ನಮ್ಮ ಪ್ರೀತಿಯ ಆಪ್ತ ಸಂಬಂಧಿ ಕಾಳಘಟ್ಟದ ಶ್ರೀ ನಾಗರಾಜ್ ನಿಧನರಾದರು.

ಶ್ರೀ. ಕೆ. ಟಿ. ನಾಗರಾಜ್ ನಮ್ಮನ್ನಗಲಿದ್ದಾರೆ. ಶ್ರೀ. ಕೆ. ಟಿ. ನಾಗರಾಜ್ ನಮ್ಮ ಪ್ರೀತಿಯ ಆಪ್ತ ಸಂಬಂಧಿ ಶ್ರೀ. ಕಾಳಘಟ್ಟ ತಿಮ್ಮಪ್ಪಯ್ಯ ನಾಗರಾಜ್ ರವರು ೨೬, ಶುಕ್ರವಾರ, ಮಾರ್ಚ್, ೨೦೨೧ ರಂದು ಮದ್ಯಾನ್ಹ ೧-೩೦ ಕ್ಕೆ ನಿಧನರಾದರು. ಶ್ರೀಯುತರು ಸ್ವಲ್ಪಕಾಲ ಶಿವಮೊಗ್ಗದ ಆಸ್ಪತ್ರೆಯಲ್ಲಿ ವೈದ್ಯಕೀಯ ಸಹಾಯ ಪಡೆಯುತ್ತಿದ್ದರು. ಅವರ ವಯಸ್ಸು ೮೦ ನಡೆಯುತ್ತಿತ್ತು. 'ಕೋವಿಡ್ ಸೋಂಕು' ತಗುಲಿರಬಹುದೆಂದು ತಜ್ಞರು ಅಭಿಪ್ರಾಯಪಟ್ಟರು. ನಾಗರಾಜ್ ಅಪಾರ ಬಂಧುವರ್ಗ, ಸ್ನೇಹಿತರು ಮತ್ತು ಹಿತೈಷಿಗಳನ್ನು ಅಗಲಿ ಸಾಗಿದ್ದಾರೆ. ಯಾವಾಗಲೂ ಪ್ರಬುದ್ಧವಾದ ಮಾತು, ತೀಕ್ಷ್ಣಮತಿ, ಮಾತುಕಡಿಮೆ, ಒಳ್ಳೆಯ ಸ್ನೇಹಶೀಲರು, ಕೈಲಾದ ಸಹಾಯಮಾಡುವುದರಲ್ಲಿ ಎತ್ತಿದ ಕ...