Posts

Showing posts from January, 2009

ನಮ್ಮಪ್ಪಾ ಅವರ, ಜೀವನದ ಮೈಲಿಗಲ್ಲುಗಳು :

* ಡಿಸೆಂಬರ್, ೧೯೧೨, ವಿದ್ಯಾಭ್ಯಾಸ ಕೊನೆಗೊಂಡಿತು. ಬಹುಶಃ ಅವರು ಮೆಟ್ರಿಕ್ ವರೆಗೆ ಹೋಗಲು ಸಾಧ್ಯವಾಗಲಿಲ್ಲ. * ಮಾರ್ಚ್, ೧, ೧೯೧೩, ’ರ್ಯಾಲಿ ಕಂಪೆನಿ ’ ಯಲ್ಲಿ ಕ್ಲಾರ್ಕ್ ಆಗಿ ಸೇರಿದರು. ವೇತನ ೧೫ ರೂ/ಮಾಹೆಯಾನ * ಫೆಬ್ರವರಿ, ೧೯೧೭ ಮದುವೆ. (ಇದು ಅವರ ಮೊದಲ ವಿವಾಹ) * ಜುಲೈ ೧, ೧೯೧೭ ’ರ್ಯಾಲಿ ಕಂಪೆನಿ ’ ಯನ್ನು ತಾವೇ ಬಿಟ್ಟರು. ದಾವಣಗೆರೆ ಟ್ರೇಡಿಂಗ್ ಕಂ. ಗೆ ಸೇರಿದರು. ರೂ. ೧೮ ರಿಂದ ರೂ. ೪೦/ ರವರೆಗೆ, ಅವರು ಅಲ್ಲಿ ಕೆಲಸಮಾಡಿದರು. * ಮಾರ್ಚ್, ೧೯೧೭ ಜ್ವರದಿಂದ, ಮೊದಲ ಪತ್ನಿಯ ಮರಣ. * ಮಾರ್ಚ್, ೭, ೧೯೨೦ ಬೆಂಗಳೂರಿನಲ್ಲಿ ರಾಧಮ್ಮನವರ ಜೊತೆ, ಎರಡನೆಯ ಮದುವೆ. ಹೊಸ ಸಂಬಂಧ. * ಜುಲೈ, ೧೫, ೧೯೨೦, ದಾವಣಗೆರೆ ಟ್ರೇಡಿಂಗ್ ಕಂ. ಮುಚ್ಚಿತು. ದಿವಾಳಿಯಾಯಿತು. ಅಲ್ಲಿನ ಯಾರೂ ಅವರನ್ನು ಮನೆಗೆ ಕಳಿಸಲು ಇಷ್ಟಪಡಲಿಲ್ಲ. ಎರಡನೆಯ ಮದುವೆಗಾಗಿ, ದಾವಣಗೆರೆ, ಕಂಪೆನಿ, ಇವರಿಗೆ, ೩೦೦ ರೂ ಸಾಲಕೊಟ್ಟಿದ್ದರು. ಆದರೆ, ಅವರು ಹಣವಾಪಸ್ ತೆಗೆದುಕೊಳ್ಳದೆ, ಅದನ್ನು ’ನಾವು ನಿಮಗೆ ಕೊಟ್ಟಿರುವ ಉಡುಗೊರೆಯೆಂದು ಭಾವಿಸಿ’ ಎಂದು ವಿನಂತಿಸಿಕೊಂಡರು. * ಅಕ್ಟೋಬರ್, ೧೧, ೧೯೨೦, ಪಟೇಲ್ ಕಾಟನ್ ಕಂ. ಯಲ್ಲಿ ಸಬ್ ಏಜೆಂಟ್ ಆಗಿ, ೭೦ ರೂ ವೇತನಕ್ಕೆ, ಸೇರಿದರು. * ಜುಲೈ, ೧೮, ೧೯೨೧, ದಾವಣಗೆರೆಯಲ್ಲಿ, ನಮ್ಮಅಜ್ಜಿಯವರ ನಿಧನ. * ಮಾರ್ಚ್, ೩೦ ೧೯೨೨ ನಮ್ಮಮ್ಮ, ಮೈನೆರೆದರು. * ಜೂನ್ ೧೬, ೧೯೨೨, ನವ ವಧೂವರರಿಗೆ, ನಿಷೇಕ-ಪ್ರಸ್ತದ ಕಾರ್ಯಕ್ರಮ. * ಏಪ್ರಿಲ್, ೧, ...