ನಮ್ಮೆಲ್ಲರ ಪ್ರೀತಿಯ ನಗುಮುಖದ ’ಕೆ.ಟಿ.ವೆಂಕಟೇಶ್ !
’ಕೆ.ಟಿ.ವೆಂಕಟೇಶ್ ರ ವರ್ಷಾಂತ್ಯದ ಪುಣ್ಯ ತಿಥಿ’ ಸನ್.೨೦೧೩ ರ ಜುಲೈ ತಿಂಗಳ ೨೩, ೨೪, ಮತ್ತು ೨೫ ರಂದು ದಾವಣಗೆರೆಯ ಶಂಕರಮಠದಲ್ಲಿ ಆಚರಿಸಲಾಗುತ್ತಿದೆ. ವೆಂಕಟೇಶ್ ಸದಾ ಹಸನ್ಮುಖಿ. ಅವರು ಮನೆಯವರ ಜೊತೆಯಲ್ಲೆಲ್ಲಾ ನಗುನಗುತ್ತಾ ಸ್ನೇಹಿತರ ಜೊತೆ, ಆಫೀಸಿನ ಸಹೋದ್ಯೋಗಿಗಳ ಜೊತೆ ಪ್ರೀತಿಯಿಂದ ವರ್ತಿಸಿ, ತಮ್ಮ ಕೆಲಸದಲ್ಲಿ ಒಳ್ಳೆಯ ಹೆಸರನ್ನು ತೆಗೆದುಕೊಂಡಿದ್ದರು. ಅವರ ಅನುಪಸ್ಥಿತಿ ನಮಗೆಲ್ಲಾ ಉಸಿರುಕಟ್ಟುವಂತಹ ಸನ್ನಿವೇಶವನ್ನು ತಂದಿದೆ. ಅವರ ಪರಿವಾರಕ್ಕೆ ನಮ್ಮ ಸಹಾನುಭೂತಿಗಳು. ಮೃತರ ಆತ್ಮಕ್ಕೆ ಶಾಂತಿಸಿಗಲಿ.... ಚಿ . ದಿವ್ಯಾ ಮದುವೆಯಲ್ಲಿ ಎಲ್ಲರ ಜೊತೆ ಉತ್ಸಾಹದ ಚಿಲುಮೆಯಾಗಿ ನಗುನಗುತ್ತಾ ಓಡಾಡುತ್ತಿದ್ದ ವೆಂಕಟೇಶ್ ಈಗೆಲ್ಲಿ ? ಸುಖೀ ಸಂಸಾರದ ಸದಸ್ಯರ ಜೊತೆ ಯಲ್ಲಿ ಕುಳಿತಿರುವ ಈ ಚಿತ್ರತೆಗೆಯುವ ಪುಣ್ಯ ನನಗೆ ಸಿಕ್ಕಿತು . ನಾನೊಬ್ಬನೇ ಒಮ್ಮೆ ಶಿವ ಮೊಗ್ಗಕ್ಕೆ ಹೋಗಿದ್ದಾಗ ದಾರಿಯಲ್ಲಿ ದಾವಣಗೆರೆಯಲ್ಲಿ ವೆಂಕಟೇಶ್ ರ ಮನೆಗೆ ಬಂದಿದ್ದೆ . ...