Posts

Showing posts from January, 2023

ಶ್ರೀ. ಎಚ್. ಆರ್. ನಾಗರಾಜರಾಯರ ವರ್ಷಾಂತ್ಯ ಸಮಾರಂಭ !

Image
                  Video link :   https://photos.app.goo.gl/YdA5oM3pqE7YHiCM6 ನನ್ನ ತಂದೆ,  ಶ್ರೀ. ಎಚ್. ಆರ್. ನಾಗರಾಜರಾಯರ ವರ್ಷಾಂತ್ಯ ಸಮಾರಂಭವನ್ನು ೨೮, ಶನಿವಾರ, ಹಾಗೂ  ವೈಕುಂಠ ಸಮಾರಾಧನೆಯನ್ನು ೨೯, ರವಿವಾರದಂದು ಬೆಂಗಳೂರಿನ "ಧರ್ಮವನ" ದಲ್ಲಿ ನೆರವೇರಿಸಲು ಗುರುಹಿರಿಯರ ಆಜ್ಞೆಯ  ಮೇರೆಗೆ  ಆಯೋಜಿಸಿಕೊಂಡಿದ್ದೇನೆ. ದಯಮಾಡಿ ಕೆಳಗೆ ಕೊಟ್ಟಿರುವ ವಿಳಾಸವನ್ನು ಜ್ಞಾಪಕದಲ್ಲಿಟ್ಟುಕೊಳ್ಳುವಿರೆಂದು ನಂಬುತ್ತೇನೆ.                                                   -ಹೊಳಲ್ಕೆರೆ  ನಾಗರಾಜರಾವ್  ಶ್ರೀಧರ ,  "Dharmavana" No, 66, 60 ft. Road, Shyan bhogue Nagappa lay out, Bilekana halli, Bengaluru-560 076, Phone No : 9916968109/9964754186 ಶ್ರೀ. ಕುಮಾರಸ್ವಾಮಿ, ಶ್ರೀಮತಿ ವಿಜಯಮ್ಮ ಪ್ರಾಣೇಶ ಮೂರ್ತಿ,  ಶ್ರೀಮತಿ. ಸುಚರಿತ ಅನಂತಮೂರ್ತಿ, ಶ್ರೀಮತಿ ಪ್ರಸನ್ನ, ನನಗೆ ಪರಿಚಯ. ಬೇರೆಯವರ ಹೆಸರು ಗೊತ್ತಿಲ್ಲದ್ದಕ್ಕೆ ಕ್ಷಮೆ ಬೇಡುವೆ.                ...

ಸೌ ಉಷಾ ಶ್ರೀಧರ, ಯೋಗ ಶಿಕ್ಷಣ ಪಡೆದು ಪದವಿಯನ್ನು ಗಳಿಸಿದ್ದಾಳೆ. ಮುಂದೆ ಯೋಗಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸುತ್ತಾಳೆ....

Image
ನಮ್ಮ ಸುಂಕದ ಶ್ಯಾನುಭೋಗರ ವಂಶದಲ್ಲಿ ಯೋಗಾಭ್ಯಾಸ ಮಾಡಿದ ಯುವ-ವ್ಯಕ್ತಿಗಳ ಹೆಸರುಗಳು ದಾಖಲಾಗಿರುವ ಬಗ್ಗೆ ಮಾಹಿತಿಗಳಿಲ್ಲ.  ನಮ್ಮ ವಂಶದವರೇ ಆದ ಶ್ರೀ. ಶಂಕರಲಿಂಗ ಭಾಗವಾನರೆಂದು ಪ್ರಸಿದ್ಧರಾಗಿದ್ದ ರಂಗಪ್ಪನವರು, ಯತಿಗಳು. ಅವರು  ಮಾಳೇನಹಳ್ಳಿ, ಮತ್ತು ಕೋಮಾರನ ಹಳ್ಳಿಯಲ್ಲಿ ಆಶ್ರಮಗಳನ್ನು ಸ್ಥಾಪಿಸಿ ಭಕ್ತರನ್ನು ಆಶೀರ್ವದಿಸಿದ್ದರು. ನಾಥಪಂಥದಲ್ಲಿ ಅವರಿಗೆ ಅಪಾರ ಭಕ್ತಿ ಶ್ರದ್ಧೆಗಳಿದ್ದವು. ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮವನ್ನು ಸ್ಥಾಪಿಸಿದ ಶ್ರೀ. ರಾಘವೇಂದ್ರ ಸ್ವಾಮಿಗಳು ಶ್ರೀ. ಶಂಕರ ಲಿಂಗ ಭಗವಾನರ ಅನುಯಾಯಿಯಾಗಿದ್ದರು.  ಶ್ರೀಮತಿ ಉಷಾ ಶ್ರೀಧರ ಯೋಗದಲ್ಲಿ ಆಸಕ್ತಿವಹಿಸಿ ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದಲ್ಲಿ ಸೇರಿ ಅಧ್ಯಯನ ನಡೆಸಿ ಒಂದು ಪದವಿಯನ್ನು ಪಡೆದಿದ್ದಾರೆ. ಇದು ನಮಗೆಲ್ಲಾ ಹೆಮ್ಮೆಯ ವಿಷಯವಾಗಿದೆ. ನಮ್ಮ ದಾಯಾದಿಗಳಲ್ಲಿ ಒಬ್ಬರಾದ ಶ್ರೀ. ಸಿ. ಎಂ. ಭಟ್ಟರು ಯೋಗಾಚಾರ್ಯರೆಂದು ಪ್ರಸಿದ್ದರಾಗಿದ್ದರು. ಅವರು ಚಿತ್ರದುರ್ಗದಿಂದ  ಮೈಸೂರಿಗೆ ಹೋಗಿ  ತಮ್ಮ ಚಿಕ್ಕ ಪ್ರಾಯದಲ್ಲಿಯೇ ಸಂಸ್ಕೃತವನ್ನು ಕಲಿತರು. ಯೋಗಾಚಾರ್ಯ ಶ್ರೀ. ಷ್ಣಮಾಚಾರ್ಯರು ಉತ್ತರ ಭಾರತದಿಂದ ಮೈಸೂರಿಗೆ ಆಗಮಿಸಿ ಅರಮನೆಯ ಯೋಗ ಶಿಕ್ಷಣ ಶಾಲೆಯಮೇಲ್ವಿಚಾರಣೆಯನ್ನು ಕೈಗೆತ್ತಿಕೊಂಡಮೇಲೆ ಯುವ ಸಂಸ್ಕೃತ ಪಂಡಿತ ಶ್ರೀ ಮಹಾದೇವ ಭಟ್ಟರು ಕೃಷ್ಣಮಾಚಾರ್ಯರ ಮಾರ್ಗದರ್ಶನದಲ್ಲಿ ಯೋಗವಿದ್ಯೆಯನ್ನು ಕಲಿತು, ಮುಂದೆ ಮ...