'ಉದಯ ರವಿ-' ಪುಸ್ತಕದ ಹೆಸರು !

ಇದನ್ನು ಬರೆದವರು, ಚಿ. ಶ್ರೀಪಾದ್. ನಮ್ಮ ವಂಶದಲ್ಲಿ ಅನೇಕ ಬುದ್ಧಿಜೀವಿಗಳು, ಹಲವು ಗ್ರಂಥಗಳ ರಚನೆಯ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಮೂಲದಲ್ಲಿ ಪ್ರಮುಖರಾದವರಲ್ಲಿ,  'ಶ್ರೀ. ರಾಮಣ್ಣಯ್ಯನವರು ಒಬ್ಬರು '.  ’ನಿತ್ಯಾತ್ಮ ಶುಕಯೋಗಿ ”ಗಳು ರಚಿಸಿದ, ಭಾಗವತ ಗ್ರಂಥವನ್ನು ರಾಮಣ್ಣಯ್ಯನವರು, ತಾಳೆಗರಿಗಳಮೇಲೆ ಕೆತ್ತಿ ಸಂಗ್ರಹಿಸಿಟ್ಟಿದ್ದರು.   ನಂತರ ಹಲವು ಶತಮಾನಗಳ ಬಳಿಕ, ತನ್ನ ಕೈಗೆ ದೊರೆತ ಹಳೆಯ ತಲೆಮಾರಿನ, ತಾಳೇಗರಿಗಳನ್ನು  ಪಡೆದು, ಅವನ್ನು ಕಂಪ್ಯೂಟರ್ ನಲ್ಲಿ  ಪರಿಷ್ಕರಿಸಿ, ಪರಿಣತರಿಂದ ಸಲಹೆ, ಮಶ್ವರಗಳನ್ನು ಪಡೆದು, (ಇದರಲ್ಲಿ ರಾಮಕೃಷ್ಣರಾಯರ ಕೆಲಸ ಅತಿ ಮಹತ್ವದ್ದಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪುಸ್ತಕ ಸಂಪಾದನೆಯ ಕೆಲಸಗಳನ್ನು ನಿರ್ವಹಿಸಿ, ಅವನ್ನು ತಜ್ಞರ ಅಭಿಮತಕ್ಕೆ ಒಳಪಡಿಸಿ, ಭಾರತ, ಮತ್ತು  ಅಮೆರಿಕಗಳನಡುವೆ ಸಂಪರ್ಕಾಧಿಕಾರಿಯ ತರಹದ ಕಾರ್ಯವಿಧಾನ, ನಿಜಕ್ಕೂ ಒಂದು ಸವಾಲಿನದಾಗಿತ್ತು.)  ಸಂಪಾದಿಸಿ, ಎರಡು ಸಂಪುಟಗಳಲ್ಲಿ, " ಕರ್ಣಾಟಕ ಭಾಗವತ  "ವೆಂಬ ಉದ್ಗ್ರಂಥವನ್ನು, ' ಚಿ. ಚಂದ್ರಶೇಖರ್ '  ಹೊರತಂದನು.   ಈ  ನಿಟ್ಟಿನಲ್ಲಿ, ಚಂದ್ರಶೇಖರ್,  ರಾಮಕೃಷ್ಣ,  ಮುಂದಿನ ಕಾರ್ಯಗಳನ್ನು ಯಶಸ್ವಿಯಾಗಿ ಮುಂದುವರೆಸಿಕೊಂಡು  ಬರುತ್ತಿರುವುದನ್ನು ನಾವೆಲ್ಲಾ ಚೆನ್ನಾಗಿ ಬಲ್ಲೆವು. 
'ಶ್ರೀ. ರಾಮಕೃಷ್ಣರಾವ್, 'ಹಲವಾರು ವೈಜ್ಞಾನಿಕ ಪುಸ್ತಕಗಳನ್ನೂ,  ಮತ್ತು ಈಗಾಗಲೇ ಸುಪ್ರಸಿದ್ಧರಾಗಿರುವ ವಿಶೇಷ ವ್ಯಕ್ತಿಗಳ ಜೀವನ ಶೈಲಿಗಳನ್ನು ಬೆಳಕಿಗೆ ತರುವ, ಪುಸ್ತಕಗಳನ್ನೂ, ಇಂದಿನ ಯುವಕರಿಗೆ, ಪರಿಚಯಿಸುವ ನಿಟ್ಟಿನಲ್ಲಿ ಹೊರತಂದಿರುತ್ತಾರೆ.  'ಶ್ರೀ. ಎಚ್. ಆರ್. ಆರ್. ಬರೆದ ಭೌತಶಾಸ್ತ್ರದ ಪಠ್ಯಪುಸ್ತಕಗಳು', ಹೊಸ-ಹೊಸ  ತಥ್ಯಗಳನ್ನು ಹೊಂದಿದ್ದು,  ಆತ್ಯಂತ ಉಪಯುಕ್ತವಾಗಿದ್ದು, ವಿದ್ಯಾರ್ಥಿಗಳಿಗೆ ಮನಒಲಿಸುವ ತರಹವಿರುವುದರಿಂದ, ಸಹಜವಾಗಿಯೇ  ಜನಪ್ರಿಯತೆಯನ್ನು ಗಳಿಸಿವೆ. 
 ಇತ್ತೀಚೆಗೆ ಅದೇ ವಂಶಸಂಭೂತನಾಗಿರುವ, 'ಚಿ. ಶ್ರೀಪಾದನು' ತನ್ನದೇ ಆದ ರೀತಿಯಲ್ಲಿ ಅಧ್ಯಾತ್ಮದ ಒಲವನ್ನು,' ಶ್ರೀ ವಿರಜಾನಂದ' ರವರ ಸಾನ್ನಿದ್ದ್ಯದಿಂದ ಪಡೆದು, "ಉದಯರವಿ"ಯೆಂಬ ಪುಸ್ತಕವನ್ನು ಹೊರತಂದಿರುತ್ತಾನೆ. ಅದರ ಬಗ್ಗೆ ಹೇಳುವುದಕ್ಕಿಂತ ಒಮ್ಮೆ ಓದಿ ತಿಳಿಯುವುದೇ ಮೇಲು. ಉದಯೋನ್ಮುಖ ರವಿಯೊಬ್ಬ ಮತ್ತೆ ಇಂದಿನ ದಿಗಂತದಲ್ಲಿ ಮೇಲೇರಿ ಬರುತ್ತಿರುವುದನ್ನು ನಮ್ಮೆಲ್ಲರ ಮುಂದೆ ಇಡುವ ಪ್ರಯತ್ನವನ್ನು ಡಾ. ಶ್ರೀಪಾದ್ ಯಶಸ್ವಿಯಾಗಿ ಮಾಡಿರುತ್ತಾನೆ. ಖಂಡಿತ ಓದಿ ಅದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕೊಡಿ. 
ಇದರ ಸಂಪೂರ್ಣ ಪುಟಗಳನ್ನು ತೋರಿಸುವ "ಪಿ. ಡಿ. ಎಫ್" ನ್ನು ಹಿಂಬಾಲಿಸಿ. 
UdayaRavi.pdf
UdayaRavi.pdf
18701K   View  






Comments

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !