'ಆರತಿ ಬೆಳಗಿರೆ, ನಾರಿ ಮಣಿಯರು, ನಮ್ಮ 'ಮುದ್ದು ಕುಮಾರಿ ಗೌರಿಗೆ',
ಈ ತರ್ಹ್ ಡ್ರೆಸ್ ಮಾಡ್ಕೊಳ್ಳೋದು ಎಷ್ಟ್ ಚನ್ನಾಗಿರತ್ತೆ ಅಲ್ವಾಮ್ಮ !!! ನೀನ್ ಬೇಕಾದೄ ಮಾಡ್ಕಬೋದು... ನನ್ ಜತೆ, ಚನ್ನಾಗಿರತ್ತಮ್ಮ...... 'ಆರತಿ ಬೆಳಗಿರೆ, ನಾರಿ ಮಣಿಯರು ನಮ್ಮ 'ಮುದ್ದು ಕುಮಾರಿ ಗೌರಿಗೆ', 'ಯಾರ ಕಣ್ಣಿನ ದೃಷ್ಟಿಯಾಗದೆ, ಒಳಿತಾಗಲೆಂದು ಹರಸಿರೆ'. ಎಷ್ಟೊಂದ್ ಮಜ ಬರತ್ತಲ್ವಾಮ್ಮ.!! ನಾನ್ ನಿಂತ್ಕೊತಿನಿ. ಅಪ್ಪ ನೀನು ಇಬೄ ಕುರ್ಚಿಮೇಲ್ ಕೂತ್ಕೊಳ್ಳಿ. ಪರವಾಗಿಲ್ಲ. ಹಾ..... ಹಾಗಾದ್ರೆ, ಫೋಟೋತೆಗೆಯೋರ್ ಯಾರು ? ಸರಿ. ’ಆಟೋ ಸೆಟ್ ಮಾಡಿ,’ ಪರವಾಗಿಲ್ಲ.... . ಬೈ ಬೈ. ಹೇಳಕ್ ಮಜಬರತ್ತಮ್ಮ..... ಹೀಗೇ ಡ್ರೆಸ್ ಮಾಡ್ಕಂಡು ಕೂತ್ಕೊಂಡಿರಣ ಅನ್ಸತ್ತೆ. ಅಲ್ವೆನಮ್ಮ.... ಅಲ್ವೇನಪ್ಪ. ಇವಾಗ ನೀವಿಬೄ ಕೂತ್ಕಳಿ, ನಾನ್ ಫೋಟೋ ತೆಗಿತಿನಿ...!!.... ಹಾಯ್ ಅಜ್ಜ, ಅಜ್ಜಿ. ನನ್ ನೋಡ್ತಿದಿರಾ ತಾನೇ ! ಇನ್ನೂ ಈ ಡ್ರೆಸ್ ಸದ್ಯಕ್ಕೆ ಬಿಚ್ಚಲ್ಲಪ್ಪ..... ಹಾಗೇ ನೋಡ್ತಿರ್ರಿ. ಬೇರೆ ಬಟ್ಟೆ ಹಾಕ್ಕೊಂಡ್ ಬೇಗ ಬಂದ್ಬಿಡ್ತೀನಿ.....