’ ಹೂಸ್ಟನ್ ಕನ್ನಡ ವೃಂದ ’, ಬೆಳ್ಳಿಹಬ್ಬವನ್ನು ಸಂಭ್ರಮದಿಂದ ಆಚರಿಸಿತು !

ಹೂಸ್ಟನ್ ಕನ್ನಡ ವೃಂದದವರು, ೨೦೦೮ ರ ಯುಗಾದಿಯ ದಿನ ತಮ್ಮ ಸಂಘದ ’ಬೆಳ್ಳಿಹಬ್ಬ” ವನ್ನು ಆಚರಿಸಿದರು. ಆ ದಿನ ಕನ್ನಡ ಮಕ್ಕಳೆಲ್ಲಾ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮನರಂಜನೆಯ ಕಾರ್ಯಕ್ರಮವನ್ನು ಹಮ್ಮಿಕೊಂಡು ಪ್ರೇಕ್ಷಕರ ಮನಸೂರೆಗೊಂಡರು. ಆ ದಿನದ ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ, ಪ್ರೊ. ಹೆಚ್. ಆರ್. ಚಂದ್ರಶೇಖರ್ ರವರು, ಬರೆದು ಪ್ರಸ್ತುತಪಡಿಸಿದ, " ಕರ್ಣಾಟಕ ಭಾಗವತ " ದ ಎರಡು ಸಂಪುಟಗಳ ಬಿಡುಗಡೆಯ ಸಮಾರಂಭ ! ಈ ಎರಡು ಪುಸ್ತಕಗಳು ಅತ್ಯಂತ ಸಮಯೋಚಿತವಾಗಿಯೂ ಹಾಗೂ ಕರ್ಣಾಟಕದ ಭಾಗವತದ ರಚನೆಕಾರರ ಸಮಗ್ರ ಕೆಲಸಗಳ ಪಟ್ಟಿಯನ್ನು ಕಲೆಹಾಕಿ, ಅದರಲ್ಲಿ ಮತ್ತೂ ಮುಂದೆಹೋಗಿ ಸಂಶೋಧನೆಮಾಡುವ ನಿಟ್ಟಿನಲ್ಲಿ ಕಾರ್ಯಕರ್ತರನ್ನು ಉತ್ತೇಜಿಸುವ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಿವೆ. ಎಲ್ಲಕ್ಕಿಂತ ಮಿಗಿಲಾಗಿ, ಇನ್ನೇನು ಮುರಿದು ಪುಡಿ-ಪುಡಿಯಾಗುವ ಸ್ಥಿತಿಯಲ್ಲಿದ್ದ " ತಾಳೆಗರಿಗಳ, ಜ್ಞಾನ ಭಂಡಾರ " ವನ್ನು ರಕ್ಷಿಸಿ ಪೋಶಿಸಿಕೊಂಡುಬಂದ ಬಗೆ ಅನನ್ಯವಾಗಿದೆ. ಮೂಲದಲ್ಲಿ ಮೇಲಿನಕೃತಿಯನ್ನು ತಾಳೆಯಗರಿಯಮೇಲೆ ಮೂಡಿಸಿದವರು, ಶ್ರೀ. ರಾಮಣ್ಣಯ್ಯನವರು. ಅದನ್ನು ಸಂಗ್ರಹಿಸಿ, ಲಿಪಿಕಾರರಾಗಿ, ಸಂಪಾದಕರಾಗಿ, ಹಾಗೂ ಸಂಶೋಧಕರಾಗಿ, ಡಾ. ಚಂದ್ರರವರು ತಮ್ಮ ಪಾತ್ರವನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಿದ್ದಾರೆ. ಈ ಗ್ರಂಥದ ನಿರ್ವಹಣಾ ಸಮಿತಿಯೂ ಅಷ್ಟೇ ಜವಾಬ್ದಾರಿಯಿಂದ ತನ್ನ ಕೆಲಸವನ್ನು ನಿರ್ವಹಿಸಿ ಸಹಕರಿಸಿದೆ.

ಭೌತಶಾಸ್ತ್ರದ ಪ್ರಾಧ್ಯಾಪಕರಾದ ಡಾ . ಚಂದ್ರರವರು, ಇಷ್ಟು ವ್ಯವಧಾನದಿಂದ ಇಂತಹ ಅತ್ಯುತ್ತಮ ಸಂಶೋಧನಾ ಗ್ರಂಥವನ್ನು ಹೊರತಂದಾಗ, ಭಾಷಾ ವಿದ್ಯಾರ್ಥಿಗಳು ಕೈಕಟ್ಟಿ ನಿಲ್ಲುವುದೇಕೆ ? ಇನ್ನೂ ಹೊಸ ಹೊಸ ಉತ್ತಮ ಕೃತಿಗಳು ಹೊರಬರಲಿ. ಈ ನಿಟ್ಟಿನಲ್ಲಿ ಕನ್ನಡಮ್ಮನ ಬೆಳವಣಿಗೆಯಲ್ಲಿ ತಮ್ಮ ಸಹಯೋಗವನ್ನು ತೋರಿಸುತ್ತಿರುವ, ’ ಹೂಸ್ಟನ್ ಕನ್ನಡ ವೃಂದ ” ಕ್ಕೆ ನೂರು ನಮನಗಳು ! ಕಡಲಾಚೆ ಕನ್ನಡದ ದ್ವಜವನ್ನು ಮೇಲೆತ್ತಿ ಮೆರೆಸುತ್ತಿರುವ ಅವರ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯ !

೧೨, ನೆ ತಾರೀಖು ೨೦೦೮ ರಂದು, ಭಾಗವತ ಪುಸ್ತಕ, ವಿಧ್ಯುಕ್ತವಾಗಿ ಬಿಡುಗಡೆಯಾಯಿತು !



ಮಕ್ಕಳ ಮನರಂಜನಾ ಕಾರ್ಯಕ್ರಮ ಅತಿ ಮುದನೀಡಿತು.

Comments

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !