Posts

Showing posts from August, 2012

ಇನ್ನೇನು ಟೊರಾಂಟೋ ಬಿಡೋ ಸಮಯ ಬಂತು !

Image
ಹತ್ತತ್ರ ೨ ತಿಂಗಳು ೨೮ ದಿನ ಆಯ್ತಲ್ಲ ಇನ್ನೇನು ! ಇಲ್ಲಿ ನೋಡಿದ್ದು,  ಕಲ್ತಿದ್ದು ಅಪಾರ. ಹೊಸ ಹೊಸ ವಿಷಯಗಳ್ನ , ಈಗಿರೋ ಇದುವರೆಗಿನ ನಮ್ಮ ಜ್ಞಾನದ ಅರಿವಿನಲ್ಲಿ ಹೊಸ ವಿಶ್ವವನ್ನು ನೋಡೋದ್ ಒಂದ್ಕಡೆಯಾದರೆ. ಸಿಕ್ಕ ಜ್ಞಾನವನ್ನು  ಉಜ್ಜಿ ಪ್ರಜ್ವಲ ಗೊಳಿಸೋದು, ಮತ್ತೊಂದುಕಡೆ....ಈ ಅನಂತ ವಿಶ್ವದಲ್ಲಿ ನಮಗೆ ತಿಳಿದಿರೋದು  ಅದೆಷ್ಟು ಅಲ್ಪ ಅನ್ನೋ ಅರಿವಾಗಿ,  ನಮಗೆ ಆ ಅದ್ಭತ ಶಕ್ತಿಗಳ ಮಹಾಪೂರವಾಗಿರುವ ಪರಮಾತ್ಮನ ಅಪಾರ ಶಕ್ತಿಯ ಅರಿವಾಗುತ್ತದೆ ! ಈ ಗೊಂದಲಮಯ ವೈವಿಧ್ಯಮಯ, ಅಗಾಧ  ಪ್ರಪಂಚವನ್ನು ಮ್ಯಾನೇಜ್ ಮಾಡುವ 'ಸಿಇವೋ' ಗೆ ನಮ್ಮ ಶತ-ಶತ ನಮನಗಳು ! ಇದೇ ಪ್ರಕಾಶ್ ಇರುವ ೨೯ ಅಂತಸ್ತಿನ  ಬಹುಮಹಡಿ ಕಟ್ಟಡ. ಅವನಿರುವುದು ೩ ನೇ ಫ್ಲೋರ್. ೨ ನೇ ಫ್ಲೋರ್ ನಲ್ಲಿ 'ಸ್ವಿಮಿಂಗ್ ಪೂಲ್' ಇದೆ. ಬ್ಯಾಂಕ್, ಮಾಲ್ ಗಳು, ಎಲ್ಲಾ ಇಲ್ಲಿವೆ. 'ಫಾಲ್ಸ್ ಸೀಲಿಂಗ್ ನವೀನೀಕರಿಸುವ ಪ್ರಯತ್ನ' ಭರದಿಂದ ಸಾಗಿದೆ.                                    ೨೯ ಅಂತಸ್ತಿನ ಕಟ್ಟಡ ದೂರದಿಂದನೋಡಿದರೆ ಹೀಗೆ ಕಾಣಿಸುತ್ತೆ.                                       ...