Posts

Showing posts from June, 2018

ಮುಂಬಯಿನಲ್ಲಿ ನಾವಿಬ್ಬರೂ (ಸೌ ಸರೋಜಾ ಮತ್ತು ನಾನು), ಶಂಕರಣ್ಣ ಮತ್ತು ಚಿ. ಸೌ ಗೀತಾರವರ ಜೊತೆ ಪಗಡೆ ಆಟ ಆಡಿದ ಸವಿ ನೆನೆಪು !

Image
ನಮ್ಮ ಚಿಕ್ಕಮ್ಮ ಪದ್ದಮ್ಮನವರ ಜೊತೆ (ಅವನಿಗೆ ಅಜ್ಜಿಯಾಗಬೇಕು)  ಶಂಕರಣ್ಣ ಪಗಡೆ ಆಟ ಆಡುತ್ತಿದ್ದನ್ನು ನಾನು ಹೊಳಲ್ಕೆರೆಯಲ್ಲಿ ನೋಡಿದ್ದೆ. ಆಮೇಲೆ ಅದನ್ನು ಆಡಿದ್ದರ ಬಗ್ಗೆ ನಾವಿಬ್ಬರೂ ಚರ್ಚಿಸಿಲ್ಲ. ಈಗ ಮಕ್ಕಳಿಗೆ ಅದನ್ನು ಆಡಲು ಸಮಯವಿಲ್ಲ. ಅಲ್ಲದೆ ಈಗಿನ ಆಟಗಳೇ ಬೇರೆ. ಎಲ್ಲಕ್ಕೂ ಹೆಚ್ಚಾಗಿ ಮೊಬೈಲ್, ಕಂಪ್ಯೂಟರ್  ಮತ್ತು ಟೆಲಿವಿಷನ್  ಗಳು ಪರಿವಾರದ ಸಮಯವನ್ನೆಲ್ಲ ನುಂಗಿಹಾಕಿದೆ ಎಂದು ನಾವು ಅಂದರೆ, ನಮ್ಮ ಮಕ್ಕಳು ಅದನ್ನು ಒಪ್ಪುವುದಿಲ್ಲ.  ಪಗಡೆ ಆಟ ನಾವು ಚಿಕ್ಕವರಾಗಿದ್ದಾಗಿನಿಂದಲೂ ಆಡ್ತಾ ಬಂದ ಆಟ. ನಾವಿದ್ದ ಹೊಳಲ್ಕೆರೆ ಅಥವಾ ಕಾಳಘಟ್ಟದಲ್ಲಿ ಇನ್ಯಾವ ಆಟ ಸಿಕ್ತಿತ್ತು ಆಡಕ್ಕೆ ? ಕುಂಟೆಬಿಲ್ಲೆ, ಚಿನ್ನಿದಾಂಡು, ಉಡ್ತುತ್ತಿ, ಲಗ್ಗೋರಿ, ಗೊಟಗೋಣಿ ಮಣೆ ಚೌಕಬರೆ ಅಷ್ಟೇ. ನಾನು ಚಂದ್ರಣ್ಣ ಸೇರಿ 'ಟ್ರೇಡ್ ಅನ್ನೋ ಆಟ' ಹೇಗೋ ಕಲ್ತಿದ್ವಿ. ಎಲೆಕ್ಟ್ರಿಕ್ ಲೈಟ್ ಇಲ್ಲದ ಕಾಲದಲ್ಲಿ ರೇಡಿಯೊ, ಟಿವಿ, ಎಲ್ಲಿ ಬರ್ಬೇಕು, ಮರಕೋತಿ ಆಟ, ಫುಟ್ಬಾಲ್ ಆಡ್ತಿದ್ವಿ. ಕ್ರಿಕೆಟ್ ಅಂತ ಆಟ ಗೊತ್ತಾದ್ದು ನಮ್ಮ ಊರಿನ ಶಿವಮೂರ್ತಿ ಅನ್ನೊ ಟೈಲರ್ ಹುಡ್ಗ್ನಿಂದ. ಅವರೆಲ್ಲಾ ಮಹಾರಾಷ್ಟ್ರದೋರು. ಗವಸ್ಕರ್, ಅಜಿತ್ ವಾಡೇಕರ್, ಹೆಸರು ಕೇಳ್ದೋರು ! ನಾವು ಬೊಂಬಾಯ್ನಲ್ಲಿ ಪಗಡೆ ಆಟ ಆಡಕ್ಕೆ ಕೂತಾಗ ಹಳೆಯ ಬಾಲ್ಯದ ನೆನಪಿನ ಸುರಳಿಗಳು ಹಾಗೆಯೇ ಮನಸ್ಸಿನ ಪರದೆಯಮೇಲೆ ಹಾದು ಹೋದವು. ಅಮ್ಮ ಅಪ್ಪ, ನಾಗರಾಜ, ರಾಮ

ಚಿ. ನಾರಾಯಣ್, ಶ್ರೀಮತಿ, ಗಾಯಿತ್ರಿ ನಾರಾಯಣ್ ೨೦೧೮ ರ ಜೂನ್ ೯ ರಂದು ಭೇಟಿಕೊಟ್ಟಿದ್ದರು.

Image
ಚಿ. ನಾರಾಯಣ್, ಶ್ರೀಮತಿ, ಗಾಯಿತ್ರಿ ನಾರಾಯಣ್ ೨೦೧೮ ರ ಜೂನ್ ೯ ರಂದು ಭೇಟಿಕೊಟ್ಟಿದ್ದರು. ನಂತರ ಚಿ. ಶ್ಯಾಮ್, ಚಿ.ಸೌ. ಲಕ್ಷ್ಮಿ,ಮತ್ತು ಚಿ. ಶುಭಾಂಗ ಬಂದರು. ಇವತ್ತು ಬೆಳಿಗ್ಯೆ ಹಿಡಿದ ಮಳೆ ಬಿಡಲೇ ಇಲ್ಲ. ಬಿಟ್ಟು ಬಿಟ್ಟು ಬರುತ್ತಿತ್ತು. ಶ್ಯಾಮ್ ಬರುವಾಗ ಮಧ್ಯೆ ದಾರಿತಪ್ಪಿ ಅತ್ತ-ಇತ್ತ ಹೋದರೂ  ನಂತರ ಸರಿಯಾಗಿ ಮನೆಗೆ ಬಂದರು. ತುಂಬಾ ಸಮಯದ ಮೇಲೆ ಅವರನ್ನುಭೇಟಿಯಾಗಿದ್ದು ಮುದಕೊಟ್ಟಿತು.  ಚಿ . ಶುಭಾಂಗ ಸ್ವಲ್ಪ ಎತ್ತರ ಬೆಳೆದಿದ್ದಾನೆ., ಈಗ ಎಲ್. ಕೆ. ಜಿಗೆ ಹೋಗುತ್ತಿದ್ದಾನೆ. ಹೆಚ್ಚಿನ ಬೆಳವಣಿಗೆ ಕಾಣಿಸುತ್ತಿದೆ.  ನಾರಾಯಣ್, ಮತ್ತು ಗಾಯಿತ್ರಿ ಕೈಲಿ ಹಾಡು ಹೇಳಿಸಿ, ರೆಕಾರ್ಡ್ ಮಾಡಿಕೊಂಡೆ. ನಮ್ಮ ಬಿಲ್ಡಿಂಗ್ ನಲ್ಲಿ ಕೆಲಸನಡೆಯುತ್ತಿದ್ದು, ಅಲ್ಲಿನ ಶಬ್ದದಿಂದಾಗಿ ರೆರ್ಡಿಂಗ್ ಸರಿಯಾಗಿ ಕೇಳಿಸುತ್ತಿಲ್ಲ.   ಶುಭಾಂಗ ,ಕಿಟಕಿಯ ಮುಂದೆ ನಿಂತಿದ್ದಾನೆ. ಈ ಕಿಟಕಿ ನಡುಮನೆ ಅಡುಗೆ ಮನೆಯ ಮಧ್ಯದ ಗೋಡೆಗೆ ಹೊಂದಿಕೊಂಡಂತಿದೆ .  Link :  1.  https://photos.app.goo.gl/vJbhN7CSCvJn8KLNA ದಿವಂಗತ ಮೊಹಮ್ಮದ್ ರಫಿಯವರ ಗೀತೆಗಳೇ ಹಾಗೆ !  ಗಝಲ್, ಸುಗಮ ಸಂಗೀತ್, ಶಾಸ್ತ್ರೀಯ ಸಂಗೀತ, ಉತ್ತರಾದಿ, ದಕ್ಷಿಣಾದಿ ಸಂಗೀತ ವಲಯದಲ್ಲಿ ಕೃಷಿಮಾಡಿ ಚೆನ್ನಾಗಿ ಹೇಳುವ ಅಭ್ಯಾಸ ಮಾಡಿಕೊಂಡಿದ್ದರು.  'ಹರಿ ಓಂ ಮನ...  ಹಾಡನ್ನು ಚಿ. ನಾರಾಯಣ ಸುಶ್ರಾವ್ಯವಾಗಿ ಹಾಡಿದರು. ಅವರಿಗೆ 'ದಿಢೀರ್ 'ಎಂದು