ನಮ್ಮೆಲ್ಲರ ಪ್ರೀತಿಯ ನಗುಮುಖದ ’ಕೆ.ಟಿ.ವೆಂಕಟೇಶ್ !

’ಕೆ.ಟಿ.ವೆಂಕಟೇಶ್ ರ ವರ್ಷಾಂತ್ಯದ ಪುಣ್ಯ ತಿಥಿ’ ಸನ್.೨೦೧೩ ರ ಜುಲೈ ತಿಂಗಳ ೨೩, ೨೪, ಮತ್ತು ೨೫ ರಂದು ದಾವಣಗೆರೆಯ ಶಂಕರಮಠದಲ್ಲಿ ಆಚರಿಸಲಾಗುತ್ತಿದೆ.
ವೆಂಕಟೇಶ್ ಸದಾ ಹಸನ್ಮುಖಿ. ಅವರು ಮನೆಯವರ ಜೊತೆಯಲ್ಲೆಲ್ಲಾ ನಗುನಗುತ್ತಾ ಸ್ನೇಹಿತರ ಜೊತೆ, ಆಫೀಸಿನ ಸಹೋದ್ಯೋಗಿಗಳ ಜೊತೆ ಪ್ರೀತಿಯಿಂದ ವರ್ತಿಸಿ, ತಮ್ಮ ಕೆಲಸದಲ್ಲಿ ಒಳ್ಳೆಯ ಹೆಸರನ್ನು ತೆಗೆದುಕೊಂಡಿದ್ದರು. ಅವರ ಅನುಪಸ್ಥಿತಿ ನಮಗೆಲ್ಲಾ ಉಸಿರುಕಟ್ಟುವಂತಹ ಸನ್ನಿವೇಶವನ್ನು ತಂದಿದೆ.
ಅವರ ಪರಿವಾರಕ್ಕೆ ನಮ್ಮ ಸಹಾನುಭೂತಿಗಳು. ಮೃತರ ಆತ್ಮಕ್ಕೆ ಶಾಂತಿಸಿಗಲಿ.... 
ಚಿ.ದಿವ್ಯಾ ಮದುವೆಯಲ್ಲಿ ಎಲ್ಲರ ಜೊತೆ ಉತ್ಸಾಹದ ಚಿಲುಮೆಯಾಗಿ ನಗುನಗುತ್ತಾ ಓಡಾಡುತ್ತಿದ್ದ ವೆಂಕಟೇಶ್ ಈಗೆಲ್ಲಿ ?
ಸುಖೀ ಸಂಸಾರದ ಸದಸ್ಯರ ಜೊತೆಯಲ್ಲಿ ಕುಳಿತಿರುವ  ಚಿತ್ರತೆಗೆಯುವ ಪುಣ್ಯ ನನಗೆ ಸಿಕ್ಕಿತುನಾನೊಬ್ಬನೇ ಒಮ್ಮೆ ಶಿವ ಮೊಗ್ಗಕ್ಕೆ ಹೋಗಿದ್ದಾಗ ದಾರಿಯಲ್ಲಿ ದಾವಣಗೆರೆಯಲ್ಲಿ ವೆಂಕಟೇಶ್  ಮನೆಗೆ ಬಂದಿದ್ದೆ.
                                            ದಿವ್ಯಾ ಮದುವೆಯಲ್ಲಿ ಮದುವೆಯ ಸಾಂಬಾಂಗಣದಲ್ಲಿ ..
                                             ಮದುವೆ ಮನೆಯಲ್ಲಿ ಅತ್ತಿಗೆ ಮತ್ತು ಪತ್ನಿಯ ಜೊತೆ...
ಶಿವಮೊಗ್ಗದ ವಿಪ್ರ ಟ್ರಸ್ಟ್  ಸಭಾಂಗಣದಲ್ಲಿ ಚಿ ಅರವಿಂದನ ಮದುವೆಯ ಸಮಯದಲ್ಲಿ....
                                                         ತಾಯಿಯವರ  ತಿಥಿಯ ಸಮಯದಲ್ಲಿ...
ತಾಯಿಯವರ ತಿಥಿಯ ಆಚರಣೆಯ ಸಮಯದಲ್ಲಿ ....
                                             ತಾಯಿಯವರ ತಿಥಿಯ ಕೊನೆಯ ದಿನಹರಿಹರದಲ್ಲಿ....
                                                   ತಾಯಿಯವರ ತಿಥಿಯ ಕೊನೆಯದಿನ...
                             ಇವು ಅವರ ಬಗ್ಗೆ ನಮ್ಮ ಮನಸ್ಸಿನಲ್ಲಿ ಮೂಡಿರುವ ಹಲವಾರು ಮಾನಸಿಕ ಚಿತ್ರಗಳು.
  ವೆಂಕಟೇಶ್ ನಮ್ಮೆಲ್ಲರಿಂದ ದೂರಹೋಗಿದ್ದಾರೆ; ಕಣ್ಣಿಗೆ ಮರೆಯಾಗಿದ್ದಾರೆ ಅಷ್ಟೆ. ಹಲವು ನೆನೆಪುಗಳು ಈಗಲೂ ಎಲ್ಲರನ್ನೂ   ಕಾಡಿಸುತ್ತಿವೆ. ಅದರಲ್ಲಿ ಒಂದು ನನ್ನ ಹಳೆಯ ಸಂಗ್ರಹದಲ್ಲಿ ದೊರೆತ ಚಿ.ವೆಂಕಟೇಶ್-ಸುಮಾರವರ ಮದುವೆಯ ಕರೆಯೋಲೆ.

ಈಗಾಗಲೇ ಸುಮಾರವರಿಗೆಮತ್ತು ಶ್ರೇಯಸ್ಸಿಂಧುಗೆ ಫೋನ್ ಮುಖಾಂತರ ತಿಳಿಸಿದ ಪ್ರಕಾರ ನಮಗೆ  ಸಂದರ್ಭಕ್ಕೆ ಬರಲಾಗದ್ಡಕ್ಕೆ ಕ್ಷಮೆ ಕೋರುತ್ತೇವೆ.

ನಿನ್ನೆ ಮುಂಬೈಮತ್ತು ಹತ್ತಿರದ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆ ಬೀಳುತ್ತಿತ್ತು. ಟೆಲಿವಿಶನ್ ನಲ್ಲಿ ಮಳೆಯ ಪ್ರಕೋಪವನ್ನು ಬಿತ್ತರಿಸುತ್ತಿದ್ದರು, 48  ಗಂಟೆಗಳ ಎಚ್ಚರಿಕೆ ಸಹಿತ ಕೊಟ್ಟಿದ್ದರು.

ನನ್ನ ಪರಿಸ್ಥಿತಿಯ ಕಾರಣದಿಂದಾಗಿ  ನಿರ್ಣಯ ತೆಗೆದುಕೊಳ್ಳಬೇಕಾಯಿತುರೈಲು ಮಧ್ಯದಲ್ಲಿ ಕೆಲಹೊತ್ತು ನಿಲ್ಲುವುದು ಸಾಮಾನ್ಯಅಲ್ಲಿ ಕಾಯುವುದುಆಹಾರದ ಸಮಸ್ಯೆ, ಶೌಚಾಲಯದ ಸಮಸ್ಯೆಗಳುನನ್ನ ಕಾಲುನೋವಿನ ಸಮಸ್ಯೆಗಳಿಂದ ಬರಲಾಗದೆ ಟಿಕೆಟ್ ಕ್ಯಾನ್ಸಲ್ ಮಾಡಿಸಬೇಕಾಯಿತು.

25 ದಿನಗಳ ಮೊದಲೇ ನಾವು ಆಯೋಜಿಸಿದ್ದ ಪ್ರಯಾಣ, ಹೀಗೆಕೊನೆಗಳಿಗೆಯಲ್ಲಿ ನಿಲ್ಲಿಸಬೇಕಾಗಿಬಂದಿದ್ದು ನಮ್ಮಿಬ್ಬರಿಗೂ ಬೇಸರ ತಂದಿದೆ.

ಶ್ರೀನಾಗರಾಜ್,  ಗೋಪಣ್ಣ,  ಶಂಕರಣ್ಣ,  ಅನಂತರಾಮು, ಮತ್ತು ಎಲ್ಲರಿಗೂ ತಿಳಿಸುವುದು.

ವಂದನೆಗಳು.
ಗಣಪತಿಗೆ ದೀಪ ಮೂಡಿಸಲು ತಲೆಯ ಮೇಲೆ ಟೌಲ್ ಹಾಕಿಕೊಂಡು ಕುಳಿತು ಪ್ರಯತ್ನಿಸುತ್ತಿರುವವರು ದಿವಂಗತಶ್ರೀಎಚ್ಎಸ್. ಕೃಷ್ಣಮೂರ್ತಿ ಎಂದು ಹೇಳುವ ಅವಶ್ಯಕತೆ ಇಲ್ಲ ಎನ್ನಿಸುತ್ತದೆ.


-ವೆಂಕಟೇಶಸರೋಜರವಿಮುಂಬೈ.

ಸುಬ್ಬಕ್ಕನವರ   ನೆನಪಿನ ಚಿತ್ರಗಳು ಇದರ ಜೊತೆಗೆ ಸೇರಿವೆ. ನೋಡಲು ಇಷ್ಟಪಡುವವರು  ಕೊಂಡಿಯನ್ನು ಅದುಮಿ :

https://plus.google.com/u/0/photos/117225798684059542608/albums/5653658682803006689


Comments

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !