ನಮ್ಮ ಪುಣೆನಗರ ಭೇಟಿ !
ಪ್ರಕಾಶನ ಮನೆಯ ಮುಂದೆಯೇ ರೋಟರಿ ಕ್ಲಬ್ ನವರು ನಿರ್ವಹಿಸುತ್ತಿರುವ ಸುಂದರವಾದ ಪಾರ್ಕ್, ಇದೆ. ನಾವು ಸಾಯಂಕಾಲ ಅಲ್ಲಿ ಜಾಗಿಂಗ್ ಮಾಡಿದೆವು.

ಪ್ರಕಾಶನು ವಾಸಿಸುವ ಕಟ್ಟಡ- ’ಶೆಹೆನ್ ಶಾ ಅದರ ಹೆಸರು’, ಎ. ೧೯, ಎರಡನೆಯ ಮಹಡಿ.....ಪುಣೆಯ ಉಪನಗರಗಳಲ್ಲೊಂದಾದ, ಕೋರೆಗಾಂ ನಲ್ಲಿರುವ ಈ ಸ್ಥಳದ ಬಳಿಯಲ್ಲೇ ’ಆಗಾಖಾನ್ ಪ್ಯಾಲೆಸ್, ” ’ ಓಶೋ ಅಧ್ಯಾತ್ಮ ಕೇಂದ್ರ, ” ಮತ್ತು ಇನ್ನೂ ಪ್ರಮುಖ ಕೇಂದ್ರಗಳಿವೆ......
ಪ್ರಕಾಶನ ಹಲವು ಹಾಬಿಗಳಲ್ಲಿ ’ಚೆಂಡಿನ ಮೇಲೆ ನಿಲ್ಲುವ ಹಾಬಿಯೂ ಒಂದು”. ಪುಣೆಯಲ್ಲಿದ್ದಷ್ಟು ದಿನ, ಏನಾದರೂ ಹೊಸದನ್ನು ಕಲಿಯಲು ಸದಾಸಿದ್ಧ ಅವನು..ಕೆಲವು ಕೈಚಳಕದ ಚಮತ್ಕಾರಗಳನ್ನು ಅವನು ಕಲಿತು, ರವಿಗೆ ತಿಳಿಸುತ್ತಿದ್ದಾನೆ...

ಮೂರು ಕೊಠಡಿಗಳ ಮನೆಯಲ್ಲಿ ಪ್ರಕಾಶನ ರೂಮ್ ....
ರವಿ ಮತ್ತು ನಾವಿಬ್ಬರೂ ಮತ್ತೊಂದು ರೂಮ್ ನಲ್ಲಿದ್ದೆವು....
’ಸ್ವಿಸ್ ದೊಡ್ಡ ಚೆಂಡು, ” ’ ಗಿಟಾರ್, ” ’ಸೊಳ್ಳೆಪರದೆ, ” ’ಪುಸ್ತಕಗಳು, ” ಮತ್ತು ’ಎತ್ತಲು ಭಾರದ ವಸ್ತುಗಳು’ ಇತ್ಯಾದಿಗಳು....
’ಪಿ. ಎಚ್. ಡಿ. ವಿದ್ಯಾಭ್ಯಾಸಕ್ಕಾಗಿಯೇ ಅಮೆರಿಕದಿಂದ ತಂದ ದೊಡ್ಡಪುಸ್ತಕಗಳ ರಾಶಿ.”.....
’ಮಹಾತ್ಮ ಫುಲೆಯವರ ಗೃಹ ಮತ್ತು ವಸ್ತುಸಂಗ್ರಹಾಲಯ”....
’ಸಾರಸ್ ಬಾಗ್,” ಪೇಷ್ವೆಯವರು ಕಟ್ಟಿಸಿದ ಉದ್ಯಾನವನ......
’ನಾರಾಯಣ್ ಪುರದಲ್ಲಿ ಶ್ರೀ ದತ್ತಾತ್ರೇಯ ಮಂದಿರ ”....
...
ಅದೇ ನಾರಾಯಣ್ ಪುರದಲ್ಲಿ ಮುಂದೆ ಹೋದರೆ, ಹೊಸದಾಗಿ ಸ್ಥಾಪಿಸಿರುವ, ’ಬಾಲಾಜಿಯ ಭವ್ಯಮಂದಿರ.”...
ತಿರುಪತಿಯಷ್ಟು ದೊಡ್ಡದಾಗಿರದಿದ್ದರೂ ವೆಂಕಟರಮಣನ ದೇವಾಲಯ ಎಲ್ಲಿದ್ದರೂ ಭವ್ಯವಾಗಿ ನಿರ್ಮಿಸಿರುತ್ತಾರೆ.

ಪುಣೆಯ ಪ್ರಮುಖ ಗಣಪತಿಮಂದಿರಗಳಲ್ಲೊಂದಾದ, ’ಶ್ರೀಮಂತ ದಗಡೂ ಹಲವಾಯಿ ಸೇಟ್ ವಿನಾಯಕ ಮಂದಿರ”.

’ಆಗಾಖಾನ್ ಪ್ಯಾಲೆಸ್,” ಈಗ ’ಕಸ್ತೂರ್ ಬಾ ಸ್ಮಾರಕ ಮಂದಿರ ’ ದಲ್ಲಿ, ಬಾರವರ ಸ್ಮಾರಕ......
...ಆಗಾಖಾನ್ ಪ್ಯಾಲೆಸ್ ನ ಮುಂಭಾಗದಲ್ಲಿ ಸಾರ್ವಜನಿಕರಿಗೆ ಪ್ರದರ್ಶನಕ್ಕಿಟ್ಟಿರುವ ಫಲಕ......
ಚಾರಿತ್ರ್ಯಿಕ ಮಹತ್ವದ ಆಗಾಖಾನ್ ಪ್ಯಾಲೇಸ್ ನ ಪ್ರಮುಖ ಮುಖದ್ವಾರ....
’ರಾಜಾ ಕೇಲ್ಕರ್ ರವರ ಸ್ವಂತ ವಸ್ತು ಸಂಗ್ರಹಾಲಯ.” ಅತ್ಯಂತ ಸುಂದರವಾಗಿ ಸಜಾಯಿಸಿದ, ಹವಾನಿಯಂತ್ರಿತ ಮತ್ತು ವಿಶೇಷ ವಸ್ತುಗಳ ಸಂಗ್ರಹವಿದೆ.....
’ರಾಜಾ ಕೇಲ್ಕರ್ ರವರ ಖಾಸಗಿ ವಸ್ತುಸಂಗ್ರಹಾಲಯದ ಪ್ರಮುಖ ದ್ವಾರ.”..
ಶನಿವಾರವಾಡ ಕೋಟೆಯ ಒಳಗೆ ಮುನ್ನಡೆಯುತ್ತಿದ್ದಂತೆ, ಸಾರ್ವಜನಿಕರಿಗೆ ವಿವರಿಸುವ ಫಲಕವನ್ನು ಕಾಣಬಹುದು.....

ಪುಣೆಯ ವಿಖ್ಯಾತ, ’ ಶನಿವಾರ ವಾಡಾ ಕೋಟೆ ಮತ್ತು ಪ್ರಾಚೀನ ವಸ್ತುಸಂಗ್ರಹಾಲಯ”......
Comments