ವೇಣುಗೋಪಾಲದೇವರ ದೇವಸ್ಥಾನ, ಹೊಳಲ್ಕೆರೆ
ಕಾರ್ತೀಕಮಾಸದ ಬೆಳಗಿನ ಜಾವದ ಪೂಜೆಯನ್ನು ನಾನು ಯಾವಾಗಲೂ ಜ್ಞಾಪಿಸಿಕೊಳ್ಳುತ್ತೇನೆ. ಹೊಳಲ್ಕೆರೆಯಲ್ಲಿರುವ ವೇಣುಗೋಪಾಲದೇವರ ಗುಡಿಯಲ್ಲಿ, ಕಾರ್ತೀಕಮಾಸದಲ್ಲಿ ಭರ್ಜರಿ ಪೂಜೆ ನಡೆಯುತ್ತಿತ್ತು. ಇದು ನನ್ನ ಬಾಲ್ಯದ ದಿನಗಳ ಸುದ್ದಿ. ಗುಡಿ ಗೋಪಾಲಜ್ಜನವರು ನಿಷ್ಠೆಯಿಂದ ಪೂಜೆ ಪುನಸ್ಕಾರಗಳನ್ನು, ತಪ್ಪದೆ ಮಾಡುತ್ತಿದ್ದರು. ಮಂತ್ರಪುಷ್ಪ, ನಂತರ, ಆ ದಿನದ ಸೇವಾಕರ್ತರು, ಒಂದು ದೇವರನಾಮದ ಹಾಡನ್ನು ಹೇಳಲೇ ಬೇಕು. ಪೂಜೆಯನಂತರದ ಚರುಪು, ಕಡ್ಲೆ-ಬೇಳೆ ಗುಗ್ಗುರಿ, ಇಂದಿಗೂ ನನ್ನ ಮನಸ್ಸಿನಲ್ಲಿ ಅದರ ರುಚಿ ಸ್ವಲ್ಪವೂ ಮಾಸಿಲ್ಲ.
Comments