ಮುಂಬಯಿನಲ್ಲಿ ನಾವಿಬ್ಬರೂ (ಸೌ ಸರೋಜಾ ಮತ್ತು ನಾನು), ಶಂಕರಣ್ಣ ಮತ್ತು ಚಿ. ಸೌ ಗೀತಾರವರ ಜೊತೆ ಪಗಡೆ ಆಟ ಆಡಿದ ಸವಿ ನೆನೆಪು !
ನಮ್ಮ ಚಿಕ್ಕಮ್ಮ ಪದ್ದಮ್ಮನವರ ಜೊತೆ (ಅವನಿಗೆ ಅಜ್ಜಿಯಾಗಬೇಕು) ಶಂಕರಣ್ಣ ಪಗಡೆ ಆಟ ಆಡುತ್ತಿದ್ದನ್ನು ನಾನು ಹೊಳಲ್ಕೆರೆಯಲ್ಲಿ ನೋಡಿದ್ದೆ. ಆಮೇಲೆ ಅದನ್ನು ಆಡಿದ್ದರ ಬಗ್ಗೆ ನಾವಿಬ್ಬರೂ ಚರ್ಚಿಸಿಲ್ಲ. ಈಗ ಮಕ್ಕಳಿಗೆ ಅದನ್ನು ಆಡಲು ಸಮಯವಿಲ್ಲ. ಅಲ್ಲದೆ ಈಗಿನ ಆಟಗಳೇ ಬೇರೆ. ಎಲ್ಲಕ್ಕೂ ಹೆಚ್ಚಾಗಿ ಮೊಬೈಲ್, ಕಂಪ್ಯೂಟರ್ ಮತ್ತು ಟೆಲಿವಿಷನ್ ಗಳು ಪರಿವಾರದ ಸಮಯವನ್ನೆಲ್ಲ ನುಂಗಿಹಾಕಿದೆ ಎಂದು ನಾವು ಅಂದರೆ, ನಮ್ಮ ಮಕ್ಕಳು ಅದನ್ನು ಒಪ್ಪುವುದಿಲ್ಲ. ಪಗಡೆ ಆಟ ನಾವು ಚಿಕ್ಕವರಾಗಿದ್ದಾಗಿನಿಂದಲೂ ಆಡ್ತಾ ಬಂದ ಆಟ. ನಾವಿದ್ದ ಹೊಳಲ್ಕೆರೆ ಅಥವಾ ಕಾಳಘಟ್ಟದಲ್ಲಿ ಇನ್ಯಾವ ಆಟ ಸಿಕ್ತಿತ್ತು ಆಡಕ್ಕೆ ? ಕುಂಟೆಬಿಲ್ಲೆ, ಚಿನ್ನಿದಾಂಡು, ಉಡ್ತುತ್ತಿ, ಲಗ್ಗೋರಿ, ಗೊಟಗೋಣಿ ಮಣೆ ಚೌಕಬರೆ ಅಷ್ಟೇ. ನಾನು ಚಂದ್ರಣ್ಣ ಸೇರಿ 'ಟ್ರೇಡ್ ಅನ್ನೋ ಆಟ' ಹೇಗೋ ಕಲ್ತಿದ್ವಿ. ಎಲೆಕ್ಟ್ರಿಕ್ ಲೈಟ್ ಇಲ್ಲದ ಕಾಲದಲ್ಲಿ ರೇಡಿಯೊ, ಟಿವಿ, ಎಲ್ಲಿ ಬರ್ಬೇಕು, ಮರಕೋತಿ ಆಟ, ಫುಟ್ಬಾಲ್ ಆಡ್ತಿದ್ವಿ. ಕ್ರಿಕೆಟ್ ಅಂತ ಆಟ ಗೊತ್ತಾದ್ದು ನಮ್ಮ ಊರಿನ ಶಿವಮೂರ್ತಿ ಅನ್ನೊ ಟೈಲರ್ ಹುಡ್ಗ್ನಿಂದ. ಅವರೆಲ್ಲಾ ಮಹಾರಾಷ್ಟ್ರದೋರು. ಗವಸ್ಕರ್, ಅಜಿತ್ ವಾಡೇಕರ್, ಹೆಸರು ಕೇಳ್ದೋರು ! ನಾವು ಬೊಂಬಾಯ್ನಲ್ಲಿ ಪಗಡೆ ಆಟ ಆಡಕ್ಕೆ ಕೂತಾಗ ಹಳೆಯ ಬಾಲ್ಯದ ನೆನಪಿನ ಸುರಳಿಗಳು ಹಾಗೆಯೇ ಮನಸ್ಸಿನ ಪರದೆಯಮೇಲೆ ಹಾದು ಹೋದವು. ಅಮ್ಮ ಅ...