೨೦೧೪ ರ ಏಪ್ರಿಲ್, ೧೦ ರಂದು, ಶ್ರೀ ಸಂಜೀವಣ್ಣನ, ಹಾಗೂ ಮನೆಯ ಸದಸ್ಯರನ್ನು (ಹೊಸ ಸದಸ್ಯೆಯನ್ನೂ) ಭೇಟಿಮಾಡಿ ಬಂದೆವು !
'ಸಂಜೀವಣ್ಣನವರ ಆರೋಗ್ಯದ ಬಗ್ಗೆ' : ಈ ೨೦೧೪ ರ ಎಪ್ರಿಲ್, ೧೦, ಗುರುವಾರದಂದು ನಾನು, ಸರೋಜ, ಸಂಜೀವಣ್ಣನವರ ಮನೆಗೆ ಹೊಗಿದ್ದೆವು. ೬ ತಿಂಗಳಾಗಿದ್ದರೂ ಚಿ. ರೋಹನ್ ಮಗು ಚಿ. ರಿಶಾಳನ್ನು ನೋಡಲು ಹೋಗಲು ಆಗಿರಲಿಲ್ಲ. ಮುಖ್ಯವಾಗಿ ನನ್ನ ಅನಾರೋಗ್ಯದ ನಿಮಿತ್ತದಿಂದ. ಹಾಗೆಯೇ ಮನೆಬಿಟ್ಟು ದೂರ ಸಹಿತ ಹೊಗಿರಲಿಲ್ಲ. ಸಂಜೀವಣ್ಣ ಸ್ವಲ್ಪ ಹೊತ್ತು ಸೋಫಾದ ಮೇಲೆ ಕುಳಿತಿರುತ್ತಾರೆ. ಅವರಿಗೆ ಉಟಕ್ಕೆ ದ್ರವರೂಪದ ಆಹಾರ ಕೊಡುತ್ತಿದ್ದಾರೆ. ಬಂದವರನ್ನು ಗುರುತು ಹಿಡಿಯುವುದು ಕಸ್ಟ ! 'ಆಯ್ತು,' 'ಆಯ್ತು, ' ಹೋಯ್ತು', 'ಹೊಯ್ತು ' ಎಂದು ಪದೇ ಪದೇ ಹೇಳುತ್ತಾರೆ. ' Link : ಇದರಲ್ಲಿ ಅಮೃತ್ ರವರ ಮನೆಯ ಸದಸ್ಯರಹೊಸ ಸದಸ್ಯರ ಚಿತ್ರಗಳೂ ಇವೆ ! https://plus.google.com/photos/117225798684059542608/albums/6000317922175101537?authkey=CJ3Tv97gsaudxQE ಸೌ. ರಾಜೇಶ್ವರಿ ಅತ್ತಿಗೆಯವರು ನಮ್ಮನ್ನೆಲ್ಲಾ ಅಗಲಿ ಹೋಗಿದ್ದಾರೆ .. ಸೌ. ರಾಜೇಶ್ವರಿ ಅತ್ತಿಗೆಯವರು, ೨೦೧೪ ರ ಮಾರ್ಚ್, ೧೬ ರಂದು ಮಂಡ್ಯದಲ್ಲಿ ದೈವಾಧೀನರಾದರು. ಇನ್ನು ೬೮ ವರ್ಷ ವಯಸ್ಸಿನ ರಾಜೇಶ್ವರಿಯವರು ಇತ್ತೀಚಿನ ದಿನಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಆತ್ಮಕ್ಕೆ ಶಾಂತಿದೊರೆಯಲಿ. - ಅವರನ್ನು ಅಗಲಿದ ದುಖದಲ್ಲಿ ನನ...