" ಕರ್ಣಾಟಕ ಭಾಗವತ " ಇನ್ನೇನು ಸದ್ಯದಲ್ಲೇ ಹೊರಬಲಿದೆ !
ಈ ಪುಸ್ತಕದ ಪ್ರಕಟಣೆಯ ಹೊರೆಯನ್ನು ಚಂದ್ರಶೇಖರ್ ಜೊತೆಗೆ, ಮತ್ತೂ ಹಲವರು, ತಮ್ಮ ಅಮೂಲ್ಯಸಮಯವನ್ನು ಬದಿಗಿಟ್ಟು ಸಹಕರಿಸಿದ್ದಾರೆ. ಅವರಲ್ಲಿ ಪ್ರಮುಖರು, ಶ್ರೀ ರಾಮಕೃಷ್ಣರವರು. ಇವರು, ತಮ್ಮ ಕಾಲೇಜ್ ನ ವೃತ್ತಿಯಿಂದ ನಿವೃತ್ತರಾಗಿದ್ದಾರೆ. ಆದರೆ, ಪ್ರವೃತ್ತಿಯಿಂದಲ್ಲ. ಭಾಗವತದ ಪ್ರತಿಹಂತದಲ್ಲೂ ಸಹಕರಿಸಿ, ಅದರ ಸಂಪಾದನೆಯಲ್ಲೂ ಯೋಗದಾನಮಾಡಿದ್ದಾರೆ.
ಇದಕ್ಕಾಗಿಯೇ ನಿರ್ಮಿಸಿದ್ದ ಸಮಿತಿಯ ಸದಸ್ಯರೆಲ್ಲಾ ತಮ್ಮ ಅಮೂಲ್ಯ ಕಾಣಿಕೆಯನ್ನು ಕೊಟ್ಟಿದ್ದಾರೆ. ಇಂತಹ ಗ್ರಂಥದ ಎರಡು ಸಂಪುಟಗಳ ಪ್ರತಿಗಳನ್ನು ಅಮೆರಿಕ ಸಂಯುಕ್ತಸಂಸ್ಥಾನದ ಹೂಸ್ಟನ್ ನಗರದ ಕನ್ನಡ ವೃಂದದವರು, ಹಮ್ಮಿಕೊಂಡಿರುವ ತಮ್ಮ ಬೆಳ್ಳಿಹಬ್ಬದ ಆಚರಣೆಯ ಸಮಾರಂಭದ ಶುಭ ಅವಸರದಲ್ಲಿ ಬಿಡುಗಡೆಮಾಡಲಾಗುತ್ತಿದೆ.
ಸುಂಕದ ಪರಿವಾರದವರಿಗೆಲ್ಲಾ, ಇದೊಂದು " ಅವಿಸ್ಮರಣೀಯ ದಿನ," ವೆಂದರೆ ತಪ್ಪಲ್ಲ !
Comments
9483688250