Posts

Showing posts from December, 2008

ಎಲ್ಲಾರ್ಗೂ ಹ್ಯಾಪಿ ಕ್ರಿಸ್ಮಸ್, ಮತ್ತು ಹ್ಯಾಪಿ ನ್ಯೂಯಿರ್ ಡೇ..!

Image
ಅಮ್ಮ, ಅಪ್ಪ, ನಿಮ್ಮಿಬ್ಬರೂ ಮತ್ತೆ ಅಜ್ಜ, ಅಜ್ಜಿ ಎಲ್ಲಾರ್ಗೂ ಹ್ಯಾಪಿ ಹ್ಯಾಪಿ ಕ್ರಿಸ್ಮಸ್ ಮತ್ತೆ, ಹ್ಯಾಪಿ ನ್ಯೂಯಿರ್ ಡೇ ಶುಭಾಶಯಗಳು.. ಸರೀನಾ.. ನನ್ನ, ಕನ್ನಡ ಸರಿ ಇದೆಯ ? ಈ ಗಿಫ್ಟ್ ಅಂದ್ರೂ ಇಷ್ಟ..... ಕ್ರಿಸ್ಮಸ್ ಅಂದ್ರೆ, ನನ್ಗೆ ಎಷ್ಟ್ ಇಷ್ಟ ಗೊತ್ತಾ ? ಈ ನಮ್ಮಮ್ಮ, ಮತ್ತೆ ನಮ್ಮಪ್ಪ, ಇವೄ ತುಂಬಾ ತುಂಬಾ ಇಷ್ಟ...
Image

ಅದೇನ್ ನಮ್ಮನೆನಾ, ಅಲ್ನೋಡಲ್ಲಿ, ಎಷ್ಟ್ ಮಂಜು ಬಿದ್ದಿದೆ ? !

Image
Image

ಮಕ್ಳ್ ಜೊತೆ ನಾವೂ ಮಕ್ಳೆ ಅಲ್ವಾ !

Image

ಮಾತಿನ ಅವಕಾಶ ಸಿಕ್ಕಾಗ.....

Image
ಬ್ಲೂಮಿಂಗ್ಟನ್ ಆದರೇನಂತೆ. ’ಕರ್ಣಾಟಕ ಭಾಗವತ,’ ದ ಮಾತುಬಂದಾಗ ಹೇಳಲೇಬೇಕಲ್ಲವೇ !

NASA ಕ್ಕೆ ಕೊಟ್ಟ ಭೇಟಿ, ನಿಜಕ್ಕೂ ಅವಿಸ್ಮರಣೀಯವಾದದ್ದು !

Image
ಓಹ್ ! ವಿಜ್ಞಾನದ ವಿದ್ಯಾರ್ಥಿಯಾದ ನನಗೆ, ಇದಕ್ಕಿಂತ ಹೆಚ್ಚಿನ ಆಸಕ್ತಿಯ ತಾಣವ್ಯಾವುದು ? ನನಗಾದ ಆನಂದಕ್ಕೆ ಎಲ್ಲೆಯಿಲ್ಲ ! ಪುಟಾಣಿ ಗೌರಿಗೆ, ಬಾಲಸಹಜವಾದ ಆಸಕ್ತಿ. ಚೆಂಡಿನಂತೆ ಕಾಣುವ, ಗ್ರಹಮಂಡಲದ ಮಾಡೆಲ್, ಅವಳಿಗೆ ಇಷ್ಟ ! ’ ನ್ಯಾಸಾ,’ ದ ಒಳಭಾಗದಲ್ಲಿ ವೀಕ್ಷಿಸಿದ ಆದ್ಭುತ ನೋಟ ! ’ನ್ಯಾಸಾ,’ ದ ವಲಯದಲ್ಲಿನ ಹಲವಾರು, ಬೆರಗೊಳಿಸುವ ವೈಜ್ಞಾನಿಕ ಉಪಕರಣಗಳು ! ’ನ್ಯಾಸಾ,’ ಹೆಸರೇ ಸಾಕು, ಅದರ ಕಾರ್ಯವೈಖರಿಯ ಸುದೀರ್ಘ ಇತಿಹಾಸವನ್ನು ಸ್ಮರಿಸಲು ..!

ಫ್ಲಾರಿಡಾದಲ್ಲಿ ಪುಟ್ಟಪಾಪಚ್ಚಿ, ’ಗೌರಿ,’ ಯ ಜೊತೆಕಳೆದ ಸುಂದರ ಕ್ಷಣಗಳು !

Image
ಗೌರಿ, ನಮ್ಮೆಲ್ಲರ ಆಕರ್ಶಣೆಯ ಬಿಂದುವಾಗಿದ್ದಳು. ಅಜಿತ, ಹರ್ಷ, ಮತ್ತು ನಾವಿಬ್ಬರು, ಸಾಧ್ಯವಾದಷ್ಟು ಸುತ್ತಿದೆವು. ಲಲಿತ ಪ್ರಯತ್ನಮೀರಿ ನಮ್ಮಜೊತೆ ಸಹಕರಿಸಿದಳು. ವಾಲ್ಟ್ ಡಿಸ್ನಿಯವರ ಅದ್ಬುತ ಆಲೋಚನಾ-ಶಕ್ತಿಯನ್ನು ನಾವು ಇಲ್ಲಿ ಕಾಣಬಹುದು. ಕ್ಯಾಲಿಫೋರ್ನಿಯದ ತರಹವೇ ಇಲ್ಲಿಯ ’ಡಿಸ್ನಿಲ್ಯಾಂಡ್,’ ನ ಭವ್ಯ ಮನರಂಜನಾ ತಾಣಗಳನ್ನು ಹುಟ್ಟುಹಾಕಿ, ನೀರೆರೆದು ಬೆಳೆಸಿದ್ದಾರೆ. ಆದರೆ, ಪ್ರತಿ ಪ್ರದೇಶದಲ್ಲೂ ಅವುಗಳ ಥೀಮ್ ನಲ್ಲಿ ಸ್ವಲ್ಪ ವ್ಯತ್ಯಾಸವಿರುವುದು ಸಹಜ. ಬೊಂಬೆಯ ಜೊತೆ, ನಾವಿಬ್ಬರೂ ಬೊಂಬೆಗಳಾದೆವು. ಅರರೆ....ಗೌರಿ ಬೊಂಬೆಯೆಲ್ಲಿ ? ಪ್ರತಿಯೊಂದು ಜಾಗವನ್ನೂ ಅತ್ಯಂತ ಎಚ್ಚರಿಕೆಯಿಂದ ಅಲ್ಲಿನ ಸಂಪನ್ಮೂಲಗಳನ್ನೇ ಬಳಸಿ, ಚೆನ್ನಾಗಿ ಕಟ್ಟಿ ಅಲ್ಲಿ ಏನೋ ಒಂದು ಹೊಸ ಆಕರ್ಷಣೆಯನ್ನು ತೋರಿಸುವ ಈ ಕಲಾರಸಿಕರ ಪ್ರಯತ್ನ ನಿಜಕ್ಕೂ ಅನನ್ಯ. ವಾಲ್ಟ್ ಡಿಸ್ನಿ, ಗತಿಸಿ ಎಷ್ಟೋ ವರ್ಷಗಳಾಗಿದ್ದಾಗ್ಯೂ, ಅವರ ತನ, ಹಾಗೂ ಛಾಪನ್ನು ಚಾಚೂತಪ್ಪದೆ, ನಡೆಸುಕೊಂಡು ಬರುತ್ತಿರುವ ವಾಲ್ಟ್ ಪರಿವಾರ, ಶ್ಲಾಘನೆಗೆ ಪಾತ್ರರು ! ಮಕ್ಕಳ ಜೊತೆ-ಜೊತೆಯಲ್ಲಿ ನಾವೂ ಮಕ್ಕಳಾಗಿ ಕಳೆದ ನಿಮಿಷಗಳು, ನಮ್ಮ ಮನಸ್ಸಿನ ಅಂತರಾಳದಲ್ಲಿ ಸದಾ ಹಸಿರಾಗಿ ಉಳಿಯುತ್ತವೆ ! ಅಮೆರಿಕದ ದೈನಂದಿನ ಕೆಲಸಕಾರ್ಯಗಳಲ್ಲಿ ಅವರು ಪ್ರದರ್ಶಿಸುವ, ಶಿಸ್ತುಬದ್ಧ ಜೀವನ, ಆ ಜೀವನೋಲ್ಲಾಸ, ಹಾಗೂ ಸದಾ ಹಸನ್ಮುಖರಾಗಿ, ಮಾಡುವ ಕಾರ್ಯವೈಖರಿ, ಬೇರೆಯವರು, ಹೇಳಿದ್ದನ್ನು ಕೇಳಿಸಿಕೊಂಡು ಏನಾದರೂ ಸಹಾಯಮಾಡಲು...