ ಅನಂತ ವಿಶ್ವದಲ್ಲಿ ನಮಗೆ ತಿಳಿದಿರೋದು  ಅದೆಷ್ಟು ಅಲ್ಪ ಅನ್ನೋ ಅರಿವಾಗಿ,  ನಮಗೆ ಆ ಅದ್ಭತ ಶಕ್ತಿಗಳ ಮಹಾಪೂರವಾಗಿರುವ ಪರಮಾತ್ಮನ ಅಪಾರ ಶಕ್ತಿಯ ಅರಿವಾಗುತ್ತದೆ ! ಈ ಗೊಂದಲಮಯ ವೈವಿಧ್ಯಮಯ, ಅಗಾಧ  ಪ್ರಪಂಚವನ್ನು ಮ್ಯಾನೇಜ್ ಮಾಡುವ 'ಸಿಇವೋ' ಗೆ ನಮ್ಮ ಶತ-ಶತ ನಮನಗಳು ! ಇದೇ ಪ್ರಕಾಶ್ ಇರುವ ೨೯ ಅಂತಸ್ತಿನ  ಬಹುಮಹಡಿ ಕಟ್ಟಡ. ಅವನಿರುವುದು ೩ ನೇ ಫ್ಲೋರ್. ೨ ನೇ ಫ್ಲೋರ್ ನಲ್ಲಿ 'ಸ್ವಿಮಿಂಗ್ ಪೂಲ್' ಇದೆ. ಬ್ಯಾಂಕ್, ಮಾಲ್ ಗಳು, ಎಲ್ಲಾ ಇಲ್ಲಿವೆ. 'ಫಾಲ್ಸ್ ಸೀಲಿಂಗ್ ನವೀನೀಕರಿಸುವ ಪ್ರಯತ್ನ' ಭರದಿಂದ ಸಾಗಿದೆ.                                    ೨೯ ಅಂತಸ್ತಿನ ಕಟ್ಟಡ ದೂರದಿಂದನೋಡಿದರೆ ಹೀಗೆ ಕಾಣಿಸುತ್ತೆ.                                       ...

'ಮುಂಬೈನ ಘಾಟ್ಕೋಪರ್ ನಲ್ಲಿರುವ ನಮ್ಮ ಮನೆ ದೇವಕೃಪಾ'

Image
ಮುಂಬೈನ ಘಾಟ್ಕೋಪರ್ ಪಶ್ಚಿಮದಲ್ಲಿರುವ ಹಿಮಾಲಯ ಕೋ ಆಪರೇಟೀವ್ ಹೌಸಿಂಗ್ ಸೊಸೈಟಿಯ 'ದೇವ ಕೃಪಾ ಕಟ್ಟಡ'ದ ೨ ನೆಯ ಅಂತಸ್ತಿನಲ್ಲಿ  ನಮ್ಮ ವಾಸ್ತವ್ಯ. ೨೦೧೨ ರ, ಮೇ ತಿಂಗಳಿನಲ್ಲಿ ಕಟ್ಟಡದ ದುರಸ್ತಿ ಕೆಲಸ ನಡೆಯಿತು. ಪೇಂಟಿಂಗ್ ಬಳಿಕ ಕಟ್ಟಡ ಹೀಗೆ ಕಾಣಿಸುತ್ತಿದೆ.                                                                       ದೇವ ಕೃಪಾ'                                              ತಿರುಶ್ರೀ. ಕೋ.ಹೌ. ಸೊಸೈಟಿಯ ಹಿಂಭಾಗದ ದೃಶ್ಯ

Now it is Chil. Rohan's marriage reception, and Chi. Sharavani's marriage engagement functions !

Image
We attended both the functions on 26th, April, 2012, at Pathare hall, Andheri west, Mumbai. This is Chi. Sharvani praveen, who got engaged  with  Chi. Dr. Avinash rao

ವಾರಣಾಸಿ ಯಾತ್ರೆ (೨೦೧೨) !

Image
ನಾನು ಕಾಶಿ ನೋಡಿದ್ದು ನಮ್ಮಮ್ಮನ ಜೊತೆಗೆ ಹೋದಾಗ, ಅಂದರೆ, ೧೯೭೦ ರಲ್ಲಿ. ಆಮೇಲೆ ೨೦೦೬ ರಲ್ಲಿ ಸರೋಜ, ರವಿಯ ಜೊತೆಗೂಡಿ ದೆಹಲಿ, ಜೈಪುರ, ರಾಜಾಸ್ಥಾನ, ಆಗ್ರ, ಮೊದಲಾದ ಸ್ಥಳಗಳನ್ನು ನೋಡಿಕೊಂಡು ಬಂದೆವು. ಆಗ ರವಿ ದೆಹಲಿಯ ಐ.ಐ.ಟಿ. ಯಲ್ಲಿ ಎಂ.ಬಿ.ಎ. ವ್ಯಾಸಂಗ ಮಾಡುತ್ತಿದ್ದ. ಹೆಚ್ಚು ದಿನಗಳನ್ನು ನಾವು ದೆಹಲಿಯಲ್ಲೇ ಕಳೆದೆವು. ದುರ್ದೈವದಿಂದ ನಾವು ಇಳಿದುಕೊಂಡಿದ್ದ 'ಸದರನ್ ಟ್ರಾವೆಲ್ಸ್' ನ ಹತ್ತಿರದಲ್ಲೇ ಇದ್ದ, 'ಸರೋಜಿನಿ ಮಾರ್ಕೆಟ್ ನಲ್ಲಿ ಬಾಂಬ್ ಸ್ಪೋಟ'ದ ಘಟನೆ ನಮ್ಮನ್ನು ಕಂಗೆಡಿಸಿತ್ತು. ಯಾಕೋ ಮತ್ತೆ ಮುಂದು ವರೆದು ಕಾಶಿಗೆ ಹೋಗಲು ಮನಸ್ಸು ಒಪ್ಪಲಿಲ್ಲ. ಮನೆ ಸೇರಿಕೊಂಡರೆ ಸಾಕಪ್ಪ ಅನ್ನಿಸಿತ್ತು. ಹಾಗಾಗಿ ನಾವು ಮುಂಬೈಗೆ ವಾಪಸ್ ಆದೆವು. ಪುನಃ ವಾರಣಾಸಿ ದರ್ಶನ ಲಭ್ಯವಾಗಲು ನಾವು ೬ ವರ್ಷ ಕಾಯಬೇಕಾಯಿತು. ಒಟ್ಟಿನಲ್ಲಿ ನಮಗೆ ಯಾವ ಅನಾನುಕೂಲಗಳು ಆಗದೆ, ಯಾತ್ರೆಯನ್ನು ಮುಗಿಸಿ, ಸುಖವಾಗಿ ವಾಪಸ್ ಆದೆವು. ದೆಹಲಿ-ಅಲಹಾಬಾದ್- ವಾರಣಾಸಿ-ಗಯಾ-ಬೋಧ್ ಗಯಾ, ಅಯೋಧ್ಯಾ-ದೆಹಲಿ- ಒಟ್ಟು ೮ ದಿನ ಹಾಗೂ ೭ ರಾತ್ರಿಗಳು :                                              ಸದರನ್ ಟ್ರಾವೆಲ್ಸ್ , ದೆಹಲಿಯ ಕರೋಲ್ ಬಾಗ್ ನಲ್ಲಿದೆ.     ಗಂಗಾನದಿಯ ಮೇಲೆ, ದೋಣಿಯಲ್ಲಿ... ...