Visit to Chi. Shubhang's house at IIT, Mumbai !
ದೀಪಾವಳಿ ಆದಮೇಲೆ ನವೆಂಬರ್, ೧೧ ನೇ ತಾರೀಖು ೨೦೧೮ ರಂದು (ರವಿವಾರ) ನಾವು ಲಕ್ಷ್ಮಿ ಮನೆಗೆ ಹೋದೆವು, ಮನೆಯಲ್ಲಿ ಶಾಮ್ ಮತ್ತು ಶುಭಾಂಗ, ಲಕ್ಷ್ಮಿ ಇದ್ದರು. ಶುಭಾಂಗ ಸ್ವಲ್ಪ ಎತ್ತರ ಆಗಿದಾನೆ. ಮಾತು ಭಾಳ ಆಡ್ತಾನೆ. ೨ ಗಂಟೆಗೆ ಊಟ. ಸ್ವಲ್ಪ ಹೊತ್ತು ಮಲಗಿದ್ವಿ. ಏನೂ ಪಲ್ಯೂಷನ್ ಇಲ್ಲ. ಅಲ್ಲಿ ಇಲ್ಲಿ ಸ್ವಲ್ಪ ಪಟಾಕಿ ಶಬ್ದ ಬಿಟ್ಟರೆ ಶಾಂತ ವಾದ ವಾತಾವರಣ ! ಒಟ್ಟು ಕ್ಯಾಮ್ಪಸ್ ೫೦೦ ಕಿ.ಮೀ ವಿಸ್ತೀರ್ಣವಿದೆಯಂತೆ ! ಕನ್ನಡದಲ್ಲಿ ಮಾತು ಕತೆ ಆಡಿದ್ದು ಮುದಕೊಟ್ಟಿತು. ಅವರ ತಾಯಿ ಮನೆಕಡೆಯ ಪದ್ಧತಿಗಳು ಅಡುಗೆ ವಿಧಾನಗಳು, ಕೇಕ್ ತಯಾರಿಕೆ ಇತ್ಯಾದಿ (ಕೇಕ್ ನನಿಗೆ ಬಹಳ ಇಷ್ಟ ಆಯ್ತು) ಈ ಬಾರಿ ಲಕ್ಷ್ಮಿ ಊರಿನ ದೇವರ ಮದುವೆ ವಿಷಯ ಕೇಳಿ ನಾವೂ ಹೋಗಬೇಕು ಅನ್ನಿಸಿತು.ಹರಿಹರದಲ್ಲಿ ಅಮ್ಮನ ಮನೆ ಗೃಹ ಪ್ರವೇಶ, (ವಿಶ್ವನಾಥ್, ಸ್ಮಿತಾ, ಅನೀಶ್ ನೋಡಿದ್ದು ಚೆನ್ನಾಗಿತ್ತು. ನಾಗಕ್ಕನ್ನ ನೋಡಿ ಬಹಳ ದಿನಗಳೇ ಆಗಿತ್ತು. ಮತ್ತು ಗಿರಿಜಾ ಕಲ್ಯಾಣದ ಹಲವು ಮಜಲುಗಳನ್ನೊಳಗೊಂಡ ವಿಡಿಯೋ ಚಿತ್ರಗಳು ಬಹಳ ಚೆನ್ನಾಗಿದ್ದವು ...