ನಮ್ಮ ಪುಣೆನಗರ ಭೇಟಿ !
ಪ್ರಕಾಶನ ಮನೆಯ ಮುಂದೆಯೇ ರೋಟರಿ ಕ್ಲಬ್ ನವರು ನಿರ್ವಹಿಸುತ್ತಿರುವ ಸುಂದರವಾದ ಪಾರ್ಕ್, ಇದೆ. ನಾವು ಸಾಯಂಕಾಲ ಅಲ್ಲಿ ಜಾಗಿಂಗ್ ಮಾಡಿದೆವು. ನಾನು ಸರೋಜ ಮತ್ತು ರವಿ, ೨೦೧೦ ರ ಮಾರ್ಚ್ ತಿಂಗಳ ೭ ನೇ ತಾರೀಖು, ರವಿವಾರ, ಪ್ರಕಾಶನ ಮನೆಗೆ ಭೇಟಿಕೊಡಲು ಪುಣೆಗೆ ಹೋದೆವು. ಅಲ್ಲಿದ್ದ ಸುಮಾರು ಒಂದುವಾರದ ವಾಸ್ತ್ಯವ್ಯ ನಮಗೆ ಕೊಟ್ಟ ಮುದ ಅವರ್ಣನೀಯ ! ಪ್ರಕಾಶ್ ಈಗ ತನ್ನ ಪಿ. ಎಚ್. ಡಿ. ಪದವಿಗಾಗಿ ಅಭ್ಯಾಸ ಮಾಡುತ್ತಿದ್ದಾನೆ. ಅವನಿಗೆ ಪ್ರಿಯವಾದ ಮಲ್ಖಂಬ್ ಮತ್ತು ಈಜು ಕಲಿಯುವಿಕೆ, ಫ್ರೆಂಚ್ ಭಾಷೆ, ಮತ್ತು ಸಂಗೀತ [ಕೊಳಲು ವಾದ್ಯ] ಮುಂತಾದ ಹವ್ಯಾಸಗಳ ಜೊತೆಗೆ, ಅಭ್ಯಾಸಗಳಿಂದಾಗಿ ಬಿಡುವಿಲ್ಲದ ದಿನಚರಿಯನ್ನು ಹೊಂದಿದ್ದಾನೆ. ನಾವೇ ಪುಣೆನಗರ ಪ್ರದಕ್ಷಿಣೆ ಮಾಡಿ ಬಂದೆವು. ಅವನಿಗೆ ನಮ್ಮ ಜೊತೆಗೆ ಬರಲು ಪುರುಸೊತ್ತಿರಲಿಲ್ಲ ! ಪುಣೆನಗರದಲ್ಲಿ ಬ್ರಿಟಿಷ್ ಸರಕಾರ ಸ್ಥಾಪಿಸಿದ ಅತಿ ಹಳೆಯ ವಿಶ್ವವಿದ್ಯಾಲಯಗಳಲ್ಲಿ ಒಂದಾದ, ಪುಣೆ ವಿಶ್ವವಿದ್ಯಾಲಯವಿದೆ. ಇದನ್ನು ಕೆಲವರು, ಪೂರ್ವದೇಶದ ಕೇಂಬ್ರಿಡ್ಜ್ ಎಂದು ಕರೆಯುತ್ತಾರೆ.. ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ, ಶಿವಾಜಿ, ಮತ್ತು ಅವರ ನಂತರ ಅಧಿಕಾರಕ್ಕೆ ಬಂದ ಪೇಷ್ವೆಯವರ ರಾಜಧಾನಿಯಾಗಿದೆ. ಕಲೆ, ಸಾಹಿತ್ಯ, ಮತ್ತು ಸಂಗೀತಕ್ಕೆ ಇಲ್ಲಿ ಆದ್ಯತೆಯಿದೆ. ಪ್ರಖ್ಯಾತ ಆಗಾಖಾನ್ ಪ್ಯಾಲೆಸ್ ಇರುವುದೂ ಇಲ್ಲೆ ! ಆ ಪ್ಯಾಲೆಸ್ ನಲ್ಲಿ ನಮ್ಮ ಸ್ವಾತಂತ್ಯಸಂಗ್ರಾಮದ ಬಹು ಮಹತ್ವದ ಘಟನೆಗಳು ಜರುಗಿವೆ ...