Posts

ಪ್ರೊ. ಎಚ್. ಆರ್. ರಾಮಕೃಷ್ಣರಾಯರ ನೆನಪಿನಲ್ಲಿ "ನುಡಿನಮನ ಕಾರ್ಯಕ್ರಮವನ್ನುಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು" !

Image
ಮನೆಯ ಪರಿವಾರದವರು ಬಂಧು ಮಿತ್ರರು ಮತ್ತು ಗೆಳೆಯರು, ಹಿತೈಷಿಗಳೆಲ್ಲಾ ಸೇರಿ,  ಬೆಂಗಳೂರಿನ ಉದಯಭಾನು ಕಲಾಸಂಘದಲ್ಲಿ   "ನುಡಿ ನಮನ" ಕಾರ್ಯಕ್ರಮವನ್ನು ಆಯೋಜಿಸಿದ್ದರು.  (ಉದಯಭಾನು ಕಲಾ ಸಂಸ್ಥೆಯವರಿಗೆ ಧನ್ಯವಾದಗಳು)  ಮುಂಬಯಿನಿಂದ ವೀಕ್ಷಿಸುತ್ತಿದ್ದ ನನಗೆ ಕಾರ್ಯಕ್ರಮ ಕಂಡಿದ್ದು/ತಿಳಿದಿದ್ದು ಹೀಗೆ : ಸದಾ ವಿಜ್ಞಾನ, ಸಾಹಿತ್ಯ, ಭಾರತೀಯ ಸಂಸ್ಕೃತಿಯನ್ನು ಮೈಗೆ ಅಳವಡಿಸಿಕೊಂಡು ಜೀವನಾಸಕ್ತಿಯ ಚಿಲುಮೆಯಂತಿದ್ದ ರಾಮಕೃಷ್ಣ ನಮ್ಮ ಮನಸ್ಸಿನಲ್ಲಿ ಸದಾ ಇದೇತರಹದ ಭಿತ್ತಿ ಚಿತ್ರವನ್ನು ನಮ್ಮ ಮೈಮನಗಳಲ್ಲಿ ಮೂಡಿಸಿದ್ದಾನೆ-ದೂರದಲ್ಲಿದ್ದರೂ, ಮನಸ್ಸೆಲ್ಲ ಇಲ್ಲಿಯೇ ಮನೆಮಾಡಿತ್ತು -ಚಂದ್ರಶೇಖರ, ಮತ್ತು ಲಕ್ಷ್ಮೀವೆಂಕಟೇಶ ಮತ್ತು ಇವರ ಪರಿವಾರ. (ರಾಯರ ಪ್ರೀತಿಯ ತಮ್ಮಂದಿರು)  ಮಕ್ಕಳು ಅಳಿಯಂದಿರು, ಮೊಮ್ಮಕ್ಕಳು ಸಹಜವಾಗಿಯೇ ಈ ಸಂಸ್ಮರಣ ಕಾರ್ಯಕ್ರಮದಲ್ಲಿ ಆಸಕ್ತಿವಹಿಸಿದ್ದಾರೆ. ಉದಯಭಾನು ಕಲಾಸಂಘದ ಅಧ್ಯಕ್ಷ ಶ್ರೀ. ನರಸಿಂಹ  ಮತ್ತು ಅವರ ಸಿಬ್ಬಂದಿವರ್ಗದವರೂ, ವಿಶೇಷ ಕಾಳಜಿ, ಆಸಕ್ತಿಯನ್ನು ವಹಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟರು. 

-ನನ್ನ ಪ್ರೀತಿಯ ರಮಾಮಣಿ ಅತ್ತಿಗೆ ಇನ್ನಿಲ್ಲ !

Image
ನನ್ನ ಪ್ರೀತಿಯ  ಶ್ರೀಮತಿ. ಎಚ್. ಕೆ. ರಮಾದೇವಿ  (ಹದಡಿ ರಮಾಮಣಿ )  ಅತ್ತಿಗೆ  ೨೯, ಶನಿವಾರ,  ಅಕ್ಟೋ ಬರ್, ೨೦೨೨ ರಂದು ಪ್ರಾತಃಕಾಲ, ಕೋಲಾರದಲ್ಲಿ  ನಿಧನರಾದರು.    ೮೪ ವರ್ಷದ ಅತ್ತಿಗೆಯವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹೋದವರು ಕೋಲಾರಕ್ಕೆ ವಾಪಸ್ಸಾಗಿದ್ದರು. ಆದರೆ ಶನಿವಾರ, ಅಕ್ಟೋಬರ್ ೨೯ ರ ಪ್ರಾತಃಕಾಲ ತಮ್ಮ ಸ್ವಗೃಹದಲ್ಲೇ ನಿಧನರಾದರು.  ಮೃತರ ಆತ್ಮಕ್ಕೆ ಶಾಂತಿ ಸಿಗಲಿ.  - ಮಕ್ಕಳು,ಬಂಧುಗಳು ಮತ್ತು ಅಪಾರ ಸ್ನೇಹಿತರು.  ನಮ್ಮ ಪೂಜ್ಯ ತಾಯಿಯವರಾದ *ಎಚ್.ಕೆ. ರಮಾದೇವಿ *(ಹದಡಿ ರಮಾಮಣಿ) ಅವರು ದಿನಾಂಕ 29-10-2022ರಂದು ಶನಿವಾರ ಮುಂಜಾನೆ ದೈವಾಧೀನರಾದರು. ತತ್ಸಂಬಂಧವಾಗಿ ಉತ್ತರಕ್ರಿಯಾದಿ ಕಾರ್ಯಗಳನ್ನು ಈ ಕೆಳಕಂಡಂತೆ ಆಯೋಜಿಸಲಾಗಿದೆ. ದಿನಾಂಕ 7-11-2022 ಸೋಮವಾರ *ಧರ್ಮೋದಕ* ಸ್ಥಳ : ದತ್ತಾತ್ರೇಯ ಶ್ರಾದ್ಧ ಭವನ, ಟೇಕಲ್ ರಸ್ತೆ, ಸೇಂಟ್‌ ಆನ್ಸ್‌ ಶಾಲೆ ಹಿಂಭಾಗ, ಕೋಲಾರ ದಿನಾಂಕ 9-11-2022 ಬುಧವಾರ * ಸಪಿಂಡೀಕರಣ ,ಮಾಸಿಕ* ಸ್ಥಳ : ದತ್ತಾತ್ರೇಯ ಶ್ರಾದ್ಧ ಭವನ, ಟೇಕಲ್ ರಸ್ತೆ, ಸೇಂಟ್ ಆನ್ಸ್ ಶಾಲೆ ಹಿಂಭಾಗ, ಕೋಲಾರ. ದಿನಾಂಕ 10-11-2022 ಗುರುವಾರ * ವೈಕುಂಠ ಸಮಾರಾಧನೆ* ಸ್ಥಳ  : ಶೃಂಗೇರಿ ಶಂಕರ ಮಠ, ಕೋಟೆ, ಕೋಲಾರ -ಎಚ್.ಕೆ. ರಾಘವೇಂದ್ರ  ಮೊಬೈಲ್ ನಂಬರ್ಸ್  : 9036617715 9449974023*

ಕರ್ಣಾಟಕ ಭಾಗವತ ಪಠಣ ; ಸಂಪುಟ ೧ ಮತ್ತು ೨ !

Image
                      ಕರ್ಣಾಟಕ ಭಾಗವತ ಪಠಣ ; ಸಂಪುಟ ೧ ಮತ್ತು ೨  "ಕರ್ಣಾಟಕ ಭಾಗವತ" ಪುಸ್ತಕದ ಸಂಪುಟಗಳನ್ನು ಓದಲು ಕುಳಿತಾಗ, ಆಗುವ ಆನಂದ ಅಪರಿಮಿತ. ಕಾರಣ : ೧. ಕನ್ನಡದಲ್ಲಿ ಲಭ್ಯವಿರುವ ಭಾಗವತದ ಗ್ರಂಥಗಳು, ಮಾಹಿತಿಗಳ ಆಗರವಾಗಿದ್ದರೂ ಹೊರಗೆ ನೋಡಲು ಆಕರ್ಷಣೆ ಇರುವುದಿಲ್ಲ. ಬಳಸಿದ ಕಾಗದದಗುಣಮಟ್ಟ ಕಡಿಮೆ.  ಮುದ್ರಿಸಿದ ಅಕ್ಷರಗಳು ಬಹಳ ಸ್ಫಟವಾಗಿರುವುದಿಲ್ಲ.  ಆದರೆ ನಾವು ನೋಡುತ್ತಿರುವ ಈ ಭಾಗವತ ಪುಸ್ತಕ, ಅನೇಕ ವಿಶೇಷತೆಗಳನ್ನು ಹೊಂದಿದ್ದು, ಅದನ್ನು ಓದುವುದೇ ಒಂದು ಸಂತಸದ ವಿಷಯ.  ೧. ನಮ್ಮ ದೇಶದ ಭಾಗವತ ಗ್ರಂಥಗಳ ಉಗಮ, ಮತ್ತು ಉಪಲಬ್ಧವಿರುವ ಸಂಪುಟಗಳು, ಕ್ಲಿಷ್ಟ ಪದಗಳ ಅರ್ಥ ವಿವರಣೆ,  ಇದರ ಜತೆಗೆ. ಸೇರಿದ ಹಲವು ವಿಷಯಗಳ ಬಗ್ಗೆ ಸಂಶೋಧನೆ, ಸಂದರ್ಭಯೋಚಿತವಾಗಿ ಬಳಸಿರುವ, ನಮ್ಮ ನಾಡಿನ ಹೆಸರಾಂತ  ದೇವಾಲಯಗಳ  ಉತ್ಕೃಷ್ಟ  ಭಿತ್ತಿ  ಚಿತ್ರಗಳು, ಉಲ್ಲೇಖಗಳು, ಯುವ ಓದುಗರಿಗೂ ಆಸಕ್ತಿಯನ್ನು ಒದಗಿಸುತ್ತವೆ.  ಪುಸ್ತಕದ ಬಗ್ಗೆ ಹೇಳುವುದೇ ಬೇಡ; ಈಗ ಜಾಗತಿಕ ನಿಲವಿನಲ್ಲಿ ಮೇರು ಸ್ಥಾನವನ್ನು ಗಳಿಸಿರುವ ಬ್ರಿಟಾನಿಕಾ ವಿಶ್ವಕೋಶ ವನ್ನು ಹೋಲುವ ಪ್ರತಿ ಕನ್ನಡದಲ್ಲಿ ಯಾವುದಾದರೂ ಕೃತಿ ಇದ್ದರೆ, ಅದು ಕರ್ಣಾಟಕ ಭಾಗವತವೆಂದು ಘಂಟಾಘೋಷವಾಗಿ ಹೇಳಬಹುದು...

ಚಿತ್ರದುರ್ಗ ಜಿಲ್ಲೆಯ, ಹೊಳಲ್ಕೆರೆ ನಗರದ ಶ್ರೀ ನೀಲಕಂಠೇಶ್ವರ ಸ್ವಾಮಿಯ ಪುನರ್ಪ್ರತಿಷ್ಠಾಪನಾ ಕಾರ್ಯಕ್ರಮ !

Image
Link :  https://photos.app.goo.gl/uRmjt9jXziaiT2Jz5 ಕ್ರಿ. ಶ. ೧೬೨೦ ರಲ್ಲಿ ಶ್ರೀ. ತಿಮ್ಮಪ್ಪನವರು ಶ್ರೀ. ನೀಲಕಂಠೇಶ್ವರ ದೇವಾಲಯ ಹಾಗೂ ಕಲ್ಯಾಣಿಯನ್ನು ಕಟ್ಟಿಸಿದರು.   ಬಹಳ ವರ್ಷಗಳ ಹೊಳಲ್ಕೆರೆ ನಿವಾಸಿಗಳ ಬಾಯಾರಿಕೆಯ ಫಲವಾಗಿ, ಶ್ರೀ ನಟರಾಜ್ ಜಮದಗ್ನಿಯವರ ಶ್ರದ್ಧೆ, ಪ್ರಾಮಾಣಿಕ ಪ್ರಯತ್ನ, ಮತ್ತು ನೇತೃತ್ವದಿಂದಾಗಿ ೨೦೨೨ ರ ಮೇ ೨೩ ಸೋಮವಾರದಂದು ಸ್ವಾಮಿಯ ಪುನರ್ಪ್ರತಿಷ್ಠಾಪನಾ ಕಾರ್ಯ, ಸಾಂಗವಾಗಿ ನೆರವೇರಲಿದೆ.  ಚಿತ್ರದುರ್ಗ ಜಿಲ್ಲೆಯ, ಹೊಳಲ್ಕೆರೆ ನಗರದ ಶ್ರೀ ನೀಲಕಂಠೇಶ್ವರ ಸ್ವಾಮಿಯ ಪುನರ್ಪ್ರತಿಷ್ಠಾಪನಾ ಕಾರ್ಯಕ್ರಮ ೨೩, ಮೇ ಸೋಮವಾರ,  ೨೦೨೨ ರಿಂದ ೨೫, ಮೇ ೨೦೨೨ ರ ಬುಧವಾರದವರೆವಿಗೆ  ಪರಮಪೂಜ್ಯ ಸ್ವಾಮಿಗಳ  ದಿವ್ಯ ಸಾನ್ನಿಧ್ಯ, ಹಾಗೂ ನೇತೃತ್ವದಲ್ಲಿ  ಪೂಜಿಸಲ್ಪಟ್ಟು ಜರುಗಲಿದೆ.   ವಿವರಗಳು ಆಹ್ವಾನ ಪತ್ರಿಕೆಯಲ್ಲಿ ಕೊಡಲ್ಪಟ್ಟಿದೆ. ಭಕ್ತಾದಿಗಳು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ನೀಲಕಂಠೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಕೋರಿಕೆ.  -ಶ್ರೀ ನಟರಾಜ್, ಕಾರ್ಯನಿರ್ವಾಹಕರು. ಶ್ರೀನೀಲಕಂಠೇಶ್ವರ ಸ್ವಾಮಿ ದೇವಾಲಯದ ಕಾರ್ಯಕಾರಿ ಸಮಿತಿ, ಹೊಳಲ್ಕೆರೆ