ನಮ್ಮ ಪ್ರೀತಿಯ ಸುವರ್ಣತ್ತಿಗೆಯವರ ನಿಧನ ~
ವರ್ಷ ೨೦೧೨ ರ ಜನವರಿ, ೧೩, ಸೋಮವಾರ, ಸೌ. ಸುವರ್ಣಮ್ಮ ನಾಗರಾಜ್ ಆವರು ಬೆಂಗಳೂರಿನ ಬಿ. ಟಿ. ಎಂ. ಲೇ ಔಟ್ ನಲ್ಲಿರುವ ತಮ್ಮ ಸ್ವಗೃಹದಲ್ಲಿ ತೀರಿಕೊಂಡರು. ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ನರಳುತ್ತಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುವ -ಎಚ್. ಆರ್. ಏನ್, ಶ್ರೀರಂಗ, ಶ್ರೀಧರ, ಉಷಾ, ಗಗನ, ನಾಗಲಕ್ಷ್ಮಿ, ರಂಗನಾಥ ರಾಯರು, ಮತ್ತು ಎಲ್ಲಾ ಸಂಬಂಧಿಕರು ಆಪ್ತ ಗೆಳೆಯರು. ಕ್ರಿಯಾ ಕರ್ಮಗಳನ್ನೆಲ್ಲಾ ಬೆಂಗಳೂರಿನ ಶಂಕರ ಮಠದ ಹಾಲ್ ನಲ್ಲಿ ನೆರೆವೇರಿಸಲಾಯಿತು. ಬಹಳ ವರ್ಶಗಳಿಂದ ಬೆಂಗಳೂರಿಗೆ ಹೋಗಲಾಗಿರದ ಪ್ರಕಾಶ ಮತ್ತು ರವಿ ಈ ಸಮಯದಲ್ಲಿ ಹಾಜರಿದ್ದು ಅವರ ದೊಡ್ಡಮ್ಮನವರ ಆಶೀರ್ವಾದಕ್ಕೆ ಪಾತ್ರರಾದರು. 6 ಫೆಬ್ರವರಿ, ೨೦೨೦ ರಂದು ನನಗೆ 'ವಾಟ್ಸ್ ಆಪ್' ನಲ್ಲಿ ಉಪಲಭ್ಯವಾದ ಫೋಟೋಗ ಳು : ಈಗೀಗ ತೀ ।ಸಮಾನರಾದ ನಾಗಣ್ಣನವರು ಅವರ ಪತ್ನಿಯವರ ವಿಯೋಗದಿಂದ ಸ್ವಲ್ಪ ಸ್ವಲ್ಪ ವಾಗಿ ಚೇತರಿಸಿಕೊಂಡು ಹೊರಗೆ ಬರುತ್ತಿದ್ದಾರೆ. ಇದಕ್ಕೆ ಕಾರಣ ಅವರ ಮಗ ಚಿ. ಶ್ರೀರಂಗ, ಮತ್ತು ಚಿ. ಶ್ರೀಧರ, ಮತ್ತು ಅವನ ಪತ್ನಿ ಚಿ. ಸೌ. ಉಷಾರವರ ಪ್ರೀತ್ಯಾದರಗಳಿಂದಾಗಿ ಎಂದು ಬೇರೆ ಹೇಳಬೇಕಾಗಿಲ್ಲ. ಶುಭವಾಗಲಿ. ...