Posts

Showing posts from July, 2016

ಶ್ರೀ ರಾಮಸ್ವಾಮಿಗಳು ಮತ್ತು ಸೌ ಸೀತಮ್ಮನವರು ನನಗೆ ದೊಡ್ಡಪ್ಪ, ಮತ್ತು ದೊಡ್ಡಮ್ಮ, ಆಗಬೇಕು !

Image
ಚಿ. ಸೌ. ಸುಬ್ಬಲಕ್ಷ್ಮಿ, ತನ್ನ ಅಜ್ಜ ಅಜ್ಜಿಯರ ಚಿತ್ರವನ್ನು 'ಫೇಸ್ಬುಕ್' ನಲ್ಲಿ ಪ್ರಕಟಿಸಿದ್ದಳು. ವರಸೆಯಲ್ಲಿ ಶ್ರೀ ರಾಮಸ್ವಾಮಿಗಳು ಮತ್ತು ಸೌ ಸೀತಮ್ಮನವರು ನನಗೆ ದೊಡ್ಡಪ್ಪ, ಮತ್ತು ದೊಡ್ಡಮ್ಮ, ಆಗಬೇಕು ! ಈ ಫೋಟೋ ನೋಡುವುದಕ್ಕಾಗಿ ನಾನು ಬಹಳ ವರ್ಷ ಕಾದಿದ್ದೆ !  ಇನ್ನೂ ಇಂತಹ ಹಳೆಯ ಅಪರೂಪದ ಫೋಟೋಗಳಿದ್ದರೆ ನನ್ನ ಗಮನಕ್ಕೆ ತಂದರೆ ಅವನ್ನು ಖಂಡಿತಾ ಈ ಬ್ಲಾಗ್ ನಲ್ಲಿ ಹಾಕುತ್ತೇನೆ. ಧನ್ಯವಾದಗಳು. (ಕೃಪೆ : ಚಿ. ಸೌ. ಸುಬ್ಬಲಕ್ಷ್ಮಿ)

ಹೊಳಲ್ಕೆರೆ ಸುಂಕದ ಶ್ಯಾನುಭೋಗರ ವಂಶದ ಶ್ರೀ. ಶಂಕರಲಿಂಗ ಭಗವಾನರು, ಜಾನಮ್ಮನವರು, ಸುಬ್ಬರಾಯರು, ಮತ್ತು ಕೃಷ್ಣಮೂರ್ತಿ, !

Image
ಈ ಅಪರೂಪದ ಫೋಟೋ ಚಿತ್ರಗಳನ್ನು ಚಿ. ಸುಬ್ಬಲಕ್ಷ್ಮಿ, ಮತ್ತು ಚಿ. ರಾಘವೇಂದ್ರ ಜೊತೆಯಲ್ಲಿ ಸೇರಿ ಸಂಪಾದಿಸಿರುತ್ತಾರೆ. ಮನೆಯಲ್ಲಿ ಫೋಟೋಗಳು ಹೆಚ್ಚಾಗಿ ಇಲ್ಲ. ಇದ್ದರೂ ಅವಕ್ಕೆ ಫ್ರೆಮ್ ಹಾಕಿರುವುದರಿಂದ ಅವನ್ನು 'ಸ್ಕಾನ್' ಮಾಡುವುದೂ ಕಷ್ಟ. ಆದರೂ ರಾಘವೇಂದ್ರ, ಮುತುವರ್ಜಿವಹಿಸಿ ಕೆಳಗಿನ ೩ ಫೋಟೋಗಳನ್ನು ಇ-ಮೇಲ್ ಮಾಡಿದ್ದಾನೆ. ಶ್ರೀ. ಎಚ್.ವಿ.ಸುಬ್ಬರಾಯರ ಹಿಂದಿನ ಫೋಟೋಗಳನ್ನು ಬಹಳ ಜನ ನೋಡಿಲ್ಲ. {ಮಾನಸಿಕ ಅಸ್ವಸ್ಥತೆಯಿಂದ ಹಲವು ವರ್ಷ ಅವರು ಬಹಳವಾಗಿ ಕಷ್ಟದ ಜೀವನ ಸಾಗಿಸಿ ನಿಧನರಾದರು) ಅವರ ಪರಿವಾರದಲ್ಲಿ ಹೆಣ್ಣು ಮಕ್ಕಳಲ್ಲಿ ಒಬ್ಬರು ಮಾತ್ರ ಜೀವಂತವಾಗಿದ್ದಾರೆ. ಇಬ್ಬರು ಗಂಡು ಮಕ್ಕಳು ನಿಧನರಾಗಿದ್ದಾರೆ. ಸುಬ್ಬರಾಯರ ಅಣ್ಣನ ಮಕ್ಕಳು ಕೆಲವರಿಗೆ ಮಾತ್ರ ಸುಬ್ಬರಾಯರ ಬಗ್ಗೆ ಗೊತ್ತಿದೆ. ಅವರ ಮೊಮ್ಮಳು ಅಜ್ಜನ ಕತೆಯನ್ನು ಕೇಳಲು ಆಸಕ್ತರಾಗಿದ್ದಾರೆ .    ಶ್ರೀ  ಸುಬ್ಬರಾಯರು, ಕುಳಿತಿರುವವರಲ್ಲಿ (ಎಡದಿಂದ ಎರಡನೆಯವರು) ' ಶ್ರೀ ಶಂಕರಲಿಂಗ ಭಗವಾನ್ ಯತಿ',ಗಳು ಸುಂಕದ ಶ್ಯಾನುಭೋಗರ ವಂಶಸ್ತರಲ್ಲೊಬ್ಬರು. ಅವರ ಪೂರ್ವಾಶ್ರಮದ ಹೆಸರು 'ರಂಗಪ್ಪ'ನವರೆಂದು.ಅವರು, ಮಾಳೇನಹಳ್ಳಿ, ಕೋಮಾರನಹಳ್ಳಿಗಳಲ್ಲಿ ಆಶ್ರಮಗಳನ್ನು ಸ್ಥಾಪಿಸಿದ್ದಾರೆ. ನುಲೇನೂರಿನಲ್ಲಿ ಒಂದು ಚಿಕ್ಕ ಆಶ್ರಮವಿದೆ. ಅದನ್ನು 'ಶ್ರೀ. ಶ್ರೀನಿವಾಸ ಮೂರ್ತಿಗಳು', ನೋಡಿಕೊಳ್ಳುತ್ತಿದ್ದರು. ಅವರು ನಿಧನರಾಗಿರುತ್ತಾರ...