ಪ್ರೊ. ಎಚ್. ಆರ್. ರಾಮಕೃಷ್ಣರಾಯರ ನೆನಪಿನಲ್ಲಿ "ನುಡಿನಮನ ಕಾರ್ಯಕ್ರಮವನ್ನುಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು" !
ಮನೆಯ ಪರಿವಾರದವರು ಬಂಧು ಮಿತ್ರರು ಮತ್ತು ಗೆಳೆಯರು, ಹಿತೈಷಿಗಳೆಲ್ಲಾ ಸೇರಿ, ಬೆಂಗಳೂರಿನ ಉದಯಭಾನು ಕಲಾಸಂಘದಲ್ಲಿ "ನುಡಿ ನಮನ" ಕಾರ್ಯಕ್ರಮವನ್ನು ಆಯೋಜಿಸಿದ್ದರು. (ಉದಯಭಾನು ಕಲಾ ಸಂಸ್ಥೆಯವರಿಗೆ ಧನ್ಯವಾದಗಳು) ಮುಂಬಯಿನಿಂದ ವೀಕ್ಷಿಸುತ್ತಿದ್ದ ನನಗೆ ಕಾರ್ಯಕ್ರಮ ಕಂಡಿದ್ದು/ತಿಳಿದಿದ್ದು ಹೀಗೆ : ಸದಾ ವಿಜ್ಞಾನ, ಸಾಹಿತ್ಯ, ಭಾರತೀಯ ಸಂಸ್ಕೃತಿಯನ್ನು ಮೈಗೆ ಅಳವಡಿಸಿಕೊಂಡು ಜೀವನಾಸಕ್ತಿಯ ಚಿಲುಮೆಯಂತಿದ್ದ ರಾಮಕೃಷ್ಣ ನಮ್ಮ ಮನಸ್ಸಿನಲ್ಲಿ ಸದಾ ಇದೇತರಹದ ಭಿತ್ತಿ ಚಿತ್ರವನ್ನು ನಮ್ಮ ಮೈಮನಗಳಲ್ಲಿ ಮೂಡಿಸಿದ್ದಾನೆ-ದೂರದಲ್ಲಿದ್ದರೂ, ಮನಸ್ಸೆಲ್ಲ ಇಲ್ಲಿಯೇ ಮನೆಮಾಡಿತ್ತು -ಚಂದ್ರಶೇಖರ, ಮತ್ತು ಲಕ್ಷ್ಮೀವೆಂಕಟೇಶ ಮತ್ತು ಇವರ ಪರಿವಾರ. (ರಾಯರ ಪ್ರೀತಿಯ ತಮ್ಮಂದಿರು) ಮಕ್ಕಳು ಅಳಿಯಂದಿರು, ಮೊಮ್ಮಕ್ಕಳು ಸಹಜವಾಗಿಯೇ ಈ ಸಂಸ್ಮರಣ ಕಾರ್ಯಕ್ರಮದಲ್ಲಿ ಆಸಕ್ತಿವಹಿಸಿದ್ದಾರೆ. ಉದಯಭಾನು ಕಲಾಸಂಘದ ಅಧ್ಯಕ್ಷ ಶ್ರೀ. ನರಸಿಂಹ ಮತ್ತು ಅವರ ಸಿಬ್ಬಂದಿವರ್ಗದವರೂ, ವಿಶೇಷ ಕಾಳಜಿ, ಆಸಕ್ತಿಯನ್ನು ವಹಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟರು.