’ ಹೂಸ್ಟನ್ ಕನ್ನಡ ವೃಂದ ’, ಬೆಳ್ಳಿಹಬ್ಬವನ್ನು ಸಂಭ್ರಮದಿಂದ ಆಚರಿಸಿತು !
ಹೂಸ್ಟನ್ ಕನ್ನಡ ವೃಂದದವರು, ೨೦೦೮ ರ ಯುಗಾದಿಯ ದಿನ ತಮ್ಮ ಸಂಘದ ’ ಬೆಳ್ಳಿಹಬ್ಬ” ವನ್ನು ಆಚರಿಸಿದರು. ಆ ದಿನ ಕನ್ನಡ ಮಕ್ಕಳೆಲ್ಲಾ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮನರಂಜನೆಯ ಕಾರ್ಯಕ್ರಮವನ್ನು ಹಮ್ಮಿಕೊಂಡು ಪ್ರೇಕ್ಷಕರ ಮನಸೂರೆಗೊಂಡರು. ಆ ದಿನದ ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ, ಪ್ರೊ. ಹೆಚ್. ಆರ್. ಚಂದ್ರಶೇಖರ್ ರವರು, ಬರೆದು ಪ್ರಸ್ತುತಪಡಿಸಿದ, " ಕರ್ಣಾಟಕ ಭಾಗವತ " ದ ಎರಡು ಸಂಪುಟಗಳ ಬಿಡುಗಡೆಯ ಸಮಾರಂಭ ! ಈ ಎರಡು ಪುಸ್ತಕಗಳು ಅತ್ಯಂತ ಸಮಯೋಚಿತವಾಗಿಯೂ ಹಾಗೂ ಕರ್ಣಾಟಕದ ಭಾಗವತದ ರಚನೆಕಾರರ ಸಮಗ್ರ ಕೆಲಸಗಳ ಪಟ್ಟಿಯನ್ನು ಕಲೆಹಾಕಿ, ಅದರಲ್ಲಿ ಮತ್ತೂ ಮುಂದೆಹೋಗಿ ಸಂಶೋಧನೆಮಾಡುವ ನಿಟ್ಟಿನಲ್ಲಿ ಕಾರ್ಯಕರ್ತರನ್ನು ಉತ್ತೇಜಿಸುವ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಿವೆ. ಎಲ್ಲಕ್ಕಿಂತ ಮಿಗಿಲಾಗಿ, ಇನ್ನೇನು ಮುರಿದು ಪುಡಿ-ಪುಡಿಯಾಗುವ ಸ್ಥಿತಿಯಲ್ಲಿದ್ದ " ತಾಳೆಗರಿಗಳ, ಜ್ಞಾನ ಭಂಡಾರ " ವನ್ನು ರಕ್ಷಿಸಿ ಪೋಶಿಸಿಕೊಂಡುಬಂದ ಬಗೆ ಅನನ್ಯವಾಗಿದೆ. ಮೂಲದಲ್ಲಿ ಮೇಲಿನಕೃತಿಯನ್ನು ತಾಳೆಯಗರಿಯಮೇಲೆ ಮೂಡಿಸಿದವರು, ಶ್ರೀ. ರಾಮಣ್ಣಯ್ಯನವರು. ಅದನ್ನು ಸಂಗ್ರಹಿಸಿ, ಲಿಪಿಕಾರರಾಗಿ, ಸಂಪಾದಕರಾಗಿ, ಹಾಗೂ ಸಂಶೋಧಕರಾಗಿ, ಡಾ. ಚಂದ್ರರವರು ತಮ್ಮ ಪಾತ್ರವನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಿದ್ದಾರೆ. ಈ ಗ್ರಂಥದ ನಿರ್ವಹಣಾ ಸಮಿತಿಯೂ ಅಷ್ಟೇ ಜವಾಬ್ದಾರಿಯಿಂದ ತನ್ನ ಕೆಲಸವನ್ನು ನಿರ್ವಹಿಸಿ ಸಹಕರಿಸಿದೆ. ಭೌತಶ...