ಈ ಪುಟ್ತಾಯಿಗೆ, ೩ ಮಕ್ಕಳನ್ನು ಹೆತ್ತು, ಸಾಕಿ-ಸಲಹೊದು ಮಾತ್ರ ಗೊತ್ತು. ದೊಡ್ಡೋರ್ನ್ ಮಾಡೋದು, ಅವಕ್ಕೆ ವಿದ್ಯಾಭ್ಯಾಸ, ಮತ್ತೆ, ಉಪನಯನ, ಮದುವೆ ಇವ್ಯಾವ್ದು ಗೊತ್ತೇ ಇಲ್ವಂತೆ. ಅದೇ ನಿಸರ್ಗ ತಾಯಿ, ದೊಡ್ಡ ಮಾತಾಯಿ ಇದಾಳಲ್ವ, ಅವಳೆ ಅದನ್ನೆಲ್ಲಾ ನೋಡ್ಕೊಂಡ್ ಹೋಗ್ತಾಳಂತಪ್ಪ. ರಾಬಿನ್ ಪಕ್ಷಿಗೆ ಈಗ್ಲೆ ಗೊತ್ತಾಗಿ ಹೋಗಿದೆ. ಆದೄ ಅದೇನ್ ಜವಾಬ್ದಾರಿ, ಮಮತೆ, ಪ್ರೀತಿ, ತ್ಯಾಗ, ತಾಯ್ತನದ ಜವಾಬ್ದಾರಿ ತೋರ್ಸತ್ತೆ, ಈ ಪುಟ್ಟ ಹಕ್ಕಿ ! ಹಾ ಆ ನಿಸರ್ಗಮ್ಮನ್ ನೋಡಿ. ಅವಳೆಷ್ಟು ಭಾರಿ ಜವಾಬ್ದಾರಿ ಹೆಂಗ್ಸು ಅಂತ.. ಇಂಥ ಲಕ್ಷಾಂತರ, ಕೋಟ್ಯಾಂತರ, ಪರಿವಾರಗಳನ್ನ, ಮತ್ತೆ, ಈ ವಿಶ್ವನ ನೋಡ್ಕೊಳ್ಳೊದು ಏನ್ ಹುಡುಗಾಟನೇ. ಈ ತಾಯಿ ಮಕ್ಳು, ಈಗ ಎಲ್ಲೌರ್ರೆ. ? ಮರದ್ಮ್ಯಾಗ, ಇಲ್ವೆ, ನಿಮ್ಮನೆ ಬಾಲ್ಕನಿಲೊ ? ಉಸಾರು ಕಣವ್ವ. ಜ್ವಾಕೆ. ಬೆಕ್ಕು, ನಾಯಿಗ್ಳು, ಮತ್ತೆ ಕಾಗೆ, ಏನಾದೃ ತೊಂದ್ರೆ ಕೊಟ್ಟಾವು, ಮಗ ; ಅಂದಂಗೆ ಕಾಗೆಗಳೇನು ಕಾಣ್ಸಂಗೇ ಇಲ್ಲ. ನಿಮ್ಮೂರ್ನಾಗೆ.... ಒಳ್ಳೇದಾತ್ ಬಿಡವ್ವ ಸೌಜನ್ಯ : ಮುದ್ದು ಗೌರಿ, ಹಾಗೂ ಹರ್ಷಮ್ಮ. ಈಗ ಸದ್ಯಕ್ಕೆ, ಈ ರಾಬಿನ್ ಹಕ್ಕಿ ಬಾಣಂತನದ ಜವಾಬ್ದಾರಿನ ಹೊತ್ತಿರೊರು ಇವರೆ ! ಮಕ್ಳು ಬಾಣಂತಿ ಸೌಖ್ಯವಾಗಿದಾರ್ರಿ. ಕಾಳ್ಜಿ ಮಾಡ್ಬ್ಯಾಡ್ರಿ..