Posts

Showing posts from January, 2011

ಸಂಕ್ರಾಂತಿ ಹಬ್ಬದ ಎಳ್ಳು ಕೊಡ್ತೀನಿ... ತಾಳಿ..!

Image
ಸಂಕ್ರಾಂತಿ ಹಬ್ಬದ ಸಡಗರ ಇಮ್ಮಡಿಸ ಬೇಕಾದರೆ ಮನೇಲಿ ಹೆಣ್ಣು ಮಕ್ಕಳಿರಬೇಕು. ಅದ್ರಲ್ಲೂ  ಗೌರಿಯಂತಹ ಪುಟ್ಟ ಮಕ್ಕಳಿದ್ದರಂತೂ ಸಂಭ್ರಮವೇ ಸಂಭ್ರಮ.  ಕೇಳ್ಬೇಕೆ ಮತ್ತೆ. ಅಮ್ಮ, ಅಪ್ಪ ಇಬೃ ಅವಳಿಗೆ ಸಹಾಯ ಮಾಡ್ತಿದಾರೆ.  ವಿದೇಶ ಅನ್ನೋ ಭಾವನೆ ಬರದಂತೆ, ತಂದೆ-ತಾಯಿಗಳು ನಿಗಾವಹಿಸುತ್ತಿರುವ ಈ ತಂದೆತಾಯಿಗಳನ್ನು ಪಡೆದಿರುವ ಭಾಗ್ಯ ಎಲ್ಲ ಮಕ್ಕಳಿಗೂ ಬರಬೇಕು. ನಿಜಕ್ಕೂ ನಮ್ಮ ಗೌರಮ್ಮ ಧನ್ಯಳು...ಗೌರಮ್ಮನಂತಹ ಪುಟಾಣಿಗಳನ್ನು ಪಡೆದ ಅಜಿತ-ಹರ್ಷ ನಿಜಕ್ಕೂ ಧನ್ಯರಲ್ಲದೆ ಮತ್ತೇನು ?!   ಬಾ, ಬಾ ತೊಗೊಂಡ್ ಬಾರಮ್ಮ ಆ ಟ್ರೇನ, ಎಳ್ಳುತಿನ್ನೋ ಆಸೆ ಪ್ರಬಲವಾಗ್ತಿದೆ ಕಣಮ್ಮ, ಮುದ್ದು ಗೌರಿ, ಗೌರಮ್ಮ  ! ಇವಾಗ, ಮತ್ತೊಬ್ಬ ಚಿಣ್ಣ (ಚಿನ್ನ) ಇದೇ ಪಂಗಡಕ್ಕೆ ಸೇರಿದ್ದಾನೆ. ಅಬ್ಬಾ ಅದೇನ್ ತುಂಟಾ ನಮ್ಮ ಪ್ರೀತಿಯ ಅನಿಶ್ ! ನಮ್ಮ ಪ್ರಣತಿ ಮದುವೆನಲ್ಲಿ ಅವನಪ್ಪ ವಿಶ್ವನಾಥ್ ಗೆ ಸಕತ್ ಕೆಲಸ ಕೊಟ್ಟಿದ್ದ. ಸಧ್ಯ ಅಮ್ಮಾ ಅಂತಾ ಅಳ್ಲಿಲ್ಲ; ಆದರೆ ಪುಟು-ಪುಟು ಅಂತ ಮದುವೆ ಮನೆ ತುಂಬಾ ಓಡಿದ್ದೆ ಓದಿದ್ದು. ಒಟ್ಟಿನಲ್ಲಿ ಹಬ್ಬದ ಸಡಗರ ಅನುಭವಿಸ್ ಬೇಕು ಅಂದ್ರೆ, ಮಕ್ಳಿರ್ಬೇಕು !