Posts

Showing posts from August, 2021

ನಮ್ಮೆಲ್ಲರ ಪ್ರೀತಿಯ ಶ್ರೀರಂಗ ಇನ್ನೆಲ್ಲಿ ?

Image
  ಶ್ರೀರಂಗ - ಎಂದರೆ, ಪ್ರೀತಿ, ಸಹಾಯ, ಸಹಕಾರ, ಮತ್ತು ಆತ್ಮೀಯತೆಗಳ ಸಮಾವೇಶವಿದ್ದಂತೆ. ಅವನಿಗೆ ಎಲ್ಲರೂ ಬೇಕು. ಯಾವಾಗಲೂ ನಗುಮುಖದ ಅತಿ ಸರಳ ವ್ಯಕ್ತಿ.  ಎಲ್ಲಾ ಸಮಯಗಳಲ್ಲೂ ಸಿಗುವ ಮತ್ತು ತಕ್ಷಣವೇ ಕಾರ್ಯೋನ್ಮುಖನಾಗುವ ಚೇತನ.                                                                                                                                                                    ಚಿ. ಶ್ರೀರಂಗ                                                      (೨, ಆಗಸ್ಟ್, ೧೯೬೧-೨೯, ರವಿವಾರ, ಆಗಸ್ಟ್, ೨೦೨೧)  ದೇವರಿಂದ, ನಮ್ಮ ಶ್ರೀರಂಗನಿಗೆ ಇಷ್ಟು ಬೇಗ ಕರೆ ಯಾಕೆ ಬಂತು ?ಏಕೆ  ಹೀಗಾಯಿತು ? ಇನ್ನೂ ೬೧ ವರ್ಷವಷ್ಟೇ ! ಬದುಕಿ ಬಾಳಬೇಕಾದ ವ್ಯಕ್ತಿ, ಹೀಗೆ ದಿಢೀರನೆ ನಮ್ಮನ್ನೆಲ್ಲ ಆಗಲಿ ಹೋಗುವ ತರಾತುರಿ ಏನಿತ್ತು ? ಎಂದು ಅನ್ನಿಸುವುದು ಸ್ವಾಭಾವಿಕ. ಆದರೆ ವಿಧಿಯ ನಿಯಮವೇ ಬೇರೆ; ಅದನ್ನು ನಮ್ಮಿಂದ ಅಳೆಯುವುದು ಬಹಳ ಕಷ್ಟ. ೨೯ ನೆಯ ತಾರೀಖು, ಆಗಸ್ಟ್, ೨೦೨೧ ರ  ಮಧ್ಯಾನ್ಹ ೪-೧೫ ಕ್ಕೆ ಅವನು ತೀವ್ರ ಹೃದಯಾಘಾತದಿಂದ ನಮ್ಮೆಲ್ಲರನ್ನೂ ಆಗಲಿ ಹೋಗಿರುತ್ತಾನೆ. ಅವನನ್ನು ಪರಿಶೀಸಲು ಬಂದ ವೈದ್ಯರು, ಕಾರ್ಯ ನಿರ್ವಹಿಸುವ ಮೊದಲೇ ಅವನು ಇಲ್ಲವಾಗಿದ್ದ. ಶ್ರೀರಂಗಣ್ಣನ  ಅಕಾಲಿಕ ನಿಧನದಿಂದ ಮನೆಯವರಲ್ಲದೆ ಸ್ನೇಹಿತರು, ಅಕ್ಕ-ಪಕ್ಕದವರು, ಹಿತೈಷಿಗಳು, ಎಲ್ಲರೂ ಕಂಬನಿಗರೆದರು. ಅವನ ವ್ಯಕ್ತಿತ್