Posts

Visit to Chi. Shubhang's house at IIT, Mumbai !

Image
ದೀಪಾವಳಿ ಆದಮೇಲೆ ನವೆಂಬರ್, ೧೧ ನೇ ತಾರೀಖು ೨೦೧೮  ರಂದು (ರವಿವಾರ) ನಾವು ಲಕ್ಷ್ಮಿ ಮನೆಗೆ ಹೋದೆವು, ಮನೆಯಲ್ಲಿ ಶಾಮ್ ಮತ್ತು ಶುಭಾಂಗ, ಲಕ್ಷ್ಮಿ  ಇದ್ದರು. ಶುಭಾಂಗ ಸ್ವಲ್ಪ ಎತ್ತರ ಆಗಿದಾನೆ. ಮಾತು ಭಾಳ ಆಡ್ತಾನೆ.  ೨ ಗಂಟೆಗೆ ಊಟ. ಸ್ವಲ್ಪ ಹೊತ್ತು ಮಲಗಿದ್ವಿ. ಏನೂ ಪಲ್ಯೂಷನ್ ಇಲ್ಲ. ಅಲ್ಲಿ ಇಲ್ಲಿ ಸ್ವಲ್ಪ ಪಟಾಕಿ ಶಬ್ದ ಬಿಟ್ಟರೆ ಶಾಂತ ವಾದ ವಾತಾವರಣ ! ಒಟ್ಟು ಕ್ಯಾಮ್ಪಸ್ ೫೦೦ ಕಿ.ಮೀ ವಿಸ್ತೀರ್ಣವಿದೆಯಂತೆ ! ಕನ್ನಡದಲ್ಲಿ ಮಾತು ಕತೆ ಆಡಿದ್ದು ಮುದಕೊಟ್ಟಿತು. ಅವರ ತಾಯಿ ಮನೆಕಡೆಯ ಪದ್ಧತಿಗಳು  ಅಡುಗೆ ವಿಧಾನಗಳು, ಕೇಕ್ ತಯಾರಿಕೆ ಇತ್ಯಾದಿ (ಕೇಕ್ ನನಿಗೆ ಬಹಳ ಇಷ್ಟ ಆಯ್ತು) ಈ ಬಾರಿ ಲಕ್ಷ್ಮಿ ಊರಿನ ದೇವರ ಮದುವೆ ವಿಷಯ ಕೇಳಿ ನಾವೂ ಹೋಗಬೇಕು ಅನ್ನಿಸಿತು.ಹರಿಹರದಲ್ಲಿ  ಅಮ್ಮನ ಮನೆ ಗೃಹ ಪ್ರವೇಶ, (ವಿಶ್ವನಾಥ್, ಸ್ಮಿತಾ, ಅನೀಶ್  ನೋಡಿದ್ದು ಚೆನ್ನಾಗಿತ್ತು. ನಾಗಕ್ಕನ್ನ ನೋಡಿ ಬಹಳ ದಿನಗಳೇ ಆಗಿತ್ತು.  ಮತ್ತು ಗಿರಿಜಾ ಕಲ್ಯಾಣದ ಹಲವು ಮಜಲುಗಳನ್ನೊಳಗೊಂಡ ವಿಡಿಯೋ ಚಿತ್ರಗಳು ಬಹಳ ಚೆನ್ನಾಗಿದ್ದವು                                                                ...

Sow Shobha, Chi. Sow, Anusha and Chi. Trisha visits !

Image
 On 22nd, Sept, 2018, Saturday.. .

ಮುಂಬಯಿನಲ್ಲಿ ನಾವಿಬ್ಬರೂ (ಸೌ ಸರೋಜಾ ಮತ್ತು ನಾನು), ಶಂಕರಣ್ಣ ಮತ್ತು ಚಿ. ಸೌ ಗೀತಾರವರ ಜೊತೆ ಪಗಡೆ ಆಟ ಆಡಿದ ಸವಿ ನೆನೆಪು !

Image
ನಮ್ಮ ಚಿಕ್ಕಮ್ಮ ಪದ್ದಮ್ಮನವರ ಜೊತೆ (ಅವನಿಗೆ ಅಜ್ಜಿಯಾಗಬೇಕು)  ಶಂಕರಣ್ಣ ಪಗಡೆ ಆಟ ಆಡುತ್ತಿದ್ದನ್ನು ನಾನು ಹೊಳಲ್ಕೆರೆಯಲ್ಲಿ ನೋಡಿದ್ದೆ. ಆಮೇಲೆ ಅದನ್ನು ಆಡಿದ್ದರ ಬಗ್ಗೆ ನಾವಿಬ್ಬರೂ ಚರ್ಚಿಸಿಲ್ಲ. ಈಗ ಮಕ್ಕಳಿಗೆ ಅದನ್ನು ಆಡಲು ಸಮಯವಿಲ್ಲ. ಅಲ್ಲದೆ ಈಗಿನ ಆಟಗಳೇ ಬೇರೆ. ಎಲ್ಲಕ್ಕೂ ಹೆಚ್ಚಾಗಿ ಮೊಬೈಲ್, ಕಂಪ್ಯೂಟರ್  ಮತ್ತು ಟೆಲಿವಿಷನ್  ಗಳು ಪರಿವಾರದ ಸಮಯವನ್ನೆಲ್ಲ ನುಂಗಿಹಾಕಿದೆ ಎಂದು ನಾವು ಅಂದರೆ, ನಮ್ಮ ಮಕ್ಕಳು ಅದನ್ನು ಒಪ್ಪುವುದಿಲ್ಲ.  ಪಗಡೆ ಆಟ ನಾವು ಚಿಕ್ಕವರಾಗಿದ್ದಾಗಿನಿಂದಲೂ ಆಡ್ತಾ ಬಂದ ಆಟ. ನಾವಿದ್ದ ಹೊಳಲ್ಕೆರೆ ಅಥವಾ ಕಾಳಘಟ್ಟದಲ್ಲಿ ಇನ್ಯಾವ ಆಟ ಸಿಕ್ತಿತ್ತು ಆಡಕ್ಕೆ ? ಕುಂಟೆಬಿಲ್ಲೆ, ಚಿನ್ನಿದಾಂಡು, ಉಡ್ತುತ್ತಿ, ಲಗ್ಗೋರಿ, ಗೊಟಗೋಣಿ ಮಣೆ ಚೌಕಬರೆ ಅಷ್ಟೇ. ನಾನು ಚಂದ್ರಣ್ಣ ಸೇರಿ 'ಟ್ರೇಡ್ ಅನ್ನೋ ಆಟ' ಹೇಗೋ ಕಲ್ತಿದ್ವಿ. ಎಲೆಕ್ಟ್ರಿಕ್ ಲೈಟ್ ಇಲ್ಲದ ಕಾಲದಲ್ಲಿ ರೇಡಿಯೊ, ಟಿವಿ, ಎಲ್ಲಿ ಬರ್ಬೇಕು, ಮರಕೋತಿ ಆಟ, ಫುಟ್ಬಾಲ್ ಆಡ್ತಿದ್ವಿ. ಕ್ರಿಕೆಟ್ ಅಂತ ಆಟ ಗೊತ್ತಾದ್ದು ನಮ್ಮ ಊರಿನ ಶಿವಮೂರ್ತಿ ಅನ್ನೊ ಟೈಲರ್ ಹುಡ್ಗ್ನಿಂದ. ಅವರೆಲ್ಲಾ ಮಹಾರಾಷ್ಟ್ರದೋರು. ಗವಸ್ಕರ್, ಅಜಿತ್ ವಾಡೇಕರ್, ಹೆಸರು ಕೇಳ್ದೋರು ! ನಾವು ಬೊಂಬಾಯ್ನಲ್ಲಿ ಪಗಡೆ ಆಟ ಆಡಕ್ಕೆ ಕೂತಾಗ ಹಳೆಯ ಬಾಲ್ಯದ ನೆನಪಿನ ಸುರಳಿಗಳು ಹಾಗೆಯೇ ಮನಸ್ಸಿನ ಪರದೆಯಮೇಲೆ ಹಾದು ಹೋದವು. ಅಮ್ಮ ಅ...

ಚಿ. ನಾರಾಯಣ್, ಶ್ರೀಮತಿ, ಗಾಯಿತ್ರಿ ನಾರಾಯಣ್ ೨೦೧೮ ರ ಜೂನ್ ೯ ರಂದು ಭೇಟಿಕೊಟ್ಟಿದ್ದರು.

Image
ಚಿ. ನಾರಾಯಣ್, ಶ್ರೀಮತಿ, ಗಾಯಿತ್ರಿ ನಾರಾಯಣ್ ೨೦೧೮ ರ ಜೂನ್ ೯ ರಂದು ಭೇಟಿಕೊಟ್ಟಿದ್ದರು. ನಂತರ ಚಿ. ಶ್ಯಾಮ್, ಚಿ.ಸೌ. ಲಕ್ಷ್ಮಿ,ಮತ್ತು ಚಿ. ಶುಭಾಂಗ ಬಂದರು. ಇವತ್ತು ಬೆಳಿಗ್ಯೆ ಹಿಡಿದ ಮಳೆ ಬಿಡಲೇ ಇಲ್ಲ. ಬಿಟ್ಟು ಬಿಟ್ಟು ಬರುತ್ತಿತ್ತು. ಶ್ಯಾಮ್ ಬರುವಾಗ ಮಧ್ಯೆ ದಾರಿತಪ್ಪಿ ಅತ್ತ-ಇತ್ತ ಹೋದರೂ  ನಂತರ ಸರಿಯಾಗಿ ಮನೆಗೆ ಬಂದರು. ತುಂಬಾ ಸಮಯದ ಮೇಲೆ ಅವರನ್ನುಭೇಟಿಯಾಗಿದ್ದು ಮುದಕೊಟ್ಟಿತು.  ಚಿ . ಶುಭಾಂಗ ಸ್ವಲ್ಪ ಎತ್ತರ ಬೆಳೆದಿದ್ದಾನೆ., ಈಗ ಎಲ್. ಕೆ. ಜಿಗೆ ಹೋಗುತ್ತಿದ್ದಾನೆ. ಹೆಚ್ಚಿನ ಬೆಳವಣಿಗೆ ಕಾಣಿಸುತ್ತಿದೆ.  ನಾರಾಯಣ್, ಮತ್ತು ಗಾಯಿತ್ರಿ ಕೈಲಿ ಹಾಡು ಹೇಳಿಸಿ, ರೆಕಾರ್ಡ್ ಮಾಡಿಕೊಂಡೆ. ನಮ್ಮ ಬಿಲ್ಡಿಂಗ್ ನಲ್ಲಿ ಕೆಲಸನಡೆಯುತ್ತಿದ್ದು, ಅಲ್ಲಿನ ಶಬ್ದದಿಂದಾಗಿ ರೆರ್ಡಿಂಗ್ ಸರಿಯಾಗಿ ಕೇಳಿಸುತ್ತಿಲ್ಲ.   ಶುಭಾಂಗ ,ಕಿಟಕಿಯ ಮುಂದೆ ನಿಂತಿದ್ದಾನೆ. ಈ ಕಿಟಕಿ ನಡುಮನೆ ಅಡುಗೆ ಮನೆಯ ಮಧ್ಯದ ಗೋಡೆಗೆ ಹೊಂದಿಕೊಂಡಂತಿದೆ .  Link :  1.  https://photos.app.goo.gl/vJbhN7CSCvJn8KLNA ದಿವಂಗತ ಮೊಹಮ್ಮದ್ ರಫಿಯವರ ಗೀತೆಗಳೇ ಹಾಗೆ !  ಗಝಲ್, ಸುಗಮ ಸಂಗೀತ್, ಶಾಸ್ತ್ರೀಯ ಸಂಗೀತ, ಉತ್ತರಾದಿ, ದಕ್ಷಿಣಾದಿ ಸಂಗೀತ ವಲಯದಲ್ಲಿ ಕೃಷಿಮಾಡಿ ಚೆನ್ನಾಗಿ ಹೇಳುವ ಅಭ್ಯಾಸ ಮಾಡಿಕೊಂಡಿದ್ದರು.  'ಹರಿ ಓಂ ಮನ...  ಹಾಡನ್ನು ಚಿ. ನಾರಾಯಣ ಸು...

Exam results are in favor of Girls !

Image
In our Family, Four girls have appeared for Exams : 1. Chi, Gauri raghavendra, PUC 2. Chi. Amrutha prasad  SSLC 3. Chi.Akshata  :    SSLC 4. Chi Gagana Sreedhar : CBSC  5. Chi. Harshita Chi. Amritha  prasad with her parents.                  Chi. Harshitha  receiving PUC Merit Certificate

ಯುಗಾದಿ ಹಬ್ಬ ೨೦೧೮ :

Image
ಯುಗಾದಿ ಹಬ್ಬ ೨೦೧೮ : Courtesy :Daily express. Courtesy : Google photos.com ವರಕವಿ ಡಾ. ದತ್ತಾತ್ರೇಯ ರಾಮಚಂದ್ರ ಬೆಂದ್ರೆಯವರ ಎಂದೂ  ಮರೆಯದ ಈ ಗೀತೆಯಿಲ್ಲದೆ ಹೊಸವರ್ಷದ ಆಚರಣೆಯಾದರೂ ಹೇಗೆ ಸಾಧ್ಯ ? "ಯುಗ ಯುಗಗಳು ಕಳೆದರೂ ಯುಗಾದಿ ಮರಳಿ ಬರುತಿದೆ. ಹೊಸ ವರುಷವು ಹೊಸ ಹರುಷವ, ಹೊಸತು ಹೊಸತು ತರುತಿದೆ " ! ಹಳ್ಳಿಯಿರಲಿ, ದಿಳ್ಳಿಯಿರಲಿ, ವಿದೇಶವಿರಲಿ, ಯುಗಾದಿ ಹಬ್ಬದ ಸಡಗರ ಆಚರಿಸುವ ವಿಧಿ ವಿಧಾನಗಳು ಎಂದಿನಂತೆಯೇ ಇರುತ್ತವೆ. ನಮ್ಮ ಹರ್ಷ, ಅಜಿತಾ, ಮುದ್ದು ಗೌರಿ, ಅಮೆರಿಕದಲ್ಲಿದ್ದರೂ ಹಬ್ಬದ ಸಂಭ್ರಮ ಕಡಿಮೆಯಾಗುವುದಿಲ್ಲ. ಅಲ್ಲಿನ ಜನ ಸನ್ನಿವೇಶಗಳನ್ನು ಗಮನಕ್ಕೆ ತೆಗೆದುಕೊಂಡು ಅಲ್ಪ ಸ್ವಲ್ಪ ಬದಲಾವಣೆಗಳನ್ನು ಬಿಟ್ಟರೆ, ಎಲ್ಲವೂ ಹಾಗೆಯೇ ಹಿಂದಿದ್ದಂತೆಯೇ ಇರುತ್ತವೆ.  ಕರ್ನಾಟಕದಲ್ಲಿ ಯುಗಾದಿಯ ಆಚರಣೆ : 'ಯುಗಾದಿ' ಅಥವಾ 'ಉಗಾದಿ', ಎಂದು ಕರೆಯಲ್ಪಡುವ  ಈ ಹಬ್ಬ, ಭಾರತದ ಬಹುತೇಕ ಭಾಗಗಳಲ್ಲಿ ಚೈತ್ರ ಮಾಸದ ಮೊದಲ ದಿನದ ಎಂದು ಆಚರಿಸಿಕೊಳ್ಳಲಾಗುತ್ತದೆ. ಪ್ರಮುಖವಾಗಿ ಈ ಹಬ್ಬವನ್ನು  ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಲ್ಲಿ ಹೊಸ ವರ್ಷದ ಹಬ್ಬ ಎಂದು ಆಚರಿಸುತ್ತಾರೆ. ಸಾಮಾನ್ಯವಾಗಿ ಈ ಹಬ್ಬವು ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಮಾರ್ಚ್, ಅಥವಾ ಏಪ್ರಿಲ್ ತಿಂಗಳಲ್ಲಿ ಹೆಚ್ಚಾಗಿ ಬರುತ್ತದೆ. ಈ ಸಂದರ್ಭದಲ್ಲಿ ಪಂಚಾಂಗದ ಪೂಜೆ, ಹಾ...

House repair work January 2018-march, 2018 !

Image