'ಉದಯ ರವಿ-' ಪುಸ್ತಕದ ಹೆಸರು !
ಇದನ್ನು ಬರೆದವರು, ಚಿ. ಶ್ರೀಪಾದ್ . ನಮ್ಮ ವಂಶದಲ್ಲಿ ಅನೇಕ ಬುದ್ಧಿಜೀವಿಗಳು, ಹಲವು ಗ್ರಂಥಗಳ ರಚನೆಯ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಮೂಲದಲ್ಲಿ ಪ್ರಮುಖರಾದವರಲ್ಲಿ, 'ಶ್ರೀ. ರಾಮಣ್ಣಯ್ಯನವರು ಒಬ್ಬರು '. ’ನಿತ್ಯಾತ್ಮ ಶುಕಯೋಗಿ ” ಗಳು ರಚಿಸಿದ, ಭಾಗವತ ಗ್ರಂಥವನ್ನು ರಾಮಣ್ಣಯ್ಯನವರು, ತಾಳೆಗರಿಗಳಮೇಲೆ ಕೆತ್ತಿ ಸಂಗ್ರಹಿಸಿಟ್ಟಿದ್ದರು. ನಂತರ ಹಲವು ಶತಮಾನಗಳ ಬಳಿಕ, ತನ್ನ ಕೈಗೆ ದೊರೆತ ಹಳೆಯ ತಲೆಮಾರಿನ, ತಾಳೇಗರಿಗಳನ್ನು ಪಡೆದು, ಅವನ್ನು ಕಂಪ್ಯೂಟರ್ ನಲ್ಲಿ ಪರಿಷ್ಕರಿಸಿ, ಪರಿಣತರಿಂದ ಸಲಹೆ, ಮಶ್ವರಗಳನ್ನು ಪಡೆದು, (ಇದರಲ್ಲಿ ರಾಮಕೃಷ್ಣರಾಯರ ಕೆಲಸ ಅತಿ ಮಹತ್ವದ್ದಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪುಸ್ತಕ ಸಂಪಾದನೆಯ ಕೆಲಸಗಳನ್ನು ನಿರ್ವಹಿಸಿ, ಅವನ್ನು ತಜ್ಞರ ಅಭಿಮತಕ್ಕೆ ಒಳಪಡಿಸಿ, ಭಾರತ, ಮತ್ತು ಅಮೆರಿಕಗಳನಡುವೆ ಸಂಪರ್ಕಾಧಿಕಾರಿಯ ತರಹದ ಕಾರ್ಯವಿಧಾನ, ನಿಜಕ್ಕೂ ಒಂದು ಸವಾಲಿನದಾಗಿತ್ತು.) ಸಂಪಾದಿಸಿ, ಎರಡು ಸಂಪುಟಗಳಲ್ಲಿ, " ಕರ್ಣಾಟಕ ಭಾಗವತ " ವೆಂಬ ಉದ್ಗ್ರಂಥವನ್ನು, ' ಚಿ. ಚಂದ್ರಶೇಖರ್ ' ಹೊರತಂದನು. ಈ ನಿಟ್ಟಿನಲ್ಲಿ, ಚಂದ್ರಶೇಖರ್, ರಾಮಕೃಷ್ಣ, ಮುಂದಿನ ಕಾರ್ಯಗಳನ್ನು ಯಶಸ್ವಿಯಾಗಿ ಮುಂದುವರೆಸಿಕೊಂಡು ಬರುತ್ತಿರುವುದನ್ನು ನಾವೆಲ್ಲಾ ಚೆನ್ನಾಗಿ ಬಲ...