Posts

Showing posts from April, 2015

ಕೊಳಲು ಪತ್ರಿಕೆ, ಏಪ್ರಿಲ್, 23, 2015, 'ಗುರುಪರಂಪರೆಯ ಕಳಚಿದ ಕೊಂಡಿ'..

Image
ನಮ್ಮೊಡನಿದ್ದು ನೋಟಕರ ಕಣ್ಣಿಗೆ ಸಾಮಾನ್ಯರಂತೆ ಕಂಡರೂ, ಅಸಾಮಾನ್ಯ ಆಚಾರ್ಯ ವ್ಯಕ್ತಿತ್ವ ಹೊಂದಿದ್ದ ಶ್ರೀ .ಎಚ್.ಎಸ್. ರಾಮಚಂದ್ರರಾಯರು  (ಹೊಳಲ್ಕೆರೆ ಸುಬ್ಬರಾಯ ರಾಮಚಂದ್ರರಾವ್ ) ಭಾರತೀಯ ಗುರುಪರಂಪರೆಗೆ ತಿಲಕಪ್ರಾಯರಾಗಿದ್ದರು !  -ಕೊಳಲು ಪತ್ರಿಕೆ. (31-03-1936-12-04-2015) 

ನನ್ನ ಪ್ರೀತಿಯ ಅಣ್ಣ, ಶ್ರೀ. ಎಚ್. ಎಸ್. ರಾಮಚಂದ್ರರಾಯರು ಇನ್ನಿಲ್ಲ !

Image
ಹೊಳಲ್ಕೆರೆಯ ಪ್ರೌಢಶಾಲೆಯಲ್ಲಿ ಹಿಂದಿ ಅಧ್ಯಾಪಕರಾಗಿ ತಮ್ಮ ವೃತ್ತಿಜೀವನಕ್ಕೆ ಪಾದಾರ್ಪಣೆಮಾಡಿ, ಊರಿನ ವಿದ್ಯಾರ್ಥಿಗಳಿಗೆಲ್ಲಾ ರಾಷ್ಟ್ರಭಾಷೆ ಹಿಂದಿಯನ್ನು ಅತ್ಯಂತ ಕಾಳಜಿ ಹಾಗು ಪ್ರೀತಿಯಿಂದ ಕಲಿಸುತ್ತಾ ಬಂದು ಕೊನೆಯಲ್ಲಿ ಹೈಸ್ಕೂಲಿನ ಹೆಡ್ ಮಾಸ್ಟರ್ ಆಗಿ ನಿವೃತ್ತಿಹೊಂದಿದ ಹೊಳಲ್ಕೆರೆ ಸುಬ್ಬರಾಯರ ಎರಡನೆಯ ಪುತ್ರ, ಶ್ರೀ ರಾಮಚಂದ್ರರಾಯರು, ಏಪ್ರಿಲ್, ೧೨ ರ ಪ್ರಾಥಃಕಾಲ ತಮ್ಮ ಹಿರಿಯ ಮಗ ಡಾ.ಎಚ್.ಆರ್. ಶ್ರೀಪಾದನ ಮಂಡ್ಯದ ಮನೆಯಲ್ಲಿ ಕೊನೆಯುಸಿರೆಳೆದರು. ಶ್ರೀಯುತರು ಕೆಲಕಾಲದಿಂದ ಕಾಲಿನ ನೋವು ಹಾಗೂ ಇತರ ತೊಂದರೆಗಳಿಂದ ಬಳಲುತ್ತಿದ್ದರು. ಹೊಟ್ಟೆಯಲ್ಲಿ ನೀರು ತುಂಬಿಕೊಳ್ಳುವ ಕಾಯಿಲೆ (ಜಲೋದರ) ದಿಂದ ಸ್ವಲ್ಪಕಾಲ ತೊಂದರೆ ಅನುಭವಿಸಿದರು. ಆದರೆ ಕೊನೆಯಲ್ಲಿ ಅವರು ಮರಣಿಸಿದ್ದು ಹೃದಯ ವೈಫಲ್ಯದಿಂದ.  ಊರಿನ ಜನರಿಗೆ ಅತ್ಯಂತ ಪ್ರೀತಿಯ ಹಿಂದಿ ಪಂಡಿತ್ ಎಚ್.ಎಸ್.ಆರ್. ಎಂಬಹೆಸರಿನಿಂದಲೇ ಪರಿಚಿತರಾಗಿದ್ದ ರಾಮಚಂದ್ರರಾಯರು, ಸದಾ ಹಸನ್ಮುಖಿ, ಹಾಸ್ಯಪ್ರಿಯರು, ಮತ್ತು ಸಹಾಯಮಾಡುವ ಮನೋಭಾವದವರು. ಸದಾ ಅಧ್ಯಯನ ಅವರ ಜೀವನದಲ್ಲಿ ಹಾಸುಹೊಕ್ಕಾಗಿತ್ತು. ಅವರ ಪತ್ನಿ, ಸೌ.ರಾಜೇಶ್ವರಿಯವರು ಒಂದು ವರ್ಷದ ಹಿಂದೆಯೇ ನಿಧನರಾಗಿದ್ದರು. ಶ್ರೀಯುತರಿಗೆ ಇಬ್ಬರು ಗಂಡುಮಕ್ಕಳು ಹಾಗೂ ಇಬ್ಬರು ಹೆಣ್ಣುಮಕ್ಕಳು. ಎಲ್ಲರೂ ತಮ್ಮ ತಮ್ಮ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಚ್.ಎಸ್.ಆರ್, ಹೊಳಲ್ಕೆರೆಯ ಪ್ರಸನ್ನ ಗಣಪತಿಯ ಪರಮ ಭಕ್ತ...