Rameshwara was the real Destination-But, we went around here and there !
'ರಾಮೇಶ್ವರಂ ಕ್ಷೇತ್ರ' ಕ್ಕೆ ಹೋಗುವ ಮಹದಾಶೆ ಬಹಳವರ್ಷದ್ದು. ಆದರೆ ಅದು ನೆರವೇರಲು ಹಲವು ದಶಕಗಳೇ ಹಿಡಿದವು. ನಾವು ಸನ್. ೨೦೧೧ ರಲ್ಲಿ ಒಮ್ಮೆ ಹೋಗಿದ್ದೆವು. ಹಾಗೆಯೇ ಹತ್ತಿರದ ಕನ್ಯಾಕುಮಾರಿ, ಮಧುರೈ, ಮೊದಲಾದ ಸ್ಥಳಗಳನ್ನು ನೋಡಿಕೊಂಡು ಬಂದೆವು. ಮುಖ್ಯವಾಗಿ ನನ್ನ ಕಾಲು ನೋವಿನ ಪರಿಣಾಮದಿಂದಾಗಿ ಈ ಕಾರ್ಯಕ್ರಮ ನೆನೆಗುದಿಗೆ ಬಿದ್ದಿತ್ತು. ನಾವು ಕೆನಡಾಕ್ಕೆ ಹೋಗಿ ಬಂದಮೇಲೆ ಮತ್ತೆ ಡಿಸೆಂಬರ್ ತಿಂಗಳಿನಲ್ಲಿ ಬರುವ ವರ್ಷಾಂತಕದ ವೇಳೆಗೆ ರಾಮೇಶ್ವರಕ್ಕೆ ಹೋಗಿ ಕೆಲವು ವಿಧಿಗಳನ್ನು ಸಮರ್ಪಕವಾಗಿ ಮಾಡಿ ಮುಗಿಸುವ ಮನಸ್ಸಾಯಿತು. ನಮಗೆ ತಿಳಿದಿದ್ದ, ' ಸದರನ್ ಟ್ರಾವೆಲ್ಸ್ ಕಂಪೆನಿ' ಯನ್ನು ವಿಚಾರಿಸಿ, ತಾರೀಖು ನಿಗದಿಮಾಡಿದೆವು. ಕಾಲು ನೋವು ಹೇಳದೆ ಕೇಳದೆ ದಾಳಿಯಿಡುತ್ತಿತ್ತು. ಅದಕ್ಕಾಗಿ ಬಸ್ಸಿನಲ್ಲಿನ ಪ್ರಯಾಣಕ್ಕೆ 'ಬೈಬೈ' ಹೇಳಿ ಸಧ್ಯಕ್ಕೆ ಕಾರ್ ನಲ್ಲಿ ಹೋಗುವ ನಿರ್ಧಾರವಾಯಿತು. ನಾವು ಮುಂಬೈನಿಂದ ಚೆನ್ನೈ ಗೆ ' ತತ್ಕಾಲ್ ಸೇವೆ' ಯನ್ನೂ ಬಳಸಿ ಪ್ರಯಾಣಿಸಿದೆವು. ಅಲ್ಲಿಂದ ಕಾರ್ ನಲ್ಲಿ ಪ್ರಯಾಣ ಪ್ರಾರಂಭವಾದದ್ದು, ಅಕ್ಟೋಬರ್ ೧೯ ರಂದು. ಚೆನ್ನೈನಲ್ಲಿ ಮಳೆ ಪ್ರಾರಂಭವಾಗಿತ್ತು., ಕಪಿಲೇಶ್ವರ ದೇವಾಲಯ,ಸೆಂಟ್ ಜಾರ್ಜ್ ಫೋರ್ಟ್,ಸರ್ಕಾರಿ ವಸ್ತುಸಂಗ್ರಹಾಲಯ, ಪ್ರಾಣಿಸಂಗ್ರಹಾಲಯ, ಮೆರಿನಾ ಬೀಚ್,ಅಷ್ಟ ಲಕ್ಷ್ಮೀದೇವಾಲಯ, ಇತ್ಯಾದಿ. ೨೧ ರಂದು- ಮಹಾಬಲಿಪುರಂ, ಪಾಂಡಿಚೆರ್ರಿ ಮತ್ತು ತಂ...