ಜೋತಿಷ ಶಾಸ್ತ್ರವನ್ನು ಆಳವಾಗಿ ಅಭ್ಯಸಿಸಿ, ಅದರ ಇತಿ-ಮಿತಿಗಳನ್ನು ಅರಿತವರು, ಸುಂಕದಮನೆ ರಂಗರಾಯರು, ಶ್ಯಾನುಭೋಗರ ವಂಶಸ್ಥರು. ಇವರವಂಶದಲ್ಲೇ, ಸುಮಾರು ೨೫೦ ವರ್ಷಗಳ ಹಿಂದೆ, ’ರಾಮಣ್ಣಯ್ಯ’ನವರೆಂಬ ಘನವಿದ್ವಾಂಸರು, ’ನಿತ್ಯಾತ್ಮ ಶುಕಯೋಗೀಂದ್ರರು’ ರಚಿಸಿದ್ದ, ’ಕರ್ಣಾಟಕ ಭಾಗವತ,’ ವನ್ನು ಸಂಪೂರ್ಣವಾಗಿ ತಾಳೆಗರಿಗಳಮೇಲೆ ಬರೆದಿಟ್ಟಿದ್ದರು. ಅದನ್ನು ೧೯೯೧ ರಲ್ಲಿ ಅವರ ಮರಿ-ಮರಿ-ಮೊಮ್ಮಗ, ಡಾ. ಚಂದ್ರಶೇಖರನು ಪಡೆದು, ಆ ತಾಳೆಯಗರಿಯ ಲಿಖಿತರೂಪಕಗಳನ್ನು ಕಂಪ್ಯೂಟರೀಕರಿಸಿ, ಘನವಿದ್ವಾಂಸರ ಸಹಕಾರದಿಂದ ಸಂಪೂರ್ಣವಾಗಿ ಸಮಸ್ತಪ್ರತಿಗಳನ್ನೂ ಪರಿಷ್ಕರಿಸಿ ಎರಡುಸಂಪುಟಗಳಲ್ಲಿ, ಪುಸ್ತಕಗಳನ್ನು ಪ್ರಕಟಿಸಿರುತ್ತಾನೆ.