ಹೊಳಲ್ಕೆರೆ ಸುಂಕದ ಶ್ಯಾನುಭೋಗರ ವಂಶದ ಶ್ರೀ. ಶಂಕರಲಿಂಗ ಭಗವಾನರು, ಜಾನಮ್ಮನವರು, ಸುಬ್ಬರಾಯರು, ಮತ್ತು ಕೃಷ್ಣಮೂರ್ತಿ, !

ಈ ಅಪರೂಪದ ಫೋಟೋ ಚಿತ್ರಗಳನ್ನು ಚಿ. ಸುಬ್ಬಲಕ್ಷ್ಮಿ, ಮತ್ತು ಚಿ. ರಾಘವೇಂದ್ರ ಜೊತೆಯಲ್ಲಿ ಸೇರಿ ಸಂಪಾದಿಸಿರುತ್ತಾರೆ. ಮನೆಯಲ್ಲಿ ಫೋಟೋಗಳು ಹೆಚ್ಚಾಗಿ ಇಲ್ಲ. ಇದ್ದರೂ ಅವಕ್ಕೆ ಫ್ರೆಮ್ ಹಾಕಿರುವುದರಿಂದ ಅವನ್ನು 'ಸ್ಕಾನ್' ಮಾಡುವುದೂ ಕಷ್ಟ. ಆದರೂ ರಾಘವೇಂದ್ರ, ಮುತುವರ್ಜಿವಹಿಸಿ ಕೆಳಗಿನ ೩ ಫೋಟೋಗಳನ್ನು ಇ-ಮೇಲ್ ಮಾಡಿದ್ದಾನೆ. ಶ್ರೀ. ಎಚ್.ವಿ.ಸುಬ್ಬರಾಯರ ಹಿಂದಿನ ಫೋಟೋಗಳನ್ನು ಬಹಳ ಜನ ನೋಡಿಲ್ಲ. {ಮಾನಸಿಕ ಅಸ್ವಸ್ಥತೆಯಿಂದ ಹಲವು ವರ್ಷ ಅವರು ಬಹಳವಾಗಿ ಕಷ್ಟದ ಜೀವನ ಸಾಗಿಸಿ ನಿಧನರಾದರು) ಅವರ ಪರಿವಾರದಲ್ಲಿ ಹೆಣ್ಣು ಮಕ್ಕಳಲ್ಲಿ ಒಬ್ಬರು ಮಾತ್ರ ಜೀವಂತವಾಗಿದ್ದಾರೆ. ಇಬ್ಬರು ಗಂಡು ಮಕ್ಕಳು ನಿಧನರಾಗಿದ್ದಾರೆ. ಸುಬ್ಬರಾಯರ ಅಣ್ಣನ ಮಕ್ಕಳು ಕೆಲವರಿಗೆ ಮಾತ್ರ ಸುಬ್ಬರಾಯರ ಬಗ್ಗೆ ಗೊತ್ತಿದೆ. ಅವರ ಮೊಮ್ಮಳು ಅಜ್ಜನ ಕತೆಯನ್ನು ಕೇಳಲು ಆಸಕ್ತರಾಗಿದ್ದಾರೆ 

ಶ್ರೀ  ಸುಬ್ಬರಾಯರು, ಕುಳಿತಿರುವವರಲ್ಲಿ (ಎಡದಿಂದ ಎರಡನೆಯವರು)

'ಶ್ರೀ ಶಂಕರಲಿಂಗ ಭಗವಾನ್ ಯತಿ',ಗಳು ಸುಂಕದ ಶ್ಯಾನುಭೋಗರ ವಂಶಸ್ತರಲ್ಲೊಬ್ಬರು. ಅವರ ಪೂರ್ವಾಶ್ರಮದ ಹೆಸರು 'ರಂಗಪ್ಪ'ನವರೆಂದು.ಅವರು, ಮಾಳೇನಹಳ್ಳಿ, ಕೋಮಾರನಹಳ್ಳಿಗಳಲ್ಲಿ ಆಶ್ರಮಗಳನ್ನು ಸ್ಥಾಪಿಸಿದ್ದಾರೆ. ನುಲೇನೂರಿನಲ್ಲಿ ಒಂದು ಚಿಕ್ಕ ಆಶ್ರಮವಿದೆ. ಅದನ್ನು 'ಶ್ರೀ. ಶ್ರೀನಿವಾಸ ಮೂರ್ತಿಗಳು', ನೋಡಿಕೊಳ್ಳುತ್ತಿದ್ದರು. ಅವರು ನಿಧನರಾಗಿರುತ್ತಾರೆ. ಅವರ ಮಗ, 'ಆತ್ಮಾರಾಮ್', ಈಗ, ಆಶ್ರಮದ ಚಟುವಟಿಕೆಗಳನ್ನು ಸಮರ್ಪಕವಾಗಿ ನೋಡಿಕೊಳ್ಳುತ್ತಿದ್ದಾರೆ.   

ಈ ಚಿತ್ರದಲ್ಲಿ ಶ್ರೀ ಎಚ್. ಎಸ್. ಕೃಷ್ಣ ಮೂರ್ತಿಯವರನ್ನು ಕಾಣಬಹುದು. ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ತೆಗೆದ ಫೋಟೋದಲ್ಲಿ, ಹಲವರ ಪರಿಚಯ ನನಗಿದೆ. ಮೊದಲನೆಯ ಸಾಲಿನಲ್ಲಿ ಕುಳಿತ ವ್ಯಕ್ತಿಗಳು : ಶ್ರೀ. ವೆಂಕೋಬರಾಯರು, ಶ್ರೀ. ಗೊಲ್ಲರ ಸಿದ್ರಾಮಣ್ಣನವರು, ಎರಡನೆಯ ಸಾಲಿನಲ್ಲಿ (ಮೇಲಕ್ಕೆ) : ಶ್ರೀ. ಗುಡಿ ಗೋಪಾಲಣ್ಣನವರು, ಎನ್. ಡಿ.ಕೃಷ್ಣನ್, ನಿಂತಿರುವರಲ್ಲಿ : ಹನುಮಂತಾಚಾರ್ ಮಗ, (ಹೆಸರು ಮರೆತೆ), ಎಚ್.ಎಸ್.ಕೃಷ್ಣ ಮೂರ್ತಿ, (ಕಿಟ್ಟಣ್ಣ), ಗೋಪಾಲಜ್ಜನ ಮಗ, ಅಚ್ಚಣ್ಣ , ಕೊನೆಯವನು ಗೊತ್ತಿಲ್ಲ.

 ಈ ಫೋಟೋಗಳ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಕೊಟ್ಟರೆ, ಧನ್ಯವಾದಗಳು ! -ಎಚ್. ಆರ್. ಎಲ್. ವೆಂಕಟೇಶ (ಎಚ್. ವಿ. ರಂಗ ರಾಯರ ಮಗ) ರಂಗರಾಯರು, ಸುಬ್ಬರಾಯರ ಅಣ್ಣ !



Comments

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !