ಮಲ್ಪೆಯ ಸಮುದ್ರದ ದಂಡೆಯ ಬದಿಯಲ್ಲೇ ಇದೆ. ಬಲರಾಮ ದೇವರ ದೇವಸ್ಥಾನ ! ಇದನ್ನು ’ವಡಬಾಂಡೇಶ್ವರ ದೇವಾಲಯ ’ ವೆಂದು ಕರೆಯುತ್ತಾರೆ. ಉಡುಪಿಮಹಾಕ್ಷೇತ್ರದಲ್ಲಿ ಆಚಾರ್ಯ ಮಾಧ್ವರು, ಶ್ರೀ ಕೃಷ್ಣನ ವಿಗ್ರಹವನ್ನು ಸ್ಥಾಪಿಸಿದಂತೆಯೇ, ಮಲ್ಪೆಯಲ್ಲಿ ವಡಬಾಂಡೇಶ್ವರನನ್ನು ಪ್ರತಿಷ್ಥಾಪಿಸಿದ್ದಾರೆ. ಅದೇಕೋ ಇಲ್ಲಿ ಬರುವ ಭಕ್ತರ ಸಂಖ್ಯೆ ಉಡುಪಿಗೆ ಹೋಲಿಸಿದರೆ, ಕಡಿಮೆ ಎಂದು ಕೆಲವರ ಅನಿಸಿಕೆ. ಅಷ್ಟಕ್ಕೂ ಯಾವಾಗಲೋ ಬರುವ ನಮ್ಮಂತಹವರಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ.
೧. ’ಪವಿತ್ರಕ್ಷೇತ್ರ ಗೋಕರ್ಣ”:
ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಡಲ ತೀರದಲ್ಲಿರುವ ಒಂದು ಪವಿತ್ರಕ್ಷೇತ್ರವೇ ’ಗೋಕರ್ಣ” ವಾಯವ್ಯ ದಿಕ್ಕಿನಲ್ಲಿರುವ ಕಾರವಾರದಿಂದ ಸುಮಾರು ೬೫ ಕಿ. ಮೀ ದೂರದಲ್ಲಿದೆ. ಈ ಪುಣ್ಯಕ್ಷೇತ್ರವನ್ನು ಭಕ್ತರು, ’ಪರಶುರಾಮ ಭೂಮಿ” ’ಭೂಕೈಲಾಸ,”ಎಂಬುದಾಗಿ ಕರೆಯುತ್ತಾರೆ. ಗೋಕರ್ಣದಲ್ಲಿ ಮಹಾಗಣಪತಿ ದೇವಸ್ಥಾನವಿದೆ. ’ಶಿವನದೇವಾಲಯ”ವೂ ಇದ್ದು, ಗೋಕರ್ಣ ಒಂದು ಪವಿತ್ರ ಕ್ಷೇತ್ರವಾಗಿದೆ. ಇದರ ಮತ್ತೊಂದು ಆಕರ್ಷಣೆಯೆಂದರೆ, ದೇವಾಲಯದ ಸಮೀಪದಲ್ಲೇ ೩ ಸುಂದರ ಕಡಲ ತೀರಗಳಿವೆ. ಅವು ತುಂಬಾ ಆಕರ್ಷಣೀಯವಾಗಿದ್ದು, ದೇಶ-ವಿದೇಶಗಳಿಂದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.
೨. ’ಗೋಕರ್ಣದ ಸಮುದ್ರತೀರ ಒಂದು ಅರ್ಧ ಚಂದ್ರಾಕಾರವಾಗಿರುವುದು ಇದರ ವಿಶೇಷತೆ”:
ವೈದಿಕಧರ್ಮಪ್ರತಿಷ್ಠಾಪನಾಚಾರ್ಯರೆಂದು ಪ್ರಸಿದ್ಧರಾದ ಪರಶಿವನ ಅವತಾರವೆಂದೇ ಖ್ಯಾತರಾಗ, ’ಶ್ರೀಮದ್ ಶಂಕರ ಭಗವದ್ಪಾದ ’ರು, ತಮ್ಮ ಶಿಷ್ಯವೃಂದದೊಡನೆ,”ಮಹಾಬಲದೇವ ’ನನ್ನು ವಿಧಿವತ್ತಾಗಿ ಅರ್ಚಿಸಿದರು. ಆಸ್ತಿಕ ಮತೋಜ್ಜೀವನ ಕಾರ್ಯದಲ್ಲಿ ಕಟಿಬದ್ಧರಾಗಿದ್ದ, ಶ್ರೀಯವರು, ಗೋಕರ್ಣದ ಅಶೋಕೆಯಲ್ಲಿ ಧರ್ಮಾಚಾರ್ಯ ಪೀಠವೊಂದನ್ನು ಸಂಸ್ಥಾಪಿಸಿದ್ದಾರೆ. ತಮ್ಮ ಪ್ರಶಿಷ್ಯರೂ, ’ಶ್ರೀ ಸುರೇಶ್ವರಾಚಾರ್ಯರ ಜ್ಯೇಷ್ಠಶಿಶ್ಯರೂ ಆಗಿದ್ದ, ಶ್ರೀ ವಿದ್ಯಾನಂದಾಚಾರ್ಯರ ’ನ್ನು ಈ ಪೀಠಕ್ಕೆ ಅಧಿಪತಿಯಾಗಿ ನೇಮಿಸಿ, ಮಹರ್ಷಿ ಅಗಸ್ತ್ಯರಿಂದ ಸಂಪೂಜಿತರಾಗಿ, ವರದ ಮುನಿಗಳಿಂದ ಪ್ರದತ್ತವಾಶ್ದ ತಪೋರಾಮಾದಿವಿಗ್ರಹಗಳನ್ನೂ ಚಂದ್ರಮೌಳೇಶ್ವರಲಿಂಗ ಮತ್ತು ಪಾದುಕೆಗಳನ್ನು ಅವರಿಗಿತ್ತು ಯತಿಶ್ರೇಷ್ಥನಾದ ವಿದ್ಯಾನಂದನೇ ನಿತ್ಯವೂ ವಿಧಿವತ್ತಾಗೆ ಮಹಾಬಲನ ಆತ್ಮಲಿಂಗವನ್ನು ಅರ್ಚಿಸುತ್ತಾ ಗೋಕರ್ಣಮಂಡಲಾಧೀಶನಾಗಿ ಧರ್ಮಮಾರ್ಗ ಪ್ರದರ್ಶಕನಾಗೆಂದು ಆದೇಶಿಸಿದರು. ರಘುಕುಲತಿಲಕ ’ಶ್ರೀರಾಮಚಂದ್ರ ’ನೇ ಇಲ್ಲಿಯ ಆರಾಧ್ಯದೇವತೆಯಾದ್ದರಿಂದ, ಈ ಮಠವು ರಘೋತ್ತಮ ಮಠವೆಂದು ಪ್ರಸಿದ್ದಿಯಾಗಲೆಂದು ಆಶೀರ್ವದಿಸಿದರು.
೩. ಪರಂಪರೆ :
”ಶ್ರೀ ಚಿದ್ಭೋಧಭಾರತೀ ಮಹಾಸ್ವಾಮಿಗಳ’ ಮೂಲಕ ಮುಂದುವರೆದ ಈ ಅವಿಚ್ಛಿನ್ನಗುರುಪರಂಪರೆಯ ”ಶಾಂಕರಪೀಠದ ೧೦ ನೆಯ ಅಧಿಪತಿಗಳಾಗಿದ್ದ, ಶೀ ಚಿದ್ಭೋಧ ಭಾರತೀ ಮಹಾಸ್ವಾಮಿಗಳಿ’ಗೆ ವಿಜಯನಗರ ಸಾಮ್ರಾಜ್ಯ ಸ್ಥಾಪಕರಾ” ಶ್ರೀ ವಿದ್ಯಾರಣ್ಯ ಮಹಾಸ್ವಾಮಿಗಳು’ ( ಶೃಂಗೇರಿ ಶಾರದಾ-ಪೀಠಾಧಿಪತಿಗಳೂ ಆಗಿದ್ದರು) ಅವರು ತಮ್ಮ ಜ್ಯೇಷ್ಥಪರಂಪರೆಯ ಶಾಂಕರ ಪೀಠವೆಂಬ ಹಿನ್ನೆಲೆಯಲ್ಲಿ ಸಿಂಹಾಸನ, ಕಿರೀಟ ಮೊದಲಾದ ರಾಜ ಲಾಂಛನಗಳನ್ನು ಶ್ರೀಕ್ಷೇತ್ರಾಧೀಶ ಮಹಾಬಲೇಶ್ವರನ ಸನ್ನಿಧಿಯಲ್ಲಿತ್ತು ಗೌರವಿಸಿದರು.
ಈ ರಘೋತ್ತಮ ಮಠದ ಪೀಠಾಧಿಪತಿಗಳು, ಆಯಾಕಾಲದಲ್ಲಿ ಅಂದಿನ ಆಳರಸರಿಗೆ, ಸಮಾಜಕ್ಕೆ ಧಾರ್ಮಿಕ ಮಾರ್ಗದರ್ಶನಮಾಡುತ್ತಿದ್ದರು. ಅರಸರು, ಮಹಾಬಲೇಶ್ವರನ ಸನ್ನಿಧಾನಕ್ಕೆ ಅಮೃತಪಡಿ, ನಿತ್ಯ ನೈಮಿತ್ತಿಕ ಕಟ್ಟಲೆಗಳು, ಯತಿಭಿಕ್ಷೆ, ಮೊದಲಾದ ಧರ್ಮಕಾರ್ಯಗಳಿಗೆ ಸಹಾಯವಾಗಿ, ಅನೇಕ ಅಗ್ರಹಾರಗಳನ್ನೂ, ಭೂಮಿ ಕಾಣಿಕೆಗಳನ್ನು ಉಂಬಳಿಯನ್ನಾಗಿ ಬಿಟ್ಟು, ಶ್ರೀಮಠಕ್ಕೆ ಭಕ್ತಿಭಾವದಿಂದ ನಡೆದುಕೊಳ್ಳುತ್ತಿದ್ದರು.[ಧರ್ಮಶಾಸನಗಳ ಪ್ರಕಾರ]
೪. ’ಗೋಕರ್ಣದ ಶ್ರೀರಘೋತ್ತಮ ಮಠವು ಶ್ರೀರಾಮಚಂದ್ರಾಪುರಮಠವೆಂದು ನಾಮಾಂತರಗೊಂಡ ಇತಿಹಾಸ”:
೫. ಗೋಕರ್ಣ ಕ್ಷೇತ್ರದ ಮಠಾಧಿಪತಿಗಳ ಪರಂಪರೆ :
’೧೧ ನೆಯ ಪೀಠಾಧಿಪತಿ, ರಾಘವೇಶ್ವರ ಭಾರತೀ ಮಹಾದ್ವಾಮಿಗಳು” (ಕ್ರಿ. ಶ. ಸುಮಾರು ೧೪೦೦)
ಅವರ ಶಿಷ್ಯ, ’ಶ್ರೀ ರಾಮಚಂದ್ರಭಾರತೀ ಮಹಾಸ್ವಾಮಿಗಳು,”ಕೆಳದಿ ಸಂಸ್ಥಾನದ ಅರಸರ ಪ್ರಾರ್ಥನೆಯಂತೆ, ಸಂಸ್ಥನಕ್ಕೆ ಸೇರಿದ ಹೊಸನಗರ ಸಮೀಪದ ಅಗಸ್ತ್ಯಾಶ್ರಮ ಪ್ರದೇಶದಲ್ಲಿ ನೂತನ ಮಠಾಯತನವೊಂದನ್ನು ನಿರ್ಮಿಸಿದರು.
ರಾಮಚಂದ್ರಪುರವೆಂದು ಉಂಬಳಿಯಾಗಿ ಬಂದ ಗ್ರಾಮದ ಹೆಸರನ್ನು ರಾಮಚಂದ್ರಪುರವೆಂದು ಕರೆಯಲಾಯಿತು. ಗೋಕರ್ಣ ಮಹಾಕ್ಶೇತ್ರದ ಶ್ರೀ ರಘೋತ್ತಮಮಠ ಮತ್ತು ಶ್ರೀ ಗೋಕರ್ಣಮಹಾಬಲೆಶ್ವರ ದೇವಾಲಯಗಳ ಆಡಳಿತ ವ್ಯವಸ್ಥೆಯೂ ಸಹಜವಾಗಿಯೇ ಹೊಸನಗರದ ’ಶ್ರೀ ರಾಮಚಂದ್ರಾಪುರಮಠ ’ಕ್ಕೆ ಸಂದಿತು.
ಕ್ರಮೇಣ ಬದಲಾದ ರಾಜ್ಯಡಳಿತ ವ್ಯವಸ್ಥೆಯಲ್ಲಿ ಶ್ರೀ ಗೋಕರ್ಣ ಕ್ಷೇತ್ರದ ಮಹಾಬಲೇಶ್ವರ ದೇವಸ್ಥಾನದ ನಿರ್ವಹಣಾ ಸ್ವರೂಪ ಪರಿವರ್ತನೆಹೊಂದಿದರೂ ದೇವಾಲಯದ ಸಂಪೂರ್ಣ ಸ್ವಾಮಿತ್ವವು ಶ್ರೀಮಠದ ಅಧಿಕಾರವಧಿಯಲ್ಲೇ ಇತ್ತು.
ಇವುಗಳಿಗೆ ಬಲವಾದ ದಾಖಲೆಗಳಿವೆ. ೧೯೮೩ ರಲ್ಲಿ ’ಶ್ರೀ ಮಠದ ೩೫ ನೆಯ ಪೀಠಾಧಿಪತಿ, ಶ್ರೀ ರಾಘವೇಂದ್ರಭಾರತೀ ಸ್ವಾಮಿಗ” ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಮಹಾಬಲೇಶ್ವರ ದೇವರ ಅಷ್ಟಬಂಧಮಹೋತ್ಸವ ಜರುಗಿತು.
ಸನ್ ೨೦೦೪ ರಲ್ಲಿ ಶ್ರೀ ಮಹಾಬಲೇಶ್ವರ ದೇವಸ್ಥಾನದ ಧರ್ಮದರ್ಶಿಗಳು ಮೃತರಾಗಿದ್ದರಿಂದ ದೇವಾಲಯದ ನಿರ್ವಹಣೆಯ ಕಾರ್ಯ ಅನಾಯಕವಾಯಿತು. ಹಾಗೆಯೇ ೨೦೦೮ ರಲ್ಲಿ ಸ್ಥಳೀಯ ಉಪಾಧಿವಂತ ಮಂಡಲ, ವೈದಿಕ ಸಮುದಾಯ ಪಂಚಾಯತ್, ಶಾಸಕರೆಲ್ಲರ ಕೋರಿಕೆಯ ಮೇರೆಗೆ, ಸರ್ಕಾರವೂ ಈ ಹಿಂದೆ ಹಿಂದೂ ಧಾರ್ಮಿಕ ದೇವಾಲಯಗಳ ಏಕರೂಪಶಾಸನದನ್ವಯ ಹೊರಡಿಸಿದ ಅಧಿಸೂಚನೆಯ ಪಟ್ಟಿಯಲ್ಲಿ ತಪ್ಪಾಗಿ ಸೇರ್ಪಡೆಯಾಗಿದ್ದ
ದೇವಾಲಯದ ಹೆಸರನ್ನು ಪಟ್ಟಿಯಿಂದ ಹೊರತು ಪಡಿಸಿದ್ದಲ್ಲದೆ ದೇವಾಲಯದ ನಿರ್ವಹಣೆಯ ಜವಾಬ್ದಾರಿಯನ್ನು ಶ್ರೀಮಠದ ೩೬ ನೆಯ ಪೀಠಾಧಿಪತಿ, ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮಿಗಳವರಿಗೆ ಹಸ್ತಾಂತರಿಸಲಾಯಿತು.
೬. ’ಶ್ರೀಮಠದ ೩೬ ನೆಯ ಪೀಠಾಧಿಪತಿ, ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮಿಗಳವರ ಸಮಯದಲ್ಲಿ ಆದ ಸುಧಾರಣೆಗಳು”:
. ೨೦೦೮ ಆಗಸ್ಟ್, ೧೫ ರಂದು, ಶ್ರೀಮಠದ ಸುಪರ್ದಿಗೆ ಬಂದ ಅನಂತರ ದೇವಾಲಯದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಯಿತು. ದೇವಾಲಯ ಮತ್ತು ಪರಿಸರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ, ಭಕ್ತರಿಗೆ ಕುಡಿಯುವ ನೀರಿನ ಮತ್ತು ಕೆಲವು ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಯಿತು. ಗುರುಪೀಠಕ್ಕೆ ನಡೆದುಕೊಳ್ಳುವವರಲ್ಲಿ ಎಲ್ಲಾವರ್ಗದ ಭಕ್ತರನ್ನೂ ಪರಿಗಣಿಸಲಾಯಿತು. ’ಅಗೇರ” ’ಹಳ್ಳೇರ”ಮುಂತಾದ ಕೆಳವರ್ಗದ ಶಿಷ್ಯಬಂಧುಗಳು ಪೂಜೆಯಲ್ಲಿ ಭಾಗವಹಿಸುವುದಲ್ಲದೆ, ಕ್ಷೇತ್ರಾಭಿವೃದ್ಧಿಗೆ ತಮ್ಮ ಸಲಹೆ ಸಹಕಾರಗಳನ್ನು ಕೊಟ್ಟಿದ್ದನ್ನು ದಾಖಲಿಸಲಾಯಿತು. ನಾಡವರ ಸಮಾಮ, ಮತ್ತು ಹಳ್ಳೇರ ಸಮಾಜದ ಬಂಧುಗಳಿಗೆ ಗುರುಪೀಠವಿರಲಿಲ್ಲ. ಅವರನ್ನು ಶ್ರೀರಾಮಚಂದ್ರಪುರಮಠದ ಗುರುಪೀಠವು ತಮ್ಮ ಮಠದ ಶಿಷ್ಯರೆಂದು ಅಂಗೀಕರಿಸಲಾಯಿತು. ಇದೇ ಸಂದರ್ಭದಲ್ಲಿ ’ಗಂಗಾವಳಿ”, ’ದುಬ್ಬನ ಸಸ”, ’ಹಿರೇಗುತ್ತಿ” ’ ತದಡಿ”,”ಕಡಮೆ’ ಮೊದಲಾದ ೯ ಗ್ರಾಮಗಳಲ್ಲಿ ಗ್ರಾಮಸಂಪರ್ಕಸಭೆಯನ್ನು ನಡೆಸಲಾಯಿತು. ತಮ್ಮ ಪರಿಸರದ ಗ್ರಾಮಗಳ ಮತ್ತು ಗೋಕರ್ಣಕ್ಷೇತ್ರದ ಅಭಿವೃದ್ಧಿಯ ವಿಷಯದಲ್ಲಿ ಎಲ್ಲಾ ಗ್ರಾಮಸ್ಥರೂ ನಿರಂತರ ಸಹಕಾರವನ್ನು ಘೋಷಿಸಿದರಲ್ಲದೆ, ದೇವಾಲಯವು ಶ್ರೀಮಠದ ನಿರ್ವಹಣೆಗೆ ಒಳಪಟ್ಟದ್ದನ್ನು ಸ್ವಾಗತಿಸಿದರು.
೨. ಗೋಕರ್ಣ ಹಾಗೂ ಪರಿಸರದ ’ಹಾಲಕ್ಕಿ ಸಮಾಜದ ಬಂಧುಗಳು” ’ಗೋಕರ್ಣದ ವೀರಭದ್ರ ದೇವಾಲಯ ’ದ ನವೀಕರಣ ಕಾರ್ಯವನ್ನು ತಮ್ಮ ಸಮಾಜದ ವತಿಯಿಂದ ನಡೆಸುವುದಾಗಿ ವಾಗ್ದಾನಮಾಡಿದರು. ಅಂತೆಯೇ”ಹಿರೇಗುತ್ತಿ,’”ತೊರ್ಕೆ ಗ್ರಾಮಸ್ಥರು’, ’ ಮಾದನಗೇರಿ ’ಯಲ್ಲಿ”ಸ್ವಾಗತ ಮಹಾದ್ವಾರ ’ವನ್ನು ನಿರ್ಮಿಸಿಕೊಡಲು ಮುಂದಾಗಿದ್ದು ಉಳಿದ ಅನೇಕ ಸಮಾಜಗಳ ಬಂಧುಗಳೂ ಸಹಿತ”ಶ್ರೀ ಮಹಾಬಲೇಶ್ವರದೇವಾಲಯದ ನವೀಕರಣ’ ಕ್ಕೆ ತಮ್ಮ ಪಾಲನ್ನೂ ಶ್ರೀ ಗುರುಪೀಠಕ್ಕೆ ನಿವೇದಿಸಿಕೊಂಡರು.
೩. ಶರನ್ನವರಾತ್ರಿಯ ವಿಜಯದಶಮಿಯಂದು ಶ್ರೀದೇವಾಲಯದ ವತಿಯಿಂದ ಯಾತ್ರಿಕಭಕ್ತರಿಗೆ ಪ್ರಸಾದ್ ಭೋಜನದ ವ್ಯವಸ್ಥೆಯಾದ ’ಅಮೃತಾನ್ನು’ ವನ್ನು ಸುರುಮಾಡಲಾಗಿದ್ದು ಪ್ರತಿದಿನವೂ ೨,೦೦೦ ಕ್ಕೂ ಮೀರಿ ಭಕ್ತರು ಈ ವ್ಯವಸ್ಥೆಯ ಸದುಪಯೋಗವನ್ನು ಪಡೆಯುತಿದ್ದಾರೆ. ಪರಮ ಪೂಜ್ಯ ’ಶ್ರೀ ರಾಘವೇಶ್ವರಭಾರತೀಸ್ವಾಮಿಗಳ ಶ್ರೀ ಕ್ಷೇತ್ರಗೋಕರ್ಣದ ಪುನರುತ್ಥಾನ ಮಹಾಸಂಕಲ್ಪ ’ದ ಅಂಗವಾಗಿ ಗೋಕರ್ಣ ಮತ್ತು ಪರಿಸರದಲ್ಲಿ ಆರ್ಥಿಕವಾಗಿ ಮತ್ತು ಸ್ಮಾಜಿಕವಾಗಿ ಹಿಂದುಳಿದ ಜನರಿಗೆ ಸಹಸ್ರಧೇನುಪ್ರದಾನರೂಪವಾದ ಸಾವಿರಗೋದಾನ ಕಾರ್ಯಕ್ರಮದ ಶುಭಾರಂಭವನ್ನು ೨೦೦೮ ರ ಅಕ್ಟೋಬರ್, ೧೦ ರಂದು, ನಡೆಸಲಾಯಿತು. ಶ್ರೀ ದೇವಾಲಯದ ವತಿಯಿಂದ ಒಂದು ಸಹಸ್ರದೇಶೀಗೋವುಗಳನ್ನು ಅರ್ಹರಾದ ಫಲಾನುಭವಿಗಳಿಗೆ ವಿತರಿಸಲು ನಿರ್ಧಾರತೆಗೆದುಕೊಳ್ಳಲಾಯಿತು. ಅದರಂತೆ ’ಮಾನ್ಯಸಚಿವರು” ’ವಿಧಾನಪರಿಷತ್ ಸಭಾಪತಿಗಳು”ಮತ್ತು’ ಶಾಸಕರ ಉಪಸ್ಥಿತಿ ’ಯಲ್ಲಿ ಸಾಂಕೇತಿಕವಾಗಿ ೧೦೮ ಗೋವುಗಳನ್ನು ವಿವಿಧ ಸಾಮಾಜಿಕ ಅರ್ಹರಾದ ವ್ಯಕ್ತಿಗಳಿಗೆ ನೀಡಲಾಯಿತು. ಉಳಿದ ಹಸುಗಳನ್ನು ಕ್ರಮವಾಗಿ ಹಂಚಲಾಗುವುದು.
೧. ’ಪವಿತ್ರಕ್ಷೇತ್ರ ಗೋಕರ್ಣ”:
ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಡಲ ತೀರದಲ್ಲಿರುವ ಒಂದು ಪವಿತ್ರಕ್ಷೇತ್ರವೇ ’ಗೋಕರ್ಣ” ವಾಯವ್ಯ ದಿಕ್ಕಿನಲ್ಲಿರುವ ಕಾರವಾರದಿಂದ ಸುಮಾರು ೬೫ ಕಿ. ಮೀ ದೂರದಲ್ಲಿದೆ. ಈ ಪುಣ್ಯಕ್ಷೇತ್ರವನ್ನು ಭಕ್ತರು, ’ಪರಶುರಾಮ ಭೂಮಿ” ’ಭೂಕೈಲಾಸ,”ಎಂಬುದಾಗಿ ಕರೆಯುತ್ತಾರೆ. ಗೋಕರ್ಣದಲ್ಲಿ ಮಹಾಗಣಪತಿ ದೇವಸ್ಥಾನವಿದೆ. ’ಶಿವನದೇವಾಲಯ”ವೂ ಇದ್ದು, ಗೋಕರ್ಣ ಒಂದು ಪವಿತ್ರ ಕ್ಷೇತ್ರವಾಗಿದೆ. ಇದರ ಮತ್ತೊಂದು ಆಕರ್ಷಣೆಯೆಂದರೆ, ದೇವಾಲಯದ ಸಮೀಪದಲ್ಲೇ ೩ ಸುಂದರ ಕಡಲ ತೀರಗಳಿವೆ. ಅವು ತುಂಬಾ ಆಕರ್ಷಣೀಯವಾಗಿದ್ದು, ದೇಶ-ವಿದೇಶಗಳಿಂದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.
೨. ’ಗೋಕರ್ಣದ ಸಮುದ್ರತೀರ ಒಂದು ಅರ್ಧ ಚಂದ್ರಾಕಾರವಾಗಿರುವುದು ಇದರ ವಿಶೇಷತೆ”:
ವೈದಿಕಧರ್ಮಪ್ರತಿಷ್ಠಾಪನಾಚಾರ್ಯರೆಂದು ಪ್ರಸಿದ್ಧರಾದ ಪರಶಿವನ ಅವತಾರವೆಂದೇ ಖ್ಯಾತರಾಗ, ’ಶ್ರೀಮದ್ ಶಂಕರ ಭಗವದ್ಪಾದ ’ರು, ತಮ್ಮ ಶಿಷ್ಯವೃಂದದೊಡನೆ,”ಮಹಾಬಲದೇವ ’ನನ್ನು ವಿಧಿವತ್ತಾಗಿ ಅರ್ಚಿಸಿದರು. ಆಸ್ತಿಕ ಮತೋಜ್ಜೀವನ ಕಾರ್ಯದಲ್ಲಿ ಕಟಿಬದ್ಧರಾಗಿದ್ದ, ಶ್ರೀಯವರು, ಗೋಕರ್ಣದ ಅಶೋಕೆಯಲ್ಲಿ ಧರ್ಮಾಚಾರ್ಯ ಪೀಠವೊಂದನ್ನು ಸಂಸ್ಥಾಪಿಸಿದ್ದಾರೆ. ತಮ್ಮ ಪ್ರಶಿಷ್ಯರೂ, ’ಶ್ರೀ ಸುರೇಶ್ವರಾಚಾರ್ಯರ ಜ್ಯೇಷ್ಠಶಿಶ್ಯರೂ ಆಗಿದ್ದ, ಶ್ರೀ ವಿದ್ಯಾನಂದಾಚಾರ್ಯರ ’ನ್ನು ಈ ಪೀಠಕ್ಕೆ ಅಧಿಪತಿಯಾಗಿ ನೇಮಿಸಿ, ಮಹರ್ಷಿ ಅಗಸ್ತ್ಯರಿಂದ ಸಂಪೂಜಿತರಾಗಿ, ವರದ ಮುನಿಗಳಿಂದ ಪ್ರದತ್ತವಾಶ್ದ ತಪೋರಾಮಾದಿವಿಗ್ರಹಗಳನ್ನೂ ಚಂದ್ರಮೌಳೇಶ್ವರಲಿಂಗ ಮತ್ತು ಪಾದುಕೆಗಳನ್ನು ಅವರಿಗಿತ್ತು ಯತಿಶ್ರೇಷ್ಥನಾದ ವಿದ್ಯಾನಂದನೇ ನಿತ್ಯವೂ ವಿಧಿವತ್ತಾಗೆ ಮಹಾಬಲನ ಆತ್ಮಲಿಂಗವನ್ನು ಅರ್ಚಿಸುತ್ತಾ ಗೋಕರ್ಣಮಂಡಲಾಧೀಶನಾಗಿ ಧರ್ಮಮಾರ್ಗ ಪ್ರದರ್ಶಕನಾಗೆಂದು ಆದೇಶಿಸಿದರು. ರಘುಕುಲತಿಲಕ ’ಶ್ರೀರಾಮಚಂದ್ರ ’ನೇ ಇಲ್ಲಿಯ ಆರಾಧ್ಯದೇವತೆಯಾದ್ದರಿಂದ, ಈ ಮಠವು ರಘೋತ್ತಮ ಮಠವೆಂದು ಪ್ರಸಿದ್ದಿಯಾಗಲೆಂದು ಆಶೀರ್ವದಿಸಿದರು.
೩. ಪರಂಪರೆ :
”ಶ್ರೀ ಚಿದ್ಭೋಧಭಾರತೀ ಮಹಾಸ್ವಾಮಿಗಳ’ ಮೂಲಕ ಮುಂದುವರೆದ ಈ ಅವಿಚ್ಛಿನ್ನಗುರುಪರಂಪರೆಯ ”ಶಾಂಕರಪೀಠದ ೧೦ ನೆಯ ಅಧಿಪತಿಗಳಾಗಿದ್ದ, ಶೀ ಚಿದ್ಭೋಧ ಭಾರತೀ ಮಹಾಸ್ವಾಮಿಗಳಿ’ಗೆ ವಿಜಯನಗರ ಸಾಮ್ರಾಜ್ಯ ಸ್ಥಾಪಕರಾ” ಶ್ರೀ ವಿದ್ಯಾರಣ್ಯ ಮಹಾಸ್ವಾಮಿಗಳು’ ( ಶೃಂಗೇರಿ ಶಾರದಾ-ಪೀಠಾಧಿಪತಿಗಳೂ ಆಗಿದ್ದರು) ಅವರು ತಮ್ಮ ಜ್ಯೇಷ್ಥಪರಂಪರೆಯ ಶಾಂಕರ ಪೀಠವೆಂಬ ಹಿನ್ನೆಲೆಯಲ್ಲಿ ಸಿಂಹಾಸನ, ಕಿರೀಟ ಮೊದಲಾದ ರಾಜ ಲಾಂಛನಗಳನ್ನು ಶ್ರೀಕ್ಷೇತ್ರಾಧೀಶ ಮಹಾಬಲೇಶ್ವರನ ಸನ್ನಿಧಿಯಲ್ಲಿತ್ತು ಗೌರವಿಸಿದರು.
ಈ ರಘೋತ್ತಮ ಮಠದ ಪೀಠಾಧಿಪತಿಗಳು, ಆಯಾಕಾಲದಲ್ಲಿ ಅಂದಿನ ಆಳರಸರಿಗೆ, ಸಮಾಜಕ್ಕೆ ಧಾರ್ಮಿಕ ಮಾರ್ಗದರ್ಶನಮಾಡುತ್ತಿದ್ದರು. ಅರಸರು, ಮಹಾಬಲೇಶ್ವರನ ಸನ್ನಿಧಾನಕ್ಕೆ ಅಮೃತಪಡಿ, ನಿತ್ಯ ನೈಮಿತ್ತಿಕ ಕಟ್ಟಲೆಗಳು, ಯತಿಭಿಕ್ಷೆ, ಮೊದಲಾದ ಧರ್ಮಕಾರ್ಯಗಳಿಗೆ ಸಹಾಯವಾಗಿ, ಅನೇಕ ಅಗ್ರಹಾರಗಳನ್ನೂ, ಭೂಮಿ ಕಾಣಿಕೆಗಳನ್ನು ಉಂಬಳಿಯನ್ನಾಗಿ ಬಿಟ್ಟು, ಶ್ರೀಮಠಕ್ಕೆ ಭಕ್ತಿಭಾವದಿಂದ ನಡೆದುಕೊಳ್ಳುತ್ತಿದ್ದರು.[ಧರ್ಮಶಾಸನಗಳ ಪ್ರಕಾರ]
೪. ’ಗೋಕರ್ಣದ ಶ್ರೀರಘೋತ್ತಮ ಮಠವು ಶ್ರೀರಾಮಚಂದ್ರಾಪುರಮಠವೆಂದು ನಾಮಾಂತರಗೊಂಡ ಇತಿಹಾಸ”:
೫. ಗೋಕರ್ಣ ಕ್ಷೇತ್ರದ ಮಠಾಧಿಪತಿಗಳ ಪರಂಪರೆ :
’೧೧ ನೆಯ ಪೀಠಾಧಿಪತಿ, ರಾಘವೇಶ್ವರ ಭಾರತೀ ಮಹಾದ್ವಾಮಿಗಳು” (ಕ್ರಿ. ಶ. ಸುಮಾರು ೧೪೦೦)
ಅವರ ಶಿಷ್ಯ, ’ಶ್ರೀ ರಾಮಚಂದ್ರಭಾರತೀ ಮಹಾಸ್ವಾಮಿಗಳು,”ಕೆಳದಿ ಸಂಸ್ಥಾನದ ಅರಸರ ಪ್ರಾರ್ಥನೆಯಂತೆ, ಸಂಸ್ಥನಕ್ಕೆ ಸೇರಿದ ಹೊಸನಗರ ಸಮೀಪದ ಅಗಸ್ತ್ಯಾಶ್ರಮ ಪ್ರದೇಶದಲ್ಲಿ ನೂತನ ಮಠಾಯತನವೊಂದನ್ನು ನಿರ್ಮಿಸಿದರು.
ರಾಮಚಂದ್ರಪುರವೆಂದು ಉಂಬಳಿಯಾಗಿ ಬಂದ ಗ್ರಾಮದ ಹೆಸರನ್ನು ರಾಮಚಂದ್ರಪುರವೆಂದು ಕರೆಯಲಾಯಿತು. ಗೋಕರ್ಣ ಮಹಾಕ್ಶೇತ್ರದ ಶ್ರೀ ರಘೋತ್ತಮಮಠ ಮತ್ತು ಶ್ರೀ ಗೋಕರ್ಣಮಹಾಬಲೆಶ್ವರ ದೇವಾಲಯಗಳ ಆಡಳಿತ ವ್ಯವಸ್ಥೆಯೂ ಸಹಜವಾಗಿಯೇ ಹೊಸನಗರದ ’ಶ್ರೀ ರಾಮಚಂದ್ರಾಪುರಮಠ ’ಕ್ಕೆ ಸಂದಿತು.
ಕ್ರಮೇಣ ಬದಲಾದ ರಾಜ್ಯಡಳಿತ ವ್ಯವಸ್ಥೆಯಲ್ಲಿ ಶ್ರೀ ಗೋಕರ್ಣ ಕ್ಷೇತ್ರದ ಮಹಾಬಲೇಶ್ವರ ದೇವಸ್ಥಾನದ ನಿರ್ವಹಣಾ ಸ್ವರೂಪ ಪರಿವರ್ತನೆಹೊಂದಿದರೂ ದೇವಾಲಯದ ಸಂಪೂರ್ಣ ಸ್ವಾಮಿತ್ವವು ಶ್ರೀಮಠದ ಅಧಿಕಾರವಧಿಯಲ್ಲೇ ಇತ್ತು.
ಇವುಗಳಿಗೆ ಬಲವಾದ ದಾಖಲೆಗಳಿವೆ. ೧೯೮೩ ರಲ್ಲಿ ’ಶ್ರೀ ಮಠದ ೩೫ ನೆಯ ಪೀಠಾಧಿಪತಿ, ಶ್ರೀ ರಾಘವೇಂದ್ರಭಾರತೀ ಸ್ವಾಮಿಗ” ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಮಹಾಬಲೇಶ್ವರ ದೇವರ ಅಷ್ಟಬಂಧಮಹೋತ್ಸವ ಜರುಗಿತು.
ಸನ್ ೨೦೦೪ ರಲ್ಲಿ ಶ್ರೀ ಮಹಾಬಲೇಶ್ವರ ದೇವಸ್ಥಾನದ ಧರ್ಮದರ್ಶಿಗಳು ಮೃತರಾಗಿದ್ದರಿಂದ ದೇವಾಲಯದ ನಿರ್ವಹಣೆಯ ಕಾರ್ಯ ಅನಾಯಕವಾಯಿತು. ಹಾಗೆಯೇ ೨೦೦೮ ರಲ್ಲಿ ಸ್ಥಳೀಯ ಉಪಾಧಿವಂತ ಮಂಡಲ, ವೈದಿಕ ಸಮುದಾಯ ಪಂಚಾಯತ್, ಶಾಸಕರೆಲ್ಲರ ಕೋರಿಕೆಯ ಮೇರೆಗೆ, ಸರ್ಕಾರವೂ ಈ ಹಿಂದೆ ಹಿಂದೂ ಧಾರ್ಮಿಕ ದೇವಾಲಯಗಳ ಏಕರೂಪಶಾಸನದನ್ವಯ ಹೊರಡಿಸಿದ ಅಧಿಸೂಚನೆಯ ಪಟ್ಟಿಯಲ್ಲಿ ತಪ್ಪಾಗಿ ಸೇರ್ಪಡೆಯಾಗಿದ್ದ
ದೇವಾಲಯದ ಹೆಸರನ್ನು ಪಟ್ಟಿಯಿಂದ ಹೊರತು ಪಡಿಸಿದ್ದಲ್ಲದೆ ದೇವಾಲಯದ ನಿರ್ವಹಣೆಯ ಜವಾಬ್ದಾರಿಯನ್ನು ಶ್ರೀಮಠದ ೩೬ ನೆಯ ಪೀಠಾಧಿಪತಿ, ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮಿಗಳವರಿಗೆ ಹಸ್ತಾಂತರಿಸಲಾಯಿತು.
೬. ’ಶ್ರೀಮಠದ ೩೬ ನೆಯ ಪೀಠಾಧಿಪತಿ, ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮಿಗಳವರ ಸಮಯದಲ್ಲಿ ಆದ ಸುಧಾರಣೆಗಳು”:
೧. ೨೦೦೮ ಆಗಸ್ಟ್, ೧೫ ರಂದು, ಶ್ರೀಮಠದ ಸುಪರ್ದಿಗೆ ಬಂದ ಅನಂತರ ದೇವಾಲಯದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಯಿತು. ದೇವಾಲಯ ಮತ್ತು ಪರಿಸರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ, ಭಕ್ತರಿಗೆ ಕುಡಿಯುವ ನೀರಿನ ಮತ್ತು ಕೆಲವು ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಯಿತು. ಗುರುಪೀಠಕ್ಕೆ ನಡೆದುಕೊಳ್ಳುವವರಲ್ಲಿ ಎಲ್ಲಾವರ್ಗದ ಭಕ್ತರನ್ನೂ ಪರಿಗಣಿಸಲಾಯಿತು. ’ಅಗೇರ” ’ಹಳ್ಳೇರ”ಮುಂತಾದ ಕೆಳವರ್ಗದ ಶಿಷ್ಯಬಂಧುಗಳು ಪೂಜೆಯಲ್ಲಿ ಭಾಗವಹಿಸುವುದಲ್ಲದೆ, ಕ್ಷೇತ್ರಾಭಿವೃದ್ಧಿಗೆ ತಮ್ಮ ಸಲಹೆ ಸಹಕಾರಗಳನ್ನು ಕೊಟ್ಟಿದ್ದನ್ನು ದಾಖಲಿಸಲಾಯಿತು. ನಾಡವರ ಸಮಾಮ, ಮತ್ತು ಹಳ್ಳೇರ ಸಮಾಜದ ಬಂಧುಗಳಿಗೆ ಗುರುಪೀಠವಿರಲಿಲ್ಲ. ಅವರನ್ನು ಶ್ರೀರಾಮಚಂದ್ರಪುರಮಠದ ಗುರುಪೀಠವು ತಮ್ಮ ಮಠದ ಶಿಷ್ಯರೆಂದು ಅಂಗೀಕರಿಸಲಾಯಿತು. ಇದೇ ಸಂದರ್ಭದಲ್ಲಿ ’ಗಂಗಾವಳಿ”, ’ದುಬ್ಬನ ಸಸ”, ’ಹಿರೇಗುತ್ತಿ” ’ ತದಡಿ”,”ಕಡಮೆ’ ಮೊದಲಾದ ೯ ಗ್ರಾಮಗಳಲ್ಲಿ ಗ್ರಾಮಸಂಪರ್ಕಸಭೆಯನ್ನು ನಡೆಸಲಾಯಿತು. ತಮ್ಮ ಪರಿಸರದ ಗ್ರಾಮಗಳ ಮತ್ತು ಗೋಕರ್ಣಕ್ಷೇತ್ರದ ಅಭಿವೃದ್ಧಿಯ ವಿಷಯದಲ್ಲಿ ಎಲ್ಲಾ ಗ್ರಾಮಸ್ಥರೂ ನಿರಂತರ ಸಹಕಾರವನ್ನು ಘೋಷಿಸಿದರಲ್ಲದೆ, ದೇವಾಲಯವು ಶ್ರೀಮಠದ ನಿರ್ವಹಣೆಗೆ ಒಳಪಟ್ಟದ್ದನ್ನು ಸ್ವಾಗತಿಸಿದರು.

Comments