The teachings of Swami Vivekananda, for the spiritual upliftment !

Swami vivekananda was the first India  monk to enlighten the western elites, about the great cultural heritage of India. The Vedas, Upanishads, and the Epics like, Ramayana and Mahabharata, were explained in length, and the doctrine made the Europeans, and Americans spell bound ! After his visit to America the WEST realized the greatness of India in terms of its Spiritual prowess, and the great teaching in spirit and practice of  'Vasudhaiva  kutumbakam' ! 

ಸ್ವದೇಶಮಂತ್ರ :

ಆರ್ಯಮಾತೆಯ ಅಮೃತಪುತ್ರರಿರಾ ಮರೆಯದಿರಿ, ನಿಮ್ಮ ಸ್ತ್ರೀಯರ ಆದರ್ಶ ಸೀತಾ, ಸಾವಿತ್ರಿ, ದಮಯಂತಿಯರು.

ಮರೆಯದಿರಿ, ನೀವು ಪೂಜಿಸುವ ಜಗದೀಶ್ವರನು ತ್ಯಾಗಿಕುಲ ಚೂಡಾಮಣಿ, ಉಮಾವಲ್ಲಭಶಂಕರ.
ಮರೆಯದಿರಿ, ನಿಮ್ಮ ವಿವಾಹ, ನಿಮ್ಮ ಐಶ್ವರ್ಯ ನಿಮ್ಮ ಜೀವನ ಬರಿಯ ಇಂದ್ರಿಯ ಭೋಗಕ್ಕಲ್ಲ. ವ್ಯಕ್ತಿಗತ ಸುಖಕ್ಕೆ ಅಲ್ಲ.
ಮರೆಯದಿರಿ, ನಿಮ್ಮ ಜನ್ಮವಿರುವುದೇ ಜಗನ್ಮಾತೆಯ ಅಡಿದಾವರೆಯಲ್ಲಿ ಬಲಿದಾನಕ್ಕಾಗಿ !
ಮರೆಯದಿರಿ, ನಿಮ್ಮ ಸಾಮಾಜಿಕ ರಚನೆ ಅನಂತ ವಿಶ್ವಯ್ಯಾಪಿ ಜಗಜ್ಜನನಿಯ ಕಾಂತಿಯನ್ನು ಪ್ರತಿಬಿಂಬಿಸುವುದಕ್ಕಾಗಿ ಇರುವುದು.

ಮರೆಯದಿರಿ. ಅಂತ್ಯಜರು, ಮೂಢರು, ದರಿದ್ರರು, ನಿರಕ್ಷರಕುಕ್ಷಿಗಳು, ಚಂಡಾಲರು ಮತ್ತು ಚಮ್ಮಾರರು ಎಲ್ಲರೂ ನಿಮ್ಮರಕ್ತಬಂಧುಗಳಾದ ಸಹೋದರರು ! ವೀರಾತ್ಮರೇ, ಧೀರರಾಗಿ, ನೆಚ್ಚುಗೆಡದಿರಿ. ಭಾರತೀಯರು ನಾವು ಎಂದು ಹೆಮ್ಮೆತಾಳಿ. ಸಾರಿಹೇಳಿ, ಭಾರತೀಯರು ನಾವು, ಭಾರತೀಯರೆಲ್ಲ ನಮ್ಮಸಹೋದರರು. ಸಾರಿ ಹೇಳಿ, ಮೂರ್ಖ ಭಾರತೀಯರೆಮ್ಮ ಸಹೋದರರು, ಬ್ರಾಹ್ಮಣಭಾರತೀಯರೆಲ್ಲ ನಮ್ಮ ಸಹೋದರರು, ಪಂಚಮ ಭಾರತೀಯರೆಲ್ಲ ನಮ್ಮ ಸಹೋದರರು. ನೀವು ಒಂದು ಚಿಂದಿಯನ್ನುಟ್ಟು ಸೊಂಟಕ್ಕೆ ಕಟ್ಟಿಕೊಂಡಿದ್ದರೂ ಕೂಡ, ಅಭಿಮಾನಪೂರ್ವಕವಾಗಿ ದಿಕ್ ತಟಗಳು ಅಣುರಣಿತವಾಗುವಂತೆ ತಾರಕಸ್ವರದಿಂದ ಸಾರಿ ಹೇಳಿ " ಭಾರತೀಯರು ನಮ್ಮ ಸಹೋದರರು, ಭಾರತೀಯರು ನಮ್ಮ ಪ್ರಾಣ. ಭಾರತೀಯ ದೇವದೇವತೆಗಳೆಲ್ಲರು ನಮ್ಮದೇವರು. ಭಾರತೀಯ ಸಮಾಜ ನಮ್ಮ ಬಾಲ್ಯದ ತೊಟ್ಟಿಲು, ತಾರುಣ್ಯದ ನಂದನವನ, ವೃದ್ಧಾಪ್ಯದ ವಾರಣಾಸಿ."

ಸಹೋದರರೆ ಹೀಗೆ ಸಾರಿ :" ಭಾರತಭೂಮಿಯೆ ನಮ್ಮ ಪರಂಧಾಮ. ಭಾರತದ ಶುಭವೆ ನಮ್ಮ ಶುಭ. "ಹಗಲೂ ರಾತ್ರಿಯೂ ಇದು ನಿಮ್ಮ ಪ್ರರ್ಥನೆಯಾಗಲಿ, " ಹೇ ಗೌರಿನಾಥ, ಹೇ ಜಗನ್ಮಾತೆ, ಪೌರುಷವನ್ನು ಎಮೆಗೆ ದಯಪಾಲಿಸು. ಹೇ ಸರ್ವಶಕ್ತಿಶಾಲಿನೀ, ನಮ್ಮ ದೌರ್ಬಲ್ಯವನ್ನು ದಹಿಸು. ಕ್ಲೈಬ್ಯವನ್ನು ಹೋಗಲಾಡಿಸು. ನಮ್ಮ ಷಂಡತನವನ್ನು ತೊಲಗಿಸು ; ಪುರುಷಸಿಂಹರನ್ನಾಗಿ ಮಾಡು."

ಉತ್ತಿಷ್ಠತ ಜಾಗ್ರತ, ಪ್ರಾಪ್ಯ ವರಾನ್ನಿಬೋಧತ
ನನ್ನ ಕೆಲವು ಆದರ್ಶಗಳನ್ನು ಕೆಲವೇ ಪದಗಳಲ್ಲಿ ವಿವರಿಸಬಹುದು ; ಮಾನವ ಜನಂಗಕ್ಕೆ ಅದರ ದೈವಿಕತೆಯನ್ನೂ ಅದರ ಜೀವನದ ಪ್ರತಿಯೊಂದು ಚನವಲನದಲ್ಲೂ ಹೇಗೆ ಅದನ್ನು ವ್ಯಕ್ತಗೊಳಿಸುವುದು ಎಂಬುದನ್ನು ಬೋಧಿಸುವುದು.
ನನ್ನ ಧೀರ ಪುತ್ರರೆ, ನೀವೆಲ್ಲರೂ ಮಹತ್ಕಾರ್ಯವನ್ನು ಸಾಧಿಸುವುದಕ್ಕೆ ಹುಟ್ಟಿರುವಿರಿರೆಂದು ನಂಬಿ. ನಾಯಿಮರಿಗಳ ಬೊಗಳುವಿಕೆಯಿಂದ ಅಪ್ರತಿಭರಾಗಬೇಡಿ. ಸಿಡಿಲ ಗರ್ಜನೆಯೂ ನಿಮ್ಮನ್ನಂಜಿಸದಿರಲಿ. ಎದ್ದು ನಿಂತು ಕಾರ್ಯೋನ್ಮುಖರಾಗಿ.
ಎದ್ದೇಳಿ, ಕಾರ್ಯೋನ್ಮುಖರಾಗಿ. ಈ ಜೀವನವಾದರೂ ಎಷ್ಟುಕಾಲ ? ನೀವು ಈ ಜಗತ್ತಿಗೆ ಬಂದಮೇಲೆ ಏನಾದರೂ ಗುರುತನ್ನು ಬಿಟ್ಟು ಹೋಗಿ. ಅದಿಲ್ಲದಿದ್ದರೆ ನಿಮಗೂ ಆಮರಕಲ್ಲುಗಳಿಗೂ ಏನು ವ್ಯತ್ಯಾಸ ? ಅವೂ ಅಸ್ತಿತ್ವಕ್ಕೆ ಬರುತ್ತವೆ, ನಶಿಸಿ ನಿರ್ನಾಮವಾಗುತ್ತವೆ.

ನಮ್ಮ ದುಖಃಗಳಿಗೆಲ್ಲ ನಾವೇ ಜವಾಬ್ದಾರರು, ಮತ್ತಾರೂ ಅಲ್ಲ, ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ನಾವೇ.ನಿಮ್ಮ ತಪ್ಪಿಗಾಗಿ ಇತರರನ್ನು ದೂಷಿಸಬೇಡಿ. ನಿಮ್ಮ ಕಾಲಮೇಲೆ ನೀವು ನಿಲ್ಲಿ. ಸಂಪೂರ್ಣ ಜವಾಬ್ದಾರಿಯನ್ನು ನಿಮ್ಮ ತಲೆಯಮೇಲೆ ಹೊತ್ತುಕೊಳ್ಳಿ.

ನಿಮ್ಮನ್ನು ನಿಂದಿಸುವ ಜನರನ್ನು ಆಶೀರ್ವದಿಸಿ. ನಿಮ್ಮಲ್ಲಿರುವ ದುರಹಂಕಾರವನ್ನು ಹತ್ತಿಕ್ಕಲು ಅವರು ಎಷ್ತೊಂದು ಸಹಾಯ ಮಾದುತ್ತಿದ್ದಾರೆ ಎಂಬುದನ್ನು ಯೋಚಿಸಿ.

ನಿಮಗಾಗಿ ಏನನ್ನೂ ಬಯಸಬೇಡಿ. ಎಲ್ಲವನ್ನೂ ಇತರರಿಗಾಗಿ ಮಾಡಿ. ಭಗವಂತನಲ್ಲೇ ಇರುವುದು, ಅವನಲ್ಲೇ ಬಾಳುವುದು, ಚಲಿಸುವುದು ಎಂದರೆ ಇದೇ.

ಯಾರಲ್ಲಿ ತನ್ನಲ್ಲಿ ತನಗೆ ನಂಬಿಕೆಯಿಲ್ಲವೋ ಅವನು ನಾಸ್ತಿಕ. ಹಳೆಯ ಧರ್ಮಗಳು ಹೆಳಿದವು, ದೇವರನ್ನು ನಂಬದವನು ನಾಸ್ತಿಕ ಎಂದು. ಹೊಸಧರ್ಮವು ಹೇಳುತ್ತದೆ, ಯಾರಿಗೆ ತನ್ನಲ್ಲಿ ನಂಬಿಕೆಯಿಲ್ಲವೊ ಅವನು ನಾಸ್ತಿಕ ಎಂದು.

ಈ ಜಗತ್ತಿನ ಇತಿಹಾಸ ಅತ್ಮಶ್ರದ್ಧೆಯನ್ನು ಹೊಂದಿದ್ದ ಕೆಲವೇ ವ್ಯಕ್ತಿಗಳ ಇತಿಹಾಸ. ಆ ಶ್ರದ್ಧೆ ಅಂತರಂಗದ ದಿವ್ಯತೆಯನ್ನು ಬಡಿದೆಬ್ಬಿಸುತ್ತದೆ. ಆಗ ನೀವೇನನ್ನು ಬೇಕಾದರೂ ಸಾಧಿಸಬಲ್ಲಿರಿ.

ನಿಮ್ಮ ನಂಬಿಕೆಯಂತೆ ನೀವಾಗುವಿರಿ. ನಿಮ್ಮನ್ನು ನೀವು ಋಷಿಗಳೆಂದು ನಂಬಿದರೆ ನೀವು ನಾಳೆ ಋಷಿಗಳೇ ಆಗುತ್ತೀರಿ.ಪ್ರತಿಯೊಬ್ಬನಲ್ಲೂ ಪೂರ್ಣ ಋಷಿತ್ವ ವನ್ನು ಪಡೆಯುವ ಸಾಮರ್ಥ್ಯ ಅಂತರ್ಹಿತವಾಗಿದ್ದೆ.
ಶೈಶವಾವಸ್ಥೆಯಿಂದಲೇ ಮಕ್ಕಳು ಶಕ್ತಿ ಶಾಲಿಗಳಾಗುವಂತೆ ಮಾಡಿ. ಅವರಿಗೆ ದುರ್ಬಲತೆಯನ್ನಾಗಲಿ, ಮೂಢಾಚರಣೆಗಳನ್ನಾಗಲಿ ಬೋಧಿಸಬೇಡಿ. ಆವರನ್ನು ಶಕ್ತಿವಂತರನ್ನಾಗಿ ಮಾಡಿ.ಶಕ್ತಿಶಾಲಿಗಳಾಗಿ, ಶ್ರದ್ಧಾವಂತರಾಗಿ. ಆಗ ಎಲ್ಲವೂ ನಿಶ್ಚಿತವಾಗಿ ಸಾಧಿಸಲ್ಪಡುತ್ತದೆ.

ಶಕ್ತಿಎಲ್ಲ ನಿಮ್ಮೊಳಗೇ ಇದೆ ; ನೀವೂ ಏನು ಬೇಕಾದರು ಮಾಡಬಲ್ಲಿರಿ, ಎಲ್ಲವನ್ನೂ ಮಾಡಬಲ್ಲಿರಿ.ನೀವು ಯಶಸ್ಸನ್ನು ಪಡೆಯಲು ದೃಢಪ್ರತ್ನಿಸಬೇಕು. ಆಪಾರ ಇಚ್ಛಾಶಕ್ತಿಬೇಕು. 'ನಾನು ಸಮುದ್ರವನ್ನೇ ಪಾನಮಾಡುತ್ತೇನೆ,' ಎಂದು ಪ್ರಯತ್ನಶೀಲನು ಹೇಳುತ್ತಾನೆ. 'ನನ್ನ ಸಂಕಲ್ಪದ ಮುಂದೆ ಪರ್ವತಗಳೇ ಪುಡಿಪುಡಿ ಯಾಗುತ್ತವೆ' ಎನ್ನುತ್ತಾವವನು. ಇಂತಹ ಶಕ್ತಿಯನ್ನೂ ಛಾತಿಯನ್ನೂ ಪಡೆಯಿರಿ; ಕಷ್ಟಪಟ್ಟು ದುಡಿಯಿರಿ, ನೀವು ಗುರಿ ಸೇರುವುದು ನಿಶ್ಚಯ.

ಉನ್ನತ ಆಲೋಚನೆಗಳಿಂದ, ಅತ್ಯುನ್ನತ ಆದರ್ಶಗಳಿಂದ ನಿಮ್ಮ ಮೆದುಳನ್ನು ತುಂಬಿ; ಅವುಗಳನ್ನು ಹಗಲಿರುಳೂ ನಿಮ್ಮ ಮುಂದಿರಿಸಿಕೊಳ್ಳಿ. ಇದರಿಂದ ಮಹತ್ಕಾರ್ಯ ಉದ್ಭವಿಸುತ್ತದೆ.

ನಿಮ್ಮ ಪಾಲಿಗೆ ಬಂದ ಕರ್ತವ್ಯ ವನ್ನು ಮಾಡಿ ನೀವು ಶುದ್ಧ ಚಾರಿತ್ರ್ಯವನ್ನು ರೂಢಿಸಿಕೊಳ್ಳಬೇಕು. ಕರ್ತವ್ಯವನ್ನು ಮಾಡಿದರೆ ಕರ್ತವ್ಯ ಭಾರದಿಂದ ಪಾರಾಗುತ್ತೇವೆ.

ಮೊದಲು ಚಾರಿತ್ರ್ಯವನ್ನು ಬೆಳಗಿಸಿ. ನೀವು ಮಾದಬೆಕಾಗಿರುವ ಅತ್ಯುನ್ನತ ಕರ್ತವ್ಯ ಇದು.

ಶಕ್ತಿಯಿರುವುದು ಸಾಧುಸ್ವಭಾವದಲ್ಲಿ. ಚಾರಿತ್ರ್ಯ ಶುದ್ಧಿಯಲ್ಲಿ.

ಶುದ್ಧಚಾರಿತ್ರ್ಯವೊಂದೇ ಕಷ್ಟ ಪರಂಪರೆಗಳ ಅಭೇದ್ಯ ಕೋಟೆಯನ್ನು ಸೀಳಿಕೊಂಡು ಹೋಗಬಲ್ಲದು.

ಸತ್ಯ ನಿಷ್ಠೆ, ಪವಿತ್ರತೆ, ಮತ್ತು ನಿಸ್ವಾರ್ಥತೆ ಈ ಮೂರು ಯಾರಲ್ಲಿರುತ್ತದೆಯೋ ಅವರನ್ನು ಈ ಜಗತ್ತಿನ ಯಾವ ಶಕ್ತಿಯೂ ನಿಗ್ರಹಿಸಲಾರದು. ಇವುಗಳಿಂದ ಸಂಪನ್ನನಾದವನು ಇಡೀ ಜಗತ್ತಿನ ವಿರೋಧವನ್ನೇ ಎದುರಿಸಬಲ್ಲ.
ಮನಸ್ಸನ್ನು ಶಕ್ತಿಯುತವೂ, ಶಿಸ್ತುಬದ್ಧವೂ ಆಗಿಸುವುದರಲ್ಲಿಯೇ ಜ್ಞಾನದ ಮೌಲ್ಯವಿರುವುದು.

ಪರಿಸ್ಥಿತಿಯನ್ನು ಉತ್ತಮ ಪಡಿಸಲಾಗುವುದಿಲ್ಲ. ಆದರೆ ಅವುಗಳನ್ನು ಬದಲಾಯಿಸುವುದರಿಂದ ನಾವು ಉತ್ತಮರಾಗುತ್ತೇವೆ.

ಪ್ರತಿಯೊಬ್ಬ ವ್ಯಕ್ತಿಯೂ, ಪ್ರತಿಯೊಂದು ರಾಶ್ಟ್ರವೂ ಶ್ರೇಷ್ಟತೆಯನ್ನು ಪಡೆಯಲು ೩ ಸಂಗತಿಗಳು ಅವಶ್ಯಕ.

೧. ಒಳತಿನ ಶಕ್ತಿಯಲ್ಲಿ ದೃಢನಂಬಿಕೆ.
೨.. ಮಾತ್ಸರ್ಯ ಮತ್ತು ಅಪನಿಅಂಬಿಕೆಗಳಿಲ್ಲದಿರುವಿಕೆ.
೩. ಒಳ್ಳೆಯವರಾಗಲು, ಒಳಿತನ್ನು ಮಾದಲು ಪ್ರಯತ್ನಿಸುತ್ತಿರುವವರಿಗೆ ಸಹಾಯ ಮಾಡುವಿಕೆ.

ನಮಗೆ ನಾವೇ ಕೆಡಕನ್ನು ಉಂಟುಮಾಡಿಕೊಳ್ಳದಿದ್ದರೆ, ಜಗತ್ತಿನ ಯಾವಶಕ್ತಿಯೂ ನಮಗೆ ಕೆಡಕನ್ನುಂಟುಮಾಡಲಾರದು ಎಂಬುವುದು ನಿಶ್ಚಯವು.

ಯಾರ ಸಹಾಯಕ್ಕೂ ಕಾದು ಕುಳಿತುಕೊಳ್ಳಬೇಡಿ. ಎಲ್ಲ ಮಾನವ ಸಹಾಯಕ್ಕಿಂತಲೂ ಭಗವಂತನು ಅನಂತಪಾಲು ಮೇಲಲ್ಲವೇ ಯಾವುದನ್ನೂ ಬಯಸಬೇಡಿ. ನಮ್ಮನ್ನು ದುಖಃಕ್ಕೊಳಪಡಿಸುವ ಎಲ್ಲಾ ಕಷ್ಟಗಳಿಗೂ ಆಸೆಯೇ ಕರಣ.

ಇತರರ ಯೋಜನೆಗಳಮೇಲೆ ತಣ್ಣೀರೆರಚಬೇಡಿ. ನಿಂದೆಯನ್ನು ಸಂಪೂರ್ಣವಗಿ ಪರಿತ್ಯಜಿಸಿ.ಇತರಿಗೆ ತಿಳಿಯದಂತೆ ಅವರನ್ನು ನಿಂದಿಸುವುದು ಮಹಾಪರಾಧಎಂಬುದನ್ನು ತಿಳಿಯಿರಿ. ಇದನ್ನು ನೀವು ಸಂಪೂರ್ಣವಾಗಿ ತ್ಯಜಿಸಬೇಕು.

ಸಾಧ್ಯವಾದರೆ ಸಹಾಯಮಾಡಿ. ಇಲ್ಲದಿದ್ದರೆ ಕೈಕಟ್ಟಿಕೊಂಡು ಸುಮ್ಮನೆ ನಡೆಯುವುದನ್ನು ನೋಡುತ್ತಿರಿ. ನಿಮಗೆ  ಸಹಾಯಮಾಡಲಾಗದಿದ್ದರೆ ನೋಯಿಸಲು ಪ್ರಯತ್ನಿಸದಿರಿ.

ನಿಮ್ಮ ದ್ವೇಷ ಮತ್ತು ಅಸೂಯೆಗಳನ್ನು ಹೊರಸೂಸಿದರೆ ಅವುಗಖು ಚಕ್ರಬಡ್ಡಿಸಮೆತ ನಿಮಗೇ ಹಿಂದಿರುಗುತ್ತವೆ. ಯಾವ ಶಕ್ತಿಯೂ ಅದನ್ನು ತಡೆಯಲಾರದು. ಒಮ್ಮೆ  ನೀವು ಅವುಗಳನ್ನು ಚಲಿಸುವಂತೆ ಮಡಿದರೆ ಅದರ ದುಷ್ಪರಿಣಮವನ್ನು ನೀವು ಅನುಭವಿಸಲೇಬೇಕು. ನೀವು ಅದಲ್ಲಿ ನೆನೆಪಿನಲ್ಲಿಟ್ಟಿದ್ದರೆ ದುಷ್ಕಾರ್ಯಗಳಿಂದ ಪಾರಾಗಬಹುದು.ಹಿಂದಿರುಗಿನೋಡಬೇಡಿ.

ವಾಗಲೂ ಮುನ್ನಡೆಯಿರಿ. ಅನಂತ ಶಕ್ತಿ, ಅನಂತ ಉತ್ಸಾಹ, ಅನಂತ ಸಾಹಸ ಮತ್ತು ಅನಂತತಾಳ್ಮೆ ಇವುಗಳಿದ್ದರೆ ಮಾಹತ್ಕಾರ್ಯಗಳನ್ನು ಸಾಧಿದಲು ಸಾಧ್ಯ.

ನಿಮ್ಮೊಳಗಿರುವುದನ್ನು ಪ್ರಯತ್ನಪೂರ್ವಕವಗಿ ಹೊರಹೊಮ್ಮಿಸಿ. ಆದರೆ ಅನುಕರಿಸಬೇಡಿ. ಇತರರರಿಂದ ಒಳ್ಳೆಯದೆಲ್ಲವನ್ನು ಸ್ವೀಕರಿಸಿ.

ಜೀವಿಯು ತನ್ನ ಬಂಧನಗಳನ್ನು ಗುರುತಿಸಿ, ಜಾಗೃತವಾಗಿ, ತನ್ನ ಸ್ವರೂಪವನ್ನು ವ್ಯಕ್ತಪಡಿಸುವ ಪ್ರಯತ್ನವೇ ಜೀವನ.
ಸ್ವಾಮಿ ವಿವೇಕಾನಂದರನ್ನು ಕುರಿತಂತೆ ಗಣ್ಯರು :

ಸ್ವಾಮೀಜಿಯವರ ತಪಃಪೂರ್ಣವಾದಶಕ್ತಿವಣಿ ಒಂದು ಅಮೃತದ ಮಡು. ಇದರಲ್ಲಿ ಮಿಮ್ದರೆ ಪುನೀತರಗುತ್ತೇವೆ. ಇದು -ಜ್ಯಾತಿಯ ಖನಿ. ಹೊಕ್ಕರೆ ಪ್ರಬುದ್ಧರಾಗುತ್ತೇವೆ-ಕುವೆಂಪು.

- ನಾನು ಸ್ವಾಮೀಜಿಯವರ ಕೃತಿಗಳನ್ನು ಅಮೂಲಗ್ರವಾಗಿ ಓದಿದ್ದೇನೆ. ಅವುಗಳ ಅಧ್ಯಯನದನಂತರ ಭಾರತದ ಬಗ್ಗೆ ಇದ್ದ ನನ್ನ ಪ್ರೀತಿ, ಸಾವಿರಪಾಲು ಹೆಚ್ಚಿತು. ಮಹಾತ್ಮ ಗಾಂಧಿ.

-ನೀವು ಭಾರತವನ್ನು ಅರಿಯಬೇಕೆಂದಿದ್ದರೆ, ಸ್ವಾಮಿ ವಿವೇಕಾನಂದರನ್ನು ಅಧ್ಯಯನ ಮಾಡಿ. ಅವರಲ್ಲಿ ಎಲ್ಲವೂ ರಚನಾತ್ಮಕವಾದುದು. ನೇತ್ಯಾತ್ಮಕವಾದದ್ದು ಯಾವುದೂ ಇಲ್ಲ.- ರವೀಂದ್ರನಾಥ ಠಾಕೂರ್.

-ಗತಕಾಲದಲ್ಲಿ ನೆಲೆನಿಂತು ಭಾರತೀಯ ಪರಂಪರೆಯ ಬಗ್ಗೆ ಅತ್ಯಂತ ಹೆಮ್ಮೆ ಇದ್ದವರು ಸ್ವಮಿ ವಿವೇಕಾನಂದರು....ಅವರು ನಮ್ಮಲ್ಲಿ ನಮ್ಮ ಪರಂಪರೆಯಬಗ್ಗೆ ಸ್ವಾಭಿಮಾನವನ್ನು ಕೆರಳಿಸಿದವರು.-ಜವಹರ್ಲಾಲ್ ನೆಹರು.

ಸ್ವಾಮೀಜಿಯವರ ನುಡಿಗಳಿಂದ ನಮ್ಮ ದೇಶದ ಜನ ಹಿಂದೆಂದೂ ಕಾಣದ ಆತ್ಮಗೌರವವನ್ನು, ಆತ್ಮ ವಿಶ್ವಾಸವನ್ನುಹಾಗೂ ಆತ್ಮಬಲವನ್ನೂ ಪಡ್ಡೆದಿದ್ದಾರೆ.- ಸುಭಾಶ್ ಚಂದ್ರ ಬೋಸ್.ಅವರ ಮತು ಒಂದು ಅಮೊಘಸಂಗೀತದಂತೆ. ಮೂವತ್ತು ವರ್ಷಗಳ ನಂತರವೂ ಅವರ ಈ ಹೇಳಿಕೆಗಳು ವಿದ್ಯುತ್ ಪ್ರವಾಹದಂತೆ ನನ್ನಲ್ಲಿ ಮೈನವಿರೇಳಿಸುತ್ತದೆ.- ರೋಮಾ ರೋಲಾ

ಸ್ವಾಮಿ ವಿವೇಕಾನಂದರು ಹಿಂದೂ ಧರ್ಮವನ್ನು ರಕ್ಷಿಸಿದರು. ಭಾರತವನ್ನು ರಕ್ಷಿಸಿದರು. ಅವರು ಬರದೆ ಇದ್ದಿದ್ದರೆ ನಾವು ನಮ್ಮ ಧರ್ಮವನ್ನು ಕಳೆದುಕೊಳ್ಳುತ್ತಿದ್ದೆವು. ಅಲ್ಲದೆ ನಮಗೆ ಸ್ವಾತಂತ್ರ್ಯವೂ ದೊರಕುತ್ತಿರಲಿಲ್ಲ- ಸಿ. ರಾಜಗೋಪಾಲಾಚಾರಿ.

ವಿವೇಕಾನಂದರು ನಮಗೆ ತಿಳಿದಿರುವ ಅಪಾರ ಶಕ್ತಿಯ ಏಕೈಕ ವ್ಯಕ್ತಿ ಪುರುಷರಲ್ಲಿ ಪುರುಷಸಿಂಹ. ಇಂದಿಗೂ ಅವರ ಅದಮ್ಯ ಕಾರ್ಯಶೀಲತೆ ಚಾಲನೆಯಲ್ಲಿರುವುದನ್ನು ಗುರುತಿಸಬಹುದು.

ಸ್ವಾಮಿ ವಿವೇಕಾನಂದರು ತಮ್ಮಶಕ್ತಿಯುತ ವ್ಯಕ್ತಿತ್ವದ ಮೂಲಕ, ಪ್ರಭಾವಪೂರ್ಣ ವಾಗ್ಮಿತ್ವದ ಮೂಲಕ, ರಾಷ್ಟ್ರಚೇತನವನು ಜಾಗೃತಗೊಳಿಸಿ, ಯುವಕರಲ್ಲಿ ನವೋತ್ಸಾಹವನ್ನು ಕೆರಳಿಸಿ, ಅವರಲ್ಲಿ ನಮ್ಮ ಸಂಸ್ಕೃತಿಯ ಅಗ್ಗೆ ಹೆಮ್ಮೆಯನ್ನು ಕುದುರಿಸಿ, ಸ್ವಾತಂತ್ರ್ಯನವಭಾರತ ನಿರ್ಮಣಕ್ಕೆ ಬುನಾದಿಯನ್ನು ಹಾಕಿದರು. ಸ್ವಾಮೀಜಿಯವರ ಕೃತಿಗಳನ್ನು ಓದಿದಾಗ ಇಂದಿಗೂ ಅವರ ಶಕ್ತಿಪ್ರಭಾವಗಳ ಸಂಚಾರ ನಮ್ಮಲ್ಲುಂಟಾಗುಗುತ್ತದೆ. ಅಪಾರ ಜ್ಞಾನ ಸಂಪತ್ತಿನಿಂದ ಕೂಡಿದ ಅವರ ಚಿಂತನೆಗಳು ಪ್ರಜ್ವಲಿಸುತ್ತಿರುವ ಭಾವಾಗ್ನಿಕುಂಡದಿಂದ ಸಿಡಿದುಬಂದ ಚಿಂತನೆಗಳು ಕಿಡಿಗಳಂತಿವೆ. ಅಂತಹ ಕೆಲವು ಕಿಡಿಗಳ ಕಿರು ಸಂಕಲನವೇ ವಿದ್ಯುತ್ ವಾಣಿ.

ಸ್ಮಾಮೀಜಿಯವರ ಅಮೂಲ್ಯ ಕೃತಿಗಳಿಗಾಗಿ ಹಾಗೂ ಇರರ ಅಧ್ಯತ್ಮಿಕ ಗ್ರಂಥಗಳಿಗಾಗಿ ನಮ್ಮ ಪ್ರಕಟನಾ ವಿಭಾಗವನ್ನು ಸಂಪರ್ಕಿಸಿ. ಶ್ರೀ. ರಾಮಕೃಷ್ಣ ಆಶ್ರಮ, ಮೈಸೂರು-೫೭೦ ೦೨೦. ೦.೫೦ ಪೈಸೆ. ವಿದ್ಯುತ್ ವಾಣಿ- ಸ್ವಾಮಿ ವಿವೇಕಾನಂದ.
ಸ್ವದೇಶಮಂತ್ರ.

ಆರ್ಯಮಾತೆಯ ಅಮೃತಪುತ್ರರಿರಾ ಮರೆಯದಿರಿ, ನಿಮ್ಮ ಸ್ತ್ರೀಯರ ಆದರ್ಶ ಸೀತಾ, ಸಾವಿತ್ರಿ, ದಮಯಂತಿಯರು. ಮರೆಯದಿರಿ, ನೀವು ಪೂಜಿಸುವ ಜಗದೀಶ್ವರನು ತ್ಯಾಗಿಕುಲ ಚೂಡಾಮಣಿ, ಉಮಾವಲ್ಲಭಶಂಕರ. ಮರೆಯದಿರಿ, ನಿಮ್ಮ ವಿವಾಹ, ನಿಮ್ಮ ಐಶ್ವರ್ಯ ನಿಮ್ಮ ಜೀವನ ಬರಿಯ ಇಂದ್ರಿಯ ಭೋಗಕ್ಕಲ್ಲ. ವ್ಯಕ್ತಿಗತ ಸುಖಕ್ಕೆ ಅಲ್ಲ. ಮರೆಯದಿರಿ, ನಿಮ್ಮ ಜನ್ಮವಿರುವುದೇ ಜಗನ್ಮಾತೆಯ ಅಡಿದಾವರೆಯಲ್ಲಿ ಬಲಿದಾನಕ್ಕಾಗಿ ! ಮರೆಯದಿರಿ, ನಿಮ್ಮ ಸಾಮಾಜಿಕ ರಚನೆ ಅನಂತ ವಿಶ್ವಯ್ಯಾಪಿ ಜಗಜ್ಜನನಿಯ ಕಾಂತಿಯನ್ನು ಪ್ರತಿಬಿಂಬಿಸುವುದಕ್ಕಾಗಿ ಇರುವುದು. ಮರೆಯದಿರಿ. ಅಂತ್ಯಜರು, ಮೂಢರು, ದರಿದ್ರರು, ನಿರಕ್ಷರಕುಕ್ಷಿಗಳು, ಚಂಡಾಲರು ಮತ್ತು ಚಮ್ಮಾರರು ಎಲ್ಲರೂ ನಿಮ್ಮರಕ್ತಬಂಧುಗಳಾದ ಸಹೋದರರು !ವೀರಾತ್ಮರೇ, ಧೀರರಾಗಿ, ನೆಚ್ಚುಗೆಡದಿರಿ. ಭಾರತೀಯರು ನಾವು ಎಂದು ಹೆಮ್ಮೆತಾಳಿ. ಸಾರಿಹೇಳಿ, ಭಾರತೀಯರು ನಾವು, ಭಾರತೀಯರೆಲ್ಲ ನಮ್ಮಸಹೋದರರು. ಸಾರಿ ಹೇಳಿ, ಮೂರ್ಖ ಭಾರತೀಯರೆಮ್ಮ ಸಹೋದರರು, ಬ್ರಾಹ್ಮಣಭಾರತೀಯರೆಲ್ಲ ನಮ್ಮ ಸಹೋದರರು, ಪಂಚಮ ಭಾರತೀಯರೆಲ್ಲ ನಮ್ಮ ಸಹೋದರರು. ನೀವು ಒಂದು ಚಿಂದಿಯನ್ನುಟ್ಟು ಸೊಂಟಕ್ಕೆ ಕಟ್ಟಿಕೊಂಡಿದ್ದರೂ ಕೂಡ, ಅಭಿಮಾನಪೂರ್ವಕವಾಗಿ ದಿಕ್ ತಟಗಳು ಅಣುರಣಿತವಾಗುವಂತೆ ತಾರಕಸ್ವರದಿಂದ ಸಾರಿ ಹೆಳಿ " ಭಾರತೀಯರು ನಮ್ಮ ಸಹೋದರರು, ಭಾರತೀಯರು ನಮ್ಮ ಪ್ರಾಣ. ಭಾರತೀಯ ದೇವದೇವತೆಗಳೆಲ್ಲರು ನಮ್ಮದೇವರು. ಭಾರತೀಯ ಸಮಾಜ ನಮ್ಮ ಬಾಲ್ಯದ ತೊಟ್ಟಿಲು, ತಾರುಣ್ಯದ ನಂದನವನ, ವೃದ್ಧಾಪ್ಯದ ವಾರಣಾಸಿ." ಸಹೋದರರೆ ಹೀಗೆ ಸಾರಿ :" ಭಾರತಭೂಮಿಯೆ ನಮ್ಮ ಪರಂಧಾಮ. ಭಾರತದ ಶುಭವೆ ನಮ್ಮ ಶುಭ. "ಹಗಲೂ ರಾತ್ರಿಯೂ ಇದು ನಿಮ್ಮ ಪ್ರರ್ಥನೆಯಾಗಲಿ, " ಹೇ ಗೌರಿನಾಥ, ಹೇ ಜಗನ್ಮಾತೆ, ಪೌರುಷವನ್ನು ಎಮೆಗೆ ದಯಪಾಲಿಸು. ಹೇ ಸರ್ವಶಕ್ತಿಶಾಲಿನೀ, ನಮ್ಮ ದೌರ್ಬಲ್ಯವನ್ನು ದಹಿಸು. ಕ್ಲೈಬ್ಯವನ್ನು ಹೋಗಲಾಡಿಸು. ನಮ್ಮ ಷಂಡತನವನ್ನು ತೊಲಗಿಸು ; ಪುರುಷಸಿಂಹರನ್ನಾಗಿ ಮಾಡು."

ಉತ್ತಿಷ್ಠತ ಜಾಗ್ರತ, ಪ್ರಾಪ್ಯ ವರಾನ್ನಿಬೋಧತ.

ನನ್ನ ಕೆಲವು ಆದರ್ಶಗಳನ್ನು ಕೆಲವೇ ಪದಗಳಲ್ಲಿ ವಿವರಿಸಬಹುದು ; ಮಾನವ ಜನಂಗಕ್ಕೆ ಅದರ ದೈವಿಕತೆಯನ್ನೂ ಅದರ ಜೀವನದ ಪ್ರತಿಯೊಂದು ಚನವಲನದಲ್ಲೂ ಹೇಗೆ ಅದನ್ನು ವ್ಯಕ್ತಗೊಳಿಸುವುದು ಎಂಬುದನ್ನು ಬೋಧಿಸುವುದು.
ನನ್ನ ಧೀರ ಪುತ್ರರೆ, ನೀವೆಲ್ಲರೂ ಮಹತ್ಕಾರ್ಯವನ್ನು ಸಾಧಿಸುವುದಕ್ಕೆ ಹುಟ್ಟಿರುವಿರಿರೆಂದು ನಂಬಿ. ನಾಯಿಮರಿಗಳ ಬೊಗಳುವಿಕೆಯಿಂದ ಅಪ್ರತಿಭರಾಗಬೇಡಿ. ಸಿಡಿಲ ಗರ್ಜನೆಯೂ ನಿಮ್ಮನ್ನಂಜಿಸದಿರಲಿ. ಎದ್ದು ನಿಂತು ಕಾರ್ಯೋನ್ಮುಖರಾಗಿ.
ಎದ್ದೇಳಿ, ಕಾರ್ಯೋನ್ಮುಖರಾಗಿ. ಈ ಜೀವನವಾದರೂ ಎಷ್ಟುಕಾಲ ? ನೀವು ಈ ಜಗತ್ತಿಗೆ ಬಂದಮೇಲೆ ಏನಾದರೂ ಗುರುತನ್ನು ಬಿಟ್ಟು ಹೋಗಿ. ಅದಿಲ್ಲದಿದ್ದರೆ ನಿಮಗೂ ಆಮರಕಲ್ಲುಗಳಿಗೂ ಏನು ವ್ಯತ್ಯಾಸ ? ಅವೂ ಅಸ್ತಿತ್ವಕ್ಕೆ ಬರುತ್ತವೆ, ನಶಿಸಿ ನಿರ್ನಾಮವಾಗುತ್ತವೆ.

ನಮ್ಮ ದುಖಃಗಳಿಗೆಲ್ಲ ನಾವೇ ಜವಾಬ್ದಾರರು, ಮತ್ತಾರೂ ಅಲ್ಲ, ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ನಾವೇ.ನಿಮ್ಮ ತಪ್ಪಿಗಾಗಿ ಇತರರನ್ನು ದೂಷಿಸಬೇಡಿ. ನಿಮ್ಮ ಕಾಲಮೇಲೆ ನೀವು ನಿಲ್ಲಿ. ಸಂಪೂರ್ಣ ಜವಾಬ್ದಾರಿಯನ್ನು ನಿಮ್ಮ ತಲೆಯಮೇಲೆ ಹೊತ್ತುಕೊಳ್ಳಿ.

ನಿಮ್ಮನ್ನು ನಿಂದಿಸುವ ಜನರನ್ನು ಆಶೀರ್ವದಿಸಿ. ನಿಮ್ಮಲ್ಲಿರುವ ದುರಹಂಕಾರವನ್ನು ಹತ್ತಿಕ್ಕಲು ಅವರು ಎಷ್ತೊಂದು ಸಹಾಯ ಮಾದುತ್ತಿದ್ದಾರೆ ಎಂಬುದನ್ನು ಯೋಚಿಸಿ.

ನಿಮಗಾಗಿ ಏನನ್ನೂ ಬಯಸಬೇಡಿ. ಎಲ್ಲವನ್ನೂ ಇತರರಿಗಾಗಿ ಮಾಡಿ. ಭಗವಂತನಲ್ಲೇ ಇರುವುದು, ಅವನಲ್ಲೇ ಬಾಳುವುದು, ಚಲಿಸುವುದು ಎಂದರೆ ಇದೇ.

ಯಾರಲ್ಲಿ ತನ್ನಲ್ಲಿ ತನಗೆ ನಂಬಿಕೆಯಿಲ್ಲವೋ ಅವನು ನಾಸ್ತಿಕ. ಹಳೆಯ ಧರ್ಮಗಳು ಹೆಳಿದವು, ದೇವರನ್ನು ನಂಬದವನು ನಾಸ್ತಿಕ ಎಂದು. ಹೊಸಧರ್ಮವು ಹೇಳುತ್ತದೆ, ಯಾರಿಗೆ ತನ್ನಲ್ಲಿ ನಂಬಿಕೆಯಿಲ್ಲವೊ ಅವನು ನಾಸ್ತಿಕ ಎಂದು.

ಈ ಜಗತ್ತಿನ ಇತಿಹಾಸ ಅತ್ಮಶ್ರದ್ಧೆಯನ್ನು ಹೊಂದಿದ್ದ ಕೆಲವೇ ವ್ಯಕ್ತಿಗಳ ಇತಿಹಾಸ. ಆ ಶ್ರದ್ಧೆ ಅಂತರಂಗದ ದಿವ್ಯತೆಯನ್ನು ಬಡಿದೆಬ್ಬಿಸುತ್ತದೆ. ಆಗ ನೀವೇನನ್ನು ಬೇಕಾದರೂ ಸಾಧಿಸಬಲ್ಲಿರಿ.

ನಿಮ್ಮ ನಂಬಿಕೆಯಂತೆ ನೀವಾಗುವಿರಿ. ನಿಮ್ಮನ್ನು ನೀವು ಋಷಿಗಳೆಂದು ನಂಬಿದರೆ ನೀವು ನಾಳೆ ಋಷಿಗಳೇ ಆಗುತ್ತೀರಿ.ಪ್ರತಿಯೊಬ್ಬನಲ್ಲೂ ಪೂರ್ಣ ಋಷಿತ್ವ ವನ್ನು ಪಡೆಯುವ ಸಾಮರ್ಥ್ಯ ಅಂತರ್ಹಿತವಾಗಿದ್ದೆ.
ಶೈಶವಾವಸ್ಥೆಯಿಂದಲೇ ಮಕ್ಕಳು ಶಕ್ತಿ ಶಾಲಿಗಳಾಗುವಂತೆ ಮಾಡಿ. ಅವರಿಗೆ ದುರ್ಬಲತೆಯನ್ನಾಗಲಿ, ಮೂಢಾಚರಣೆಗಳನ್ನಾಗಲಿ ಬೋಧಿಸಬೇಡಿ. ಆವರನ್ನು ಶಕ್ತಿವಂತರನ್ನಾಗಿ ಮಾಡಿ.ಶಕ್ತಿಶಾಲಿಗಳಾಗಿ, ಶ್ರದ್ಧಾವಂತರಾಗಿ. ಆಗ ಎಲ್ಲವೂ ನಿಶ್ಚಿತವಾಗಿ ಸಾಧಿಸಲ್ಪಡುತ್ತದೆ.

ಶಕ್ತಿಎಲ್ಲ ನಿಮ್ಮೊಳಗೇ ಇದೆ ; ನೀವೂ ಏನು ಬೇಕಾದರು ಮಾಡಬಲ್ಲಿರಿ, ಎಲ್ಲವನ್ನೂ ಮಾಡಬಲ್ಲಿರಿ.ನೀವು ಯಶಸ್ಸನ್ನು ಪಡೆಯಲು ದೃಢಪ್ರತ್ನಿಸಬೇಕು. ಆಪಾರ ಇಚ್ಛಾಶಕ್ತಿಬೇಕು. 'ನಾನು ಸಮುದ್ರವನ್ನೇ ಪಾನಮಾಡುತ್ತೇನೆ,' ಎಂದು ಪ್ರಯತ್ನಶೀಲನು ಹೇಳುತ್ತಾನೆ. 'ನನ್ನ ಸಂಕಲ್ಪದ ಮುಂದೆ ಪರ್ವತಗಳೇ ಪುಡಿಪುಡಿ ಯಾಗುತ್ತವೆ' ಎನ್ನುತ್ತಾವವನು. ಇಂತಹ ಶಕ್ತಿಯನ್ನೂ ಛಾತಿಯನ್ನೂ ಪಡೆಯಿರಿ; ಕಷ್ಟಪಟ್ಟು ದುಡಿಯಿರಿ, ನೀವು ಗುರಿ ಸೇರುವುದು ನಿಶ್ಚಯ.

ಉನ್ನತ ಆಲೋಚನೆಗಳಿಂದ, ಅತ್ಯುನ್ನತ ಆದರ್ಶಗಳಿಂದ ನಿಮ್ಮ ಮೆದುಳನ್ನು ತುಂಬಿ; ಅವುಗಳನ್ನು ಹಗಲಿರುಳೂ ನಿಮ್ಮ ಮುಂದಿರಿಸಿಕೊಳ್ಳಿ. ಇದರಿಂದ ಮಹತ್ಕಾರ್ಯ ಉದ್ಭವಿಸುತ್ತದೆ.

ನಿಮ್ಮ ಪಾಲಿಗೆ ಬಂದ ಕರ್ತವ್ಯ ವನ್ನು ಮಾಡಿ ನೀವು ಶುದ್ಧ ಚಾರಿತ್ರ್ಯವನ್ನು ರೂಢಿಸಿಕೊಳ್ಳಬೇಕು. ಕರ್ತವ್ಯವನ್ನು ಮಾಡಿದರೆ ಕರ್ತವ್ಯ ಭಾರದಿಂದ ಪಾರಾಗುತ್ತೇವೆ.

ಮೊದಲು ಚಾರಿತ್ರ್ಯವನ್ನು ಬೆಳಗಿಸಿ. ನೀವು ಮಾದಬೆಕಾಗಿರುವ ಅತ್ಯುನ್ನತ ಕರ್ತವ್ಯ ಇದು.

ಶಕ್ತಿಯಿರುವುದು ಸಾಧುಸ್ವಭಾವದಲ್ಲಿ. ಚಾರಿತ್ರ್ಯ ಶುದ್ಧಿಯಲ್ಲಿ.

ಶುದ್ಧಚಾರಿತ್ರ್ಯವೊಂದೇ ಕಷ್ಟ ಪರಂಪರೆಗಳ ಅಭೇದ್ಯ ಕೋಟೆಯನ್ನು ಸೀಳಿಕೊಂಡು ಹೋಗಬಲ್ಲದು.

ಸತ್ಯ ನಿಷ್ಠೆ, ಪವಿತ್ರತೆ, ಮತ್ತು ನಿಸ್ವಾರ್ಥತೆ ಈ ಮೂರು ಯಾರಲ್ಲಿರುತ್ತದೆಯೋ ಅವರನ್ನು ಈ ಜಗತ್ತಿನ ಯಾವ ಶಕ್ತಿಯೂ ನಿಗ್ರಹಿಸಲಾರದು. ಇವುಗಳಿಂದ ಸಂಪನ್ನನಾದವನು ಇಡೀ ಜಗತ್ತಿನ ವಿರೋಧವನ್ನೇ ಎದುರಿಸಬಲ್ಲ.
ಮನಸ್ಸನ್ನು ಶಕ್ತಿಯುತವೂ, ಶಿಸ್ತುಬದ್ಧವೂ ಆಗಿಸುವುದರಲ್ಲಿಯೇ ಜ್ಞಾನದ ಮೌಲ್ಯವಿರುವುದು.

ಪರಿಸ್ಥಿತಿಯನ್ನು ಉತ್ತಮ ಪಡಿಸಲಾಗುವುದಿಲ್ಲ. ಆದರೆ ಅವುಗಳನ್ನು ಬದಲಾಯಿಸುವುದರಿಂದ ನಾವು ಉತ್ತಮರಾಗುತ್ತೇವೆ.
ಪ್ರತಿಯೊಬ್ಬ ವ್ಯಕ್ತಿಯೂ, ಪ್ರತಿಯೊಂದು ರಾಶ್ಟ್ರವೂ ಶ್ರೇಷ್ಟತೆಯನ್ನು ಪಡೆಯಲು ೩ ಸಂಗತಿಗಳು ಅವಶ್ಯಕ.೧. ಒಳತಿನ ಶಕ್ತಿಯಲ್ಲಿ ದೃಢನಂಬಿಕೆ.೨.. ಮಾತ್ಸರ್ಯ ಮತ್ತು ಅಪನಿಅಂಬಿಕೆಗಳಿಲ್ಲದಿರುವಿಕೆ.೩. ಒಳ್ಳೆಯವರಾಗಲು, ಒಳಿತನ್ನು ಮಾದಲು ಪ್ರಯತ್ನಿಸುತ್ತಿರುವವರಿಗೆ ಸಹಾಯ ಮಾಡುವಿಕೆ.

ನಮಗೆ ನಾವೇ ಕೆಡಕನ್ನು ಉಂಟುಮಾಡಿಕೊಳ್ಳದಿದ್ದರೆ, ಜಗತ್ತಿನ ಯಾವಶಕ್ತಿಯೂ ನಮಗೆ ಕ್ಡನ್ನುಂಟು ಮಡಲಾರದು ಎಂಬುವುದು ನಿಶ್ಚಯವು.

ಯಾರ ಸಹಾಯಕ್ಕೂ ಕಾದು ಕುಳಿತುಕೊಳ್ಳಬೇಡಿ. ಎಲ್ಲ ಮಾನವ ಸಹಾಯಕ್ಕಿಂತಲೂ ಭಗವಂತನು ಅನಂತಪಾಲು ಮೇಲಲ್ಲವೇ ?ಯವುದನ್ನೂ ಬಯಸಬೇಡಿ. ನಮ್ಮನ್ನು ದುಖಃಕ್ಕೊಳಪಡಿಸುವ ಎಲ್ಲಾ ಕಷ್ಟಗಳಿಗೂ ಆಸೆಯೇ ಕಾರಣ.

ಇತರರ ಯೋಜನೆಗಳಮೇಲೆ ತಣ್ಣೀರೆರಚಬೇಡಿ. ನಿಂದೆಯನ್ನು ಸಂಪೂರ್ಣವಗಿ ಪರಿತ್ಯಜಿಸಿ.ಇತರಿಗೆ ತಿಳಿಯದಂತೆ ಅವರನ್ನು ನಿಂದಿಸುವುದು ಮಹಾಪರಾಧಎಂಬುದನ್ನು ತಿಳಿಯಿರಿ. ಇದನ್ನು ನೀವು ಸಂಪೂರ್ಣವಾಗಿ ತ್ಯಜಿಸಬೇಕು.

ಸಾಧ್ಯವಾದರೆ ಸಹಾಯಮಾಡಿ. ಇಲ್ಲದಿದ್ದರೆ ಕೈಕಟ್ಟಿಕೊಂಡು ಸುಮ್ಮನೆ ನಡೆಯುವುದನ್ನು ನೋಡುತ್ತಿರಿ. ನಿಮಗೆ ಸಹಯಮಾಡಲಾಗದಿದ್ದರೆ ನೋಯಿಸಲು ಪ್ರಯತ್ನಿಸದಿರಿ.

ನಿಮ್ಮ ದ್ವೇಷ ಮತ್ತು ಅಸೂಯೆಗಳನ್ನು ಹೊರಸೂಸಿದರೆ ಅವುಗಖು ಚಕ್ರಬಡ್ಡಿಸಮೆತ ನಿಮಗೇ ಹಿಂದಿರುಗುತ್ತವೆ. ಯಾವ ಶಕ್ತಿಯೂ ಅದನ್ನು ತಡೆಯಲಾರದು. ಒಮೆ ನೀವು ಅವುಗಳನ್ನು ಚಲಿಸುವಂತೆ ಮಡಿದರೆ ಅದರ ದುಷ್ಪರಿಣಮವನ್ನು ನೀವು ಅನುಭವಿಸಲೇಬೇಕು.

ನೀವು ಅದಲ್ಲಿ ನೆನೆಪಿನಲ್ಲಿಟ್ಟಿದ್ದರೆ ದುಷ್ಕಾರ್ಯಗಳಿಂದ ಪಾರಾಗಬಹುದು.ಹಿಂದಿರುಗಿನೋಡಬೇಡಿ. ಯವಾಗಲೂ ಮುನ್ನಡೆಯಿರಿ. ಅನಂತ ಶಕ್ತಿ, ಅನಂತ ಉತ್ಸಾಹ, ಅನಂತ ಸಾಹಸ ಮತ್ತು ಅನಂತತಾಳ್ಮೆ ಇವುಗಳಿದ್ದರೆ ಮಾಹತ್ಕಾರ್ಯಗಳನ್ನು ಸಾಧಿದಲು ಸಾಧ್ಯ.

ನಿಮ್ಮೊಳಗಿರುವುದನ್ನು ಪ್ರಯತ್ನಪೂರ್ವಕವಗಿ ಹೊರಹೊಮ್ಮಿಸಿ. ಆದರೆ ಅನುಕರಿಸಬೇಡಿ. ಇತರರರಿಂದ ಒಳ್ಳೆಯದೆಲ್ಲವನ್ನು ಸ್ವೀಕರಿಸಿ.

ಜೀವಿಯು ತನ್ನ ಬಂಧನಗಳನ್ನು ಗುರುತಿಸಿ, ಜಾಗೃತವಾಗಿ, ತನ್ನ ಸ್ವರೂಪವನ್ನು ವ್ಯಕ್ತಪಡಿಸುವ ಪ್ರಯತ್ನವೇ ಜೀವನ.

ಸ್ವಾಮಿ ವಿವೇಕಾನಂದರನ್ನು ಕುರಿತಂತೆ ಗಣ್ಯರು :

೧. ಸ್ವಾಮೀಜಿಯವರ ತಪಃಪೂರ್ಣವಾದಶಕ್ತಿವಣಿ ಒಂದು ಅಮೃತದ ಮಡು. ಇದರಲ್ಲಿ ಮಿಮ್ದರೆ ಪುನೀತರಗುತ್ತೇವೆ. ಇದು ಜ್ಯಾತಿಯ ಖನಿ. ಹೊಕ್ಕರೆ ಪ್ರಬುದ್ಧರಾಗುತ್ತೇವೆ-ಕುವೆಂಪು.

೨. ನಾನು ಸ್ವಾಮೀಜಿಯವರ ಕೃತಿಗಳನ್ನು ಅಮೂಲಗ್ರವಾಗಿ ಓದಿದ್ದೇನೆ. ಅವುಗಳ ಅಧ್ಯಯನದನಂತರ ಭಾರತದ ಬಗ್ಗೆ ಇದ್ದ ನನ್ನ ಪ್ರೀತಿ, ಸಾವಿರಪಾಲು ಹೆಚ್ಚಿತು- ಮಹಾತ್ಮ ಗಾಂಧಿ.

ನೀವು ಭಾರತವನ್ನು ಅರಿಯಬೇಕೆಂದಿದ್ದರೆ, ಸ್ವಾಮಿ ವಿವೇಕಾನಂದರನ್ನು ಅಧ್ಯಯನ ಮಾಡಿ. ಅವರಲ್ಲಿ ಎಲ್ಲವೂ ರಚನಾತ್ಮಕವಾದುದು. ನೇತ್ಯಾತ್ಮಕವಾದದ್ದು ಯಾವುದೂ ಇಲ್ಲ.- ರವೀಂದ್ರನಾಥ ಠಾಕೂರ್.

ಗತಕಾಲದಲ್ಲಿ ನೆಲೆನಿಂತು ಭಾರತೀಯ ಪರಂಪರೆಯ ಬಗ್ಗೆ ಅತ್ಯಂತ ಹೆಮ್ಮೆ ಇದ್ದವರು ಸ್ವಮಿ ವಿವೇಕಾನಂದರು....ಅವರು ನಮ್ಮಲ್ಲಿ ನಮ್ಮ ಪರಂಪರೆಯಬಗ್ಗೆ ಸ್ವಾಭಿಮಾನವನ್ನು ಕೆರಳಿಸಿದವರು.-ಜವಹರ್ಲಾಲ್ ನೆಹರು.

ಸ್ವಾಮೀಜಿಯವರ ನುಡಿಗಳಿಂದ ನಮ್ಮ ದೇಶದ ಜನ ಹಿಂದೆಂದೂ ಕಾಣದ ಆತ್ಮಗೌರವವನ್ನು, ಆತ್ಮ ವಿಶ್ವಾಸವನ್ನುಹಾಗೂ ಆತ್ಮಬಲವನ್ನೂ ಪಡ್ಡೆದಿದ್ದಾರೆ.- ಸುಭಾಶ್ ಚಂದ್ರ ಬೋಸ್.ಅವರ ಮತು ಒಂದು ಅಮೊಘಸಂಗೀತದಂತೆ. ಮೂವತ್ತು ವರ್ಷಗಳ ನಂತರವೂ ಅವರ ಈ ಹೇಳಿಕೆಗಳು ವಿದ್ಯುತ್ ಪ್ರವಾಹದಂತೆ ನನ್ನಲ್ಲಿ ಮೈನವಿರೇಳಿಸುತ್ತದೆ.- ರೋಮಾ ರೋಲಾ
ಸ್ವಾಮಿ ವಿವೇಕಾನಂದರು ಹಿಂದೂ ಧರ್ಮವನ್ನು ರಕ್ಷಿಸಿದರು. ಭಾರತವನ್ನು ರಕ್ಷಿಸಿದರು. ಅವರು ಬರದೆ ಇದ್ದಿದ್ದರೆ ನಾವು ನಮ್ಮ ಧರ್ಮವನ್ನು ಕಳೆದುಕೊಳ್ಳುತ್ತಿದ್ದೆವು. ಅಲ್ಲದೆ ನಮಗೆ ಸ್ವಾತಂತ್ರ್ಯವೂ ದೊರಕುತ್ತಿರಲಿಲ್ಲ- ಸಿ. ರಾಜಗೋಪಾಲಾಚಾರಿ.
ವಿವೇಕಾನಂದರು ನಮಗೆ ತಿಳಿದಿರುವ ಅಪಾರ ಶಕ್ತಿಯ ಏಕೈಕ ವ್ಯಕ್ತಿ ಪುರುಷರಲ್ಲಿ ಪುರುಷಸಿಂಹ. ಇಂದಿಗೂ ಅವರ ಅದಮ್ಯ ಕಾರ್ಯಶೀಲತೆ ಚಾಲನೆಯಲ್ಲಿರುವುದನ್ನು ಗುರುತಿಸಬಹುದು.

ಸ್ವಾಮಿ ವಿವೇಕಾನಂದರು ತಮ್ಮಶಕ್ತಿಯುತ ವ್ಯಕ್ತಿತ್ವದ ಮೂಲಕ, ಪ್ರಭಾವಪೂರ್ಣ ವಾಗ್ಮಿತ್ವದ ಮೂಲಕ, ರಾಷ್ಟ್ರಚೇತನವನು ಜಾಗೃತಗೊಳಿಸಿ, ಯುವಕರಲ್ಲಿ ನವೋತ್ಸಾಹವನ್ನು ಕೆರಳಿಸಿ, ಅವರಲ್ಲಿ ನಮ್ಮ ಸಂಸ್ಕೃತಿಯ ಅಗ್ಗೆ ಹೆಮ್ಮೆಯನ್ನು ಕುದುರಿಸಿ, ಸ್ವಾತಂತ್ರ್ಯನವಭಾರತ ನಿರ್ಮಣಕ್ಕೆ ಬುನಾದಿಯನ್ನು ಹಾಕಿದರು. ಸ್ವಾಮೀಜಿಯವರ ಕೃತಿಗಳನ್ನು ಓದಿದಾಗ ಇಂದಿಗೂ ಅವರ ಶಕ್ತಿಪ್ರಭಾವಗಳ ಸಂಚಾರ ನಮ್ಮಲ್ಲುಂಟಾಗುಗುತ್ತದೆ. ಅಪಾರ ಜ್ಞಾನ ಸಂಪತ್ತಿನಿಂದ ಕೂಡಿದ ಅವರ ಚಿಂತನೆಗಳು ಪ್ರಜ್ವಲಿಸುತ್ತಿರುವ ಭಾವಾಗ್ನಿಕುಂಡದಿಂದ ಸಿಡಿದುಬಂದ ಚಿಂತನೆಗಳು ಕಿಡಿಗಳಂತಿವೆ. ಅಂತಹ ಕೆಲವು ಕಿಡಿಗಳ ಕಿರು ಸಂಕಲನವೇ ವಿದ್ಯುತ್ ವಾಣಿ.

ಸ್ಮಾಮೀಜಿಯವರ ಅಮೂಲ್ಯ ಕೃತಿಗಳಿಗಾಗಿ ಹಾಗೂ ಇರರ ಅಧ್ಯತ್ಮಿಕ ಗ್ರಂಥಗಳಿಗಾಗಿ ನಮ್ಮ ಪ್ರಕಟನಾ ವಿಭಾಗವನ್ನು ಸಂಪರ್ಕಿಸಿ. ಶ್ರೀ. ರಾಮಕೃಷ್ಣ ಆಶ್ರಮ, ಮೈಸೂರು-೫೭೦ ೦೨೦. ವಿದ್ಯುತ್ ವಾಣಿ- ಸ್ವಾಮಿ ವಿವೇಕಾನಂದ.
ಬೆಲೆ : ೫೦ ಪೈಸೆ ಮಾತ್ರ.

Comments

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !