ನಮ್ಮ ಪ್ರೀತಿಯ ಆಪ್ತ ಸಂಬಂಧಿ ಕಾಳಘಟ್ಟದ ಶ್ರೀ ನಾಗರಾಜ್ ನಿಧನರಾದರು.

                                                       ಶ್ರೀ. ಕೆ. ಟಿ. ನಾಗರಾಜ್ ನಮ್ಮನ್ನಗಲಿದ್ದಾರೆ.  

                                                                   ಶ್ರೀ. ಕೆ. ಟಿ. ನಾಗರಾಜ್

ನಮ್ಮ ಪ್ರೀತಿಯ ಆಪ್ತ ಸಂಬಂಧಿ ಶ್ರೀ. ಕಾಳಘಟ್ಟ ತಿಮ್ಮಪ್ಪಯ್ಯ ನಾಗರಾಜ್ ರವರು ೨೬, ಶುಕ್ರವಾರ,  ಮಾರ್ಚ್, ೨೦೨೧ ರಂದು ಮದ್ಯಾನ್ಹ ೧-೩೦ ಕ್ಕೆ ನಿಧನರಾದರು.  ಶ್ರೀಯುತರು ಸ್ವಲ್ಪಕಾಲ ಶಿವಮೊಗ್ಗದ ಆಸ್ಪತ್ರೆಯಲ್ಲಿ ವೈದ್ಯಕೀಯ ಸಹಾಯ ಪಡೆಯುತ್ತಿದ್ದರು. ಅವರ ವಯಸ್ಸು ೮೦ ನಡೆಯುತ್ತಿತ್ತು. 'ಕೋವಿಡ್ ಸೋಂಕು' ತಗುಲಿರಬಹುದೆಂದು ತಜ್ಞರು ಅಭಿಪ್ರಾಯಪಟ್ಟರು. ನಾಗರಾಜ್ ಅಪಾರ ಬಂಧುವರ್ಗ, ಸ್ನೇಹಿತರು ಮತ್ತು ಹಿತೈಷಿಗಳನ್ನು ಅಗಲಿ ಸಾಗಿದ್ದಾರೆ. 

ಯಾವಾಗಲೂ ಪ್ರಬುದ್ಧವಾದ ಮಾತು, ತೀಕ್ಷ್ಣಮತಿ,  ಮಾತುಕಡಿಮೆ, ಒಳ್ಳೆಯ ಸ್ನೇಹಶೀಲರು, ಕೈಲಾದ ಸಹಾಯಮಾಡುವುದರಲ್ಲಿ ಎತ್ತಿದ ಕೈ,  ಮತ್ತು ಕಿರಿಯರಿಗೆ ಯಾವಾಗಲೂ  ತಮ್ಮ ಅನುಭವಪ್ರಜ್ಞೆಯಿಂದ ಆಶೀರ್ವದಿಸಿ ಮಾರ್ಗದರ್ಶನ ಮಾಡುತ್ತಿದ್ದರು.  

ಶ್ರೀಮತಿ ಲಲಿತಮ್ಮ ಮತ್ತು ಮಕ್ಕಳು ಆಯೋಜಿಸಿದ ತತ್ಸಂಬಂಧಿತ ಕಾರ್ಯಗಳು ಈ ಕೆಳಗೆ ಕಂಡಂತೆ ಇರುತ್ತವೆ. 

೧. ಧರ್ಮೋದಕ : ೦೪-೦೪-೨೦೨೧

೨. ಮಾಸಿಕ : ೦೭-೦೪-೨೦೨೧

೩. ವೈಕುಂಠಸಮಾರಾಧನೆ : ೦೮-೦೪-೨೦೨೧

ಜರುಗುವ ಸ್ಥಳ : 

ಶ್ರೀ. ಚಂದ್ರಶೇಖರ ಭಟ್, ಗುಂಡಪ್ಪ ಶೆಡ್,

೩ ನೆಯ ಕ್ರಾಸ್, ಕೊಡೂರು, ಶಿವಮೊಗ್ಗ, 

ಇಂತಿ ದುಖಃತಪ್ತರು :

ಶ್ರೀಮತಿ. ಲಲಿತಮ್ಮ ಹಾಗೂ ಮಕ್ಕಳು. 

ಶಿವಮೊಗ್ಗ. 

ದೂರವಾಣಿ ಸಂಖ್ಯೆ :

 ಮೊ :  ೭೭೬೦೦೧೦೧೦೦

 ಮೊ : ೯೫೩೫೪೫೯೩೯೩





Comments

Popular posts from this blog

ಅಮೇರಿಕ ಸಂಯುಕ್ತ ಸಂಸ್ಥಾನದ 'ಬಾಸ್ಟನ್ ನಗರದ ಮಂದಾರ ಕನ್ನಡ ಸಾಹಿತ್ಯ ಕೂಟ' ಏರ್ಪಡಿಸಿದ ವಸಂತೋತ್ಸವ ಕಾರ್ಯಕ್ರಮದಲ್ಲಿ "ಕರ್ನಾಟಕ ಭಾಗವತದ ,ಮೊದಲ ಸಂಪುಟದ ಇ-ಆವರ್ತಿಯನ್ನು " ಬಿಡುಗಡೆ ಮಾಡಲಾಯಿತು !

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.