ಪ್ರೊ. ಎಚ್. ಆರ್. ರಾಮಕೃಷ್ಣರಾಯರ ನೆನಪಿನಲ್ಲಿ "ನುಡಿನಮನ ಕಾರ್ಯಕ್ರಮವನ್ನುಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು" !
ಮನೆಯ ಪರಿವಾರದವರು ಬಂಧು ಮಿತ್ರರು ಮತ್ತು ಗೆಳೆಯರು, ಹಿತೈಷಿಗಳೆಲ್ಲಾ ಸೇರಿ, ಬೆಂಗಳೂರಿನ ಉದಯಭಾನು ಕಲಾಸಂಘದಲ್ಲಿ "ನುಡಿ ನಮನ" ಕಾರ್ಯಕ್ರಮವನ್ನು ಆಯೋಜಿಸಿದ್ದರು. (ಉದಯಭಾನು ಕಲಾ ಸಂಸ್ಥೆಯವರಿಗೆ ಧನ್ಯವಾದಗಳು)
ಮುಂಬಯಿನಿಂದ ವೀಕ್ಷಿಸುತ್ತಿದ್ದ ನನಗೆ ಕಾರ್ಯಕ್ರಮ ಕಂಡಿದ್ದು/ತಿಳಿದಿದ್ದು ಹೀಗೆ :
ಸದಾ ವಿಜ್ಞಾನ, ಸಾಹಿತ್ಯ, ಭಾರತೀಯ ಸಂಸ್ಕೃತಿಯನ್ನು ಮೈಗೆ ಅಳವಡಿಸಿಕೊಂಡು ಜೀವನಾಸಕ್ತಿಯ ಚಿಲುಮೆಯಂತಿದ್ದ ರಾಮಕೃಷ್ಣ ನಮ್ಮ ಮನಸ್ಸಿನಲ್ಲಿ ಸದಾ ಇದೇತರಹದ ಭಿತ್ತಿ ಚಿತ್ರವನ್ನು ನಮ್ಮ ಮೈಮನಗಳಲ್ಲಿ ಮೂಡಿಸಿದ್ದಾನೆ-ದೂರದಲ್ಲಿದ್ದರೂ, ಮನಸ್ಸೆಲ್ಲ ಇಲ್ಲಿಯೇ ಮನೆಮಾಡಿತ್ತು -ಚಂದ್ರಶೇಖರ, ಮತ್ತು ಲಕ್ಷ್ಮೀವೆಂಕಟೇಶ ಮತ್ತು ಇವರ ಪರಿವಾರ. (ರಾಯರ ಪ್ರೀತಿಯ ತಮ್ಮಂದಿರು)
ಮಕ್ಕಳು ಅಳಿಯಂದಿರು, ಮೊಮ್ಮಕ್ಕಳು ಸಹಜವಾಗಿಯೇ ಈ ಸಂಸ್ಮರಣ ಕಾರ್ಯಕ್ರಮದಲ್ಲಿ ಆಸಕ್ತಿವಹಿಸಿದ್ದಾರೆ. ಉದಯಭಾನು ಕಲಾಸಂಘದ ಅಧ್ಯಕ್ಷ ಶ್ರೀ. ನರಸಿಂಹ ಮತ್ತು ಅವರ ಸಿಬ್ಬಂದಿವರ್ಗದವರೂ, ವಿಶೇಷ ಕಾಳಜಿ, ಆಸಕ್ತಿಯನ್ನು ವಹಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟರು.
Comments
We four brothers, were so close, nothing was done with out consulting the elder brothers. We owe a great respect and admiration to both the brothers. (Nagaraj & Ramakrishna) Ramakrishna as we used to address him at home, was an exception, in every aspect, thinking, excecuting an event, taking crucial decisions, at home. Realy, we miss him a lot. God bless.