Posts

Showing posts from October, 2020

ಎಲ್ಲರಿಗೂ 'ವಿಜಯ ದಶಮಿ ಹಬ್ಬದ ಶುಭಕಾಮನೆಗಳು'. ಒಳ್ಳೆಯದಾಗಲಿ.

Image
ಕೆಳಗಿನ ಈ ಫೋಟೋದಲ್ಲಿರೋ ಹೊಳಲ್ಕೆರೆಯ  ಘನ ವ್ಯಕ್ತಿಗಳನ್ನು ನಮ್ಮ ಅಣ್ಣಂದಿರಾದ ನಾಗರಾಜ್ ಮತ್ತು ರಾಮಕೃಷ್ಣರನ್ನು ಬಿಟ್ಟರೆ ನನಗೆ, ರಮಾಮಣಿ ಅತ್ತಿಗೆ,  ಕೆ. ಟಿ. ನಾಗರಾಜ್, ಕೆಟಿ ಗೋಪಾಲಕೃಷ್ಣ ಹಾಗೂ ಛಾಯಾಪತಿಯವರ ಮಗ ರಾಮಕೃಷ್ಣ, ಮತ್ತು ಅವರಣ್ಣ  ರಂಗಣ್ಣನಿಗೆ ಡಾ. ಶರ್ಮ,  ನಟಿ, ಮೊದಲಾದವರಿಗೆ ಮತ್ತು  ಸುಬ್ಬಲಕ್ಷ್ಮಿ ಗೆ ಗೊತ್ತಾಗಬಹುದೇನೋ. ಇನ್ನೂ ಕೆಲವರಿಗೆ.  ಈ ಗ್ರೂಪ್ ಫೋಟೋ ನ ಶ್ರೀ. ವೇಣುಗೋಪಾಲ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ತೆಗೆದಿದ್ದಾರೆ.  (ಫೋಟೋಗ್ರಾಫರ್ ಕುಬೇರಪ್ಪನವರು) ನೋಡೋಣ.  ನನಗೆ ಗೊತ್ತಿರುವ ವ್ಯಕ್ತಿಗಳು ಯಾರು ? ಎಂದು : ಕೆಳಗಿನ ಸಾಲು (ಕುಳಿತಿರುವವರು) ವೆಂಕೋಬರಾಯರು ಪ್ರೈಮರಿ ಶಾಲೆ ಮುಖ್ಯೋಪಾಧ್ಯಾಯರು ಗೊಲ್ಲರ ಸಿದ್ಧರಾಮಣ್ಣನವರು  ಮೊದಲನೇ ಸಾಲು (ನಿಂತಿರುವವರು) ಗೋಪಾಲರಾವ್ ಮೇಷ್ಟ್ರು, ಗುಡಿ ಗೋಪಾಲಣ್ಣ (ವೇಣುಗೋಪಾಲ ಸ್ವಾಮಿ ದೇವಸ್ಥಾನದ ಅರ್ಚಕರು) ರಘುಪತಪ್ಪನವರು ಕೊನೆಯವರು ಗುಂಡೇರಿ ರಾಮಣ್ಣ.  ವಾಸಣ್ಣನವರು, ಸುಂಕದ ಕೃಷ್ಣಮೂರ್ತಿಯವರು, ಅಚ್ಚಣ್ಣನವರು (ಗುಡಿ ಗೋಪಾಲಣ್ಣನವರ ಸುಪುತ್ರ)