Posts

Showing posts from October, 2016

ಸೌ ಸರಳಮ್ಮತ್ತಿಗೆ ಇನ್ನಿಲ್ಲ !

Image
ಸೌ ಸರಳಮ್ಮತ್ತಿಗೆ ಇನ್ನಿಲ್ಲ ! ಈಗ ನನಗಂತೂ ಸೌ. ಸರಳಮ್ಮತ್ತಿಗೆ ಇಲ್ಲವೆಂದರೆ ನಂಬಲೂ ಸಾಧ್ಯವಿಲ್ಲ ! ಹಳೆಯ ದಿನಗಳನ್ನು ನೆನೆಸಿಕೊಂಡರೆ ಅಣ್ಣ-ಅತ್ತಿಗೆ ಮದುವೆಗೆ ನಾವು ಹೋಗಿದ್ದು ಇನ್ನೂ ನನಗಂತೂ ಚೆನ್ನಾಗಿ ನೆನಪಿದೆ .  ಹೊಳಲ್ಕೆರೆಯಿಂದ ಅಮ್ಮ, ಚಿಕ್ಕಮ್ಮ, ನಾನು ಚಂದ್ರಣ್ಣ, ಸರೋಜಾ ತೀ. ವಿಶ್ವಣ್ಣ ಮತ್ತು ಚಿ. ಸೌ. ಸರಳಮ್ಮತ್ತಿಗೆಯವರ ಮದುವೆಗೆ ಮೊದಲು ಬೀರೂರಿಗೆ ಹೋಗಿ ಅಲ್ಲಿಂದ ಬಳ್ಳಾರಿಗೆ ಮದುವೆಗೆ ಆಯೋಜಿಸಿದ ಬಸ್ಸಿನಲ್ಲಿ ಹೋಗಿದ್ದೆವು. ಈ ಫೋಟೋಗಳನ್ನು ಚಿ. ಸೌ. ದೀಪ್ತಿ ಪ್ರಸಾದ್ ಸೌಜನ್ಯದಿಂದ ಪಡೆಯಲಾಯಿತು. ಸೌ. ಸರಳಮ್ಮ, ಚಿ. ಸೌ.  ಮಮತಾ, ಚಿ. ಸೌ. ಸುಬ್ಬಲಕ್ಷ್ಮಿ, ಹಾಗು ಚಿ.  ಸೌ.  ಉಷಾ  ಸೌ. ಲಲಿತತ್ತಿಗೆ ಜೀವಂತವಾಗಿದ್ದಾಗ ವಿಶ್ವಣ್ಣ ಮತ್ತು ಪರಿವಾರ  ಅವರ ಮನೆಗೆ ಭೇಟಿಕೊಟ್ಟಿದ್ದರು  ತೀ.ವಿಶ್ವಣ್ಣ, ಮತ್ತು ಸೌ.ಸರಳಮ್ಮತ್ತಿಗೆ ಇವರ ಮದುವೆಗೆ ನಾನು ಮತ್ತು  ಚಂದ್ರಣ್ಣ, ಅಮ್ಮ, ಚಿಕ್ಕಮ್ಮ, ಚಿ.ಸರೋಜ, ಬೀರೂರಿಗೆ ಹೋದ ನೆನಪು ಇನ್ನೂ ಮಾಸಿಲ್ಲ. ಅಲ್ಲಿಂದ ಬಸ್ಸಿನಲ್ಲಿ ಬಳ್ಳಾರಿಗೆ ಹೋಗಿ ಅಣ್ಣನ ಮದುವೆಯಲ್ಲಿ ಭಾಗಗೊಂಡಿದ್ದು ಒಂದು ಸುಮಧುರ ಅನುಭವಾಗಿತ್ತು. ಅಪ್ಪನಿಗೆ ಏಕೋ ಬರಲು ಬಿಡುವಿಲ್ಲದೆ ಅವರು ಮನೆಯಲ್ಲೇ ಇದ್ದು ನಮ್ಮನ್ನು ಕಳಿಸಿಕೊಟ್ಟಿದ್ದರು.  ಮದುವೆಯ ನಂತರ ನಾವು ತುಂಗಭದ್ರ ಅಣೆ...