ಮುಂಬಯಿನಲ್ಲಿ ನಾವಿಬ್ಬರೂ (ಸೌ ಸರೋಜಾ ಮತ್ತು ನಾನು), ಶಂಕರಣ್ಣ ಮತ್ತು ಚಿ. ಸೌ ಗೀತಾರವರ ಜೊತೆ ಪಗಡೆ ಆಟ ಆಡಿದ ಸವಿ ನೆನೆಪು !

ನಮ್ಮ ಚಿಕ್ಕಮ್ಮ ಪದ್ದಮ್ಮನವರ ಜೊತೆ (ಅವನಿಗೆ ಅಜ್ಜಿಯಾಗಬೇಕು)  ಶಂಕರಣ್ಣ ಪಗಡೆ ಆಟ ಆಡುತ್ತಿದ್ದನ್ನು ನಾನು ಹೊಳಲ್ಕೆರೆಯಲ್ಲಿ ನೋಡಿದ್ದೆ. ಆಮೇಲೆ ಅದನ್ನು ಆಡಿದ್ದರ ಬಗ್ಗೆ ನಾವಿಬ್ಬರೂ ಚರ್ಚಿಸಿಲ್ಲ. ಈಗ ಮಕ್ಕಳಿಗೆ ಅದನ್ನು ಆಡಲು ಸಮಯವಿಲ್ಲ. ಅಲ್ಲದೆ ಈಗಿನ ಆಟಗಳೇ ಬೇರೆ. ಎಲ್ಲಕ್ಕೂ ಹೆಚ್ಚಾಗಿ ಮೊಬೈಲ್, ಕಂಪ್ಯೂಟರ್  ಮತ್ತು ಟೆಲಿವಿಷನ್  ಗಳು ಪರಿವಾರದ ಸಮಯವನ್ನೆಲ್ಲ ನುಂಗಿಹಾಕಿದೆ ಎಂದು ನಾವು ಅಂದರೆ, ನಮ್ಮ ಮಕ್ಕಳು ಅದನ್ನು ಒಪ್ಪುವುದಿಲ್ಲ. 







ಪಗಡೆ ಆಟ ನಾವು ಚಿಕ್ಕವರಾಗಿದ್ದಾಗಿನಿಂದಲೂ ಆಡ್ತಾ ಬಂದ ಆಟ. ನಾವಿದ್ದ ಹೊಳಲ್ಕೆರೆ ಅಥವಾ ಕಾಳಘಟ್ಟದಲ್ಲಿ ಇನ್ಯಾವ ಆಟ ಸಿಕ್ತಿತ್ತು ಆಡಕ್ಕೆ ? ಕುಂಟೆಬಿಲ್ಲೆ, ಚಿನ್ನಿದಾಂಡು, ಉಡ್ತುತ್ತಿ, ಲಗ್ಗೋರಿ, ಗೊಟಗೋಣಿ ಮಣೆ ಚೌಕಬರೆ ಅಷ್ಟೇ. ನಾನು ಚಂದ್ರಣ್ಣ ಸೇರಿ 'ಟ್ರೇಡ್ ಅನ್ನೋ ಆಟ' ಹೇಗೋ ಕಲ್ತಿದ್ವಿ. ಎಲೆಕ್ಟ್ರಿಕ್ ಲೈಟ್ ಇಲ್ಲದ ಕಾಲದಲ್ಲಿ ರೇಡಿಯೊ, ಟಿವಿ, ಎಲ್ಲಿ ಬರ್ಬೇಕು,

ಮರಕೋತಿ ಆಟ, ಫುಟ್ಬಾಲ್ ಆಡ್ತಿದ್ವಿ. ಕ್ರಿಕೆಟ್ ಅಂತ ಆಟ ಗೊತ್ತಾದ್ದು ನಮ್ಮ ಊರಿನ ಶಿವಮೂರ್ತಿ ಅನ್ನೊ ಟೈಲರ್ ಹುಡ್ಗ್ನಿಂದ. ಅವರೆಲ್ಲಾ ಮಹಾರಾಷ್ಟ್ರದೋರು. ಗವಸ್ಕರ್, ಅಜಿತ್ ವಾಡೇಕರ್, ಹೆಸರು ಕೇಳ್ದೋರು !

ನಾವು ಬೊಂಬಾಯ್ನಲ್ಲಿ ಪಗಡೆ ಆಟ ಆಡಕ್ಕೆ ಕೂತಾಗ ಹಳೆಯ ಬಾಲ್ಯದ ನೆನಪಿನ ಸುರಳಿಗಳು ಹಾಗೆಯೇ ಮನಸ್ಸಿನ ಪರದೆಯಮೇಲೆ ಹಾದು ಹೋದವು.
ಅಮ್ಮ ಅಪ್ಪ, ನಾಗರಾಜ, ರಾಮಕೃಷ್ಣ, ಪಗಡೆ ಆಡೋದ್ರಲ್ಲಿ ನಿಸ್ಸೀಮರು. ಗರ ಹೇಗೆ ಕರಾರುವಾಕ್ಕಾಗಿ ಬೀಳ್ತಿತ್ತು ಆಗ ! ದುಗ ಅಂದ್ರೆ ದುಗ ನಾಕು ಒಂದು ಹನ್ನೆರಡು, ಹತ್ತು ಸರಿಯಾಗಿ ಅವ್ನ್ ಹೇಳ್ಕೊಂಡ್ ದಾಳ ಉರ್ಳಿಸಿದ್ರೆ, ಅವೇ ಗರ ಬೀಳೋವು. ಅವ್ರು ನಮ್ಮನ್ನು ಕಡಿದಿದ್ದೂ ಕಡಿದಿದ್ದೆ. ಹಣ್ ಹಣ್ ಕಾಯಿ ಏಟ್ ತಿಂದು ಮನೆಗ್ ಬರೋವು. ಚಂದ್ರಣ್ಣನಂತೂ ನಾಲ್ಕು ಕಾಯಿಯೂ ಏಟ್ತಿಂದ್ ಮನೆಸೇರಿದಾಗ ಅತ್ತೂ ಅತ್ತೂ ಅಳೋನು.  ಒಮ್ಮೊಮ್ಮೆ ಎಲ್ಲಾ ಕಾಯಿಗಳು ಹಣ್ಣದಾಗ ಅವನ ಅರಳಿದ ಮುಖ ನೋಡಲು ಅದೆಷ್ಟು ಚೆನ್ನ ?
ನಮ್ಮ ನಾಗಮಣಿ ಅತ್ತಿಗೆ ಸಹಿತ, ಪಗಡೆ ಕಲಿತು ತುಂಬಾ 'ಎಂಜಾಯ್' ಮಾಡೋರು. ಅಶ್ವಥ್ಥ ಆಡ್ತಿದ್ನೋ ಇಲ್ಲವೋ ತಿಳಿಯದು. ಅಷ್ಟ್ ಹೊತ್ತಿಗೆ ನಾನು ಆಗಲೇ ಬೆಂಗ್ಳೂರ್ ಸೇರಿದ್ದೆ. ಪಗಡೆ ಆಟ, ಬಹಳ ವರ್ಷಗಳ ಕೆಳಗೆ ಆಡಿದ್ದು. ಸುಬ್ಬಕ್ಕಾ ಬಂದಾಗ ಯಾವಾಗಲೋ ಆಡಿದ ನೆನಪು. ಗೋಪಣ್ಣ, ನಳಿನಮ್ಮ ಬಂದಾಗ್ ಅವರ ಜೊತ್‌ಗೆ ಪಗಡೆ ಆಡಿದ್ವಿ. ಚಂದ್ರಣ್ಣ ಇಲ್ಲಿಗ ಬಂದಾಗ ಆಡಿದ್ದ.
ಶಂಕರಣ್ಣ, ಗೀತಾ, ನಾನು, ಸರೋಜ ಆಡಿದ ಆಟದಲ್ಲಿ ನನಗೆ ಗರಗಳೇ ಬೀಳುತ್ತಿರಲಿಲ್ಲ. ನಾನು ಎರಡು ಬಾರಿ ಸೋತೆ. ಶಂಕರಣ್ಣ ಯಾವಾಗಲೂ ಮೊದಲು ಕಾಯಿಗಳನ್ನು ಹಣ್ಣು ಮಾಡುತ್ತಿದ್ದ. ನಾನು ೪-೫ ಆಟ ಆಡಿದಮೇಲೆ ಸ್ವಲ್ಪ ಗೆಲ್ಲುವ ಅಂದರೆ ಎರ್ಡನೆಯ ಬಾರಿಗೆಕಾಯಿ ಹಣ್ಣುಮಾಡುವ ಅಭ್ಯಾಸಬೆಳೆಸಿಕೊಂಡೆ. ಸರೋಜ ಒಂದ್ಸಲ ಸೋತಿದ್ ಬಿಟ್ರೆ, ಹೇಗೋ ಮುಂದೆ ಗೆಲ್ತಾನೆ ಹೋದ್ಲು. ಗರಗಳೂ ಚೆನ್ನಾಗೇ ಬೀಳ್ತಿತ್ತಪ್ಪ. ಹಾಳು ನನಗೇ ಗರಗಳು ಯಾವಾಗಲೂ ಕೈಕೊಡ್ತಿತ್ತು. ಗೀತಾವ್ರು, ಸೋತಿದ್ದೆ ಇಲ್ಲ.ಹೊಳಲ್ಕೆರೆಯಲ್ಲಿ ನಾವು ಚಿಕ್ಕವರಾಗಿದ್ದಾಗಿನ ಮಾತು:
ಕಿಟ್ಟಣ್ಣ, ನಮ್ಮ ಪದ್ದಮ್ಮಚಿಕ್ಕಮ್ಮ,ಪಗಡೆ ಆಟ್ತಿದ್ ಆಟದಲ್ಲಿ ಕಡ್ತಹೆಚ್ಚಾಗಿರೋದು, ಗರಾನೂ ಅವ್ರಿಗೆ ಹಾಗೇ ಬೀಳ್ತಿತ್ತು. 'ದುಗಾ ಅಂದ್ರೆ ದುಗ,'ನಾಕು ಒಂದು' ಅಂದ್ರೆ ನಾಕು ಒಂದು ! ದಾಳದಮೇಲೆ ಅದೆಶ್ಟು ಹತೋಟಿ ಇತ್ತು ಅವರಿಗೆ ?
ಸರಿಯಾದ್ ಸಮಯದಲ್ಲಿ ಗರಬೀಳ್ದಿದ್ದಾಗ ನಮ್ಮಮ್ಮ  ಹೇಳ್ತಿದ್ದ ಮಾತುಗಳು ಮರೆಯಲು ಅಸಾಧ್ಯವಾದವುಗಳು.  ಕರ್ಣನ ದುರಾದೃಷ್ಟದ ತರಹ, ಎಂದು ಮಹಾಭಾರತದ ಕಡೆ ನಮ್ಮ ಗಮನ ಸೆಳೆಯುತ್ತಿದ್ದರು. ಅಮ್ಮ ದಿನವಿಡೀ ಹೇಳುತ್ತಿದ್ದ ಮಹಾಭಾರತ, ರಾಮಾಯಣದ ಕಥೆಗಳನ್ನು ಕೇಳುತ್ತಲೇ ನಾವು ದೊಡ್ಡವರಾದೆವು.ಪಗಡೆ ಆಟದ ಸಮಯದಲ್ಲೂ ಪಾಂಡವರು ಹೇಗೆ ಪಗಡೆ ಆಡಿ ಸೋತರು, ಎನ್ನುವುದನ್ನು ಅಮ್ಮ ಬೇಸರದಿಂದ ಹೇಳೋರು. ಯುದ್ಧ ರಂಗದಲ್ಲಿ ಸೆಣೆಸುವ ಸಮಯದಲ್ಲಿ ಕರ್ಣ, "ತೊಟ್ಟ ಬಾಣ ಮತ್ತೆ ತೋಡುವಂತಿಲ್ಲ". ದಿವ್ಯಾಸ್ತ್ರಗಳ ಮರೆವು, ಅಮ್ಮನಿಗೆ ಬಹಳ ಬೇಸರ ತರುತ್ತಿದ್ದವು. ಆ ಸಂದರ್ಭವನ್ನು ಮನಮುಟ್ಟುವಂತೆ ವಿವರಿಸುತ್ತಿದ್ದ ಅವರ ಕಥಾ ನಿರೂಪಣಾ ಶಕ್ತಿ, ನಮ್ಮ ರಾಮಕೃಷ್ಣ ಹಾಗೂ ಚಂದ್ರಣ್ಣನಿಗೆ ಒಲಿದಿದೆ ಅನ್ನಿಸುತ್ತದೆ. ಮತ್ತೆ ಅವರ ಕಥೆಯನ್ನು ಕೇಳಿ, ಆಟ ಮುಂದುವರೆದಾಗ ಅರ್ಧ ಗಂಟೆಯೋ ಮುಕ್ಕಾಲು ಗಂಟೆಯೇ ಆಗುತ್ತಿತ್ತು. 














Comments

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !