Posts

Showing posts from February, 2010
Image
ಮಲ್ಪೆಯ ಸಮುದ್ರದ ದಂಡೆಯ ಬದಿಯಲ್ಲೇ ಇದೆ. ಬಲರಾಮ ದೇವರ ದೇವಸ್ಥಾನ !  ಇದನ್ನು ’ವಡಬಾಂಡೇಶ್ವರ ದೇವಾಲಯ ’ ವೆಂದು ಕರೆಯುತ್ತಾರೆ. ಉಡುಪಿಮಹಾಕ್ಷೇತ್ರದಲ್ಲಿ ಆಚಾರ್ಯ ಮಾಧ್ವರು, ಶ್ರೀ ಕೃಷ್ಣನ ವಿಗ್ರಹವನ್ನು ಸ್ಥಾಪಿಸಿದಂತೆಯೇ, ಮಲ್ಪೆಯಲ್ಲಿ ವಡಬಾಂಡೇಶ್ವರನನ್ನು ಪ್ರತಿಷ್ಥಾಪಿಸಿದ್ದಾರೆ. ಅದೇಕೋ ಇಲ್ಲಿ ಬರುವ ಭಕ್ತರ ಸಂಖ್ಯೆ ಉಡುಪಿಗೆ ಹೋಲಿಸಿದರೆ, ಕಡಿಮೆ ಎಂದು ಕೆಲವರ ಅನಿಸಿಕೆ. ಅಷ್ಟಕ್ಕೂ ಯಾವಾಗಲೋ ಬರುವ ನಮ್ಮಂತಹವರಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ.  ೧. ’ಪವಿತ್ರಕ್ಷೇತ್ರ ಗೋಕರ್ಣ”: ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಡಲ ತೀರದಲ್ಲಿರುವ ಒಂದು ಪವಿತ್ರಕ್ಷೇತ್ರವೇ ’ಗೋಕರ್ಣ” ವಾಯವ್ಯ ದಿಕ್ಕಿನಲ್ಲಿರುವ ಕಾರವಾರದಿಂದ ಸುಮಾರು ೬೫ ಕಿ. ಮೀ ದೂರದಲ್ಲಿದೆ. ಈ ಪುಣ್ಯಕ್ಷೇತ್ರವನ್ನು ಭಕ್ತರು, ’ಪರಶುರಾಮ ಭೂಮಿ” ’ಭೂಕೈಲಾಸ,”ಎಂಬುದಾಗಿ ಕರೆಯುತ್ತಾರೆ. ಗೋಕರ್ಣದಲ್ಲಿ ಮಹಾಗಣಪತಿ ದೇವಸ್ಥಾನವಿದೆ. ’ಶಿವನದೇವಾಲಯ”ವೂ ಇದ್ದು, ಗೋಕರ್ಣ ಒಂದು ಪವಿತ್ರ ಕ್ಷೇತ್ರವಾಗಿದೆ. ಇದರ ಮತ್ತೊಂದು ಆಕರ್ಷಣೆಯೆಂದರೆ, ದೇವಾಲಯದ ಸಮೀಪದಲ್ಲೇ ೩ ಸುಂದರ ಕಡಲ ತೀರಗಳಿವೆ. ಅವು ತುಂಬಾ ಆಕರ್ಷಣೀಯವಾಗಿದ್ದು, ದೇಶ-ವಿದೇಶಗಳಿಂದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ೨. ’ಗೋಕರ್ಣದ ಸಮುದ್ರತೀರ ಒಂದು ಅರ್ಧ ಚಂದ್ರಾಕಾರವಾಗಿರುವುದು ಇದರ ವಿಶೇಷತೆ”: ವೈದಿಕಧರ್ಮಪ್ರತಿಷ್ಠಾಪನಾಚಾರ್ಯರೆಂದು ಪ್ರಸಿದ್ಧರಾದ ಪರಶಿವನ ಅವ...