ನಾನು ಕಾಶಿ ನೋಡಿದ್ದು ನಮ್ಮಮ್ಮನ ಜೊತೆಗೆ ಹೋದಾಗ, ಅಂದರೆ, ೧೯೭೦ ರಲ್ಲಿ. ಆಮೇಲೆ ೨೦೦೬ ರಲ್ಲಿ ಸರೋಜ, ರವಿಯ ಜೊತೆಗೂಡಿ ದೆಹಲಿ, ಜೈಪುರ, ರಾಜಾಸ್ಥಾನ, ಆಗ್ರ, ಮೊದಲಾದ ಸ್ಥಳಗಳನ್ನು ನೋಡಿಕೊಂಡು ಬಂದೆವು. ಆಗ ರವಿ ದೆಹಲಿಯ ಐ.ಐ.ಟಿ. ಯಲ್ಲಿ ಎಂ.ಬಿ.ಎ. ವ್ಯಾಸಂಗ ಮಾಡುತ್ತಿದ್ದ. ಹೆಚ್ಚು ದಿನಗಳನ್ನು ನಾವು ದೆಹಲಿಯಲ್ಲೇ ಕಳೆದೆವು. ದುರ್ದೈವದಿಂದ ನಾವು ಇಳಿದುಕೊಂಡಿದ್ದ 'ಸದರನ್ ಟ್ರಾವೆಲ್ಸ್' ನ ಹತ್ತಿರದಲ್ಲೇ ಇದ್ದ, 'ಸರೋಜಿನಿ ಮಾರ್ಕೆಟ್ ನಲ್ಲಿ ಬಾಂಬ್ ಸ್ಪೋಟ'ದ ಘಟನೆ ನಮ್ಮನ್ನು ಕಂಗೆಡಿಸಿತ್ತು. ಯಾಕೋ ಮತ್ತೆ ಮುಂದು ವರೆದು ಕಾಶಿಗೆ ಹೋಗಲು ಮನಸ್ಸು ಒಪ್ಪಲಿಲ್ಲ. ಮನೆ ಸೇರಿಕೊಂಡರೆ ಸಾಕಪ್ಪ ಅನ್ನಿಸಿತ್ತು. ಹಾಗಾಗಿ ನಾವು ಮುಂಬೈಗೆ ವಾಪಸ್ ಆದೆವು. ಪುನಃ ವಾರಣಾಸಿ ದರ್ಶನ ಲಭ್ಯವಾಗಲು ನಾವು ೬ ವರ್ಷ ಕಾಯಬೇಕಾಯಿತು. ಒಟ್ಟಿನಲ್ಲಿ ನಮಗೆ ಯಾವ ಅನಾನುಕೂಲಗಳು ಆಗದೆ, ಯಾತ್ರೆಯನ್ನು ಮುಗಿಸಿ, ಸುಖವಾಗಿ ವಾಪಸ್ ಆದೆವು. ದೆಹಲಿ-ಅಲಹಾಬಾದ್- ವಾರಣಾಸಿ-ಗಯಾ-ಬೋಧ್ ಗಯಾ, ಅಯೋಧ್ಯಾ-ದೆಹಲಿ- ಒಟ್ಟು ೮ ದಿನ ಹಾಗೂ ೭ ರಾತ್ರಿಗಳು : ಸದರನ್ ಟ್ರಾವೆಲ್ಸ್ , ದೆಹಲಿಯ ಕರೋಲ್ ಬಾಗ್ ನಲ್ಲಿದೆ. ಗಂಗಾನದಿಯ ಮೇಲೆ, ದೋಣಿಯಲ್ಲಿ... ...