ಫ್ಲಾರಿಡಾದಲ್ಲಿ ಪುಟ್ಟಪಾಪಚ್ಚಿ, ’ಗೌರಿ,’ ಯ ಜೊತೆಕಳೆದ ಸುಂದರ ಕ್ಷಣಗಳು !
ಗೌರಿ, ನಮ್ಮೆಲ್ಲರ ಆಕರ್ಶಣೆಯ ಬಿಂದುವಾಗಿದ್ದಳು. ಅಜಿತ, ಹರ್ಷ, ಮತ್ತು ನಾವಿಬ್ಬರು, ಸಾಧ್ಯವಾದಷ್ಟು ಸುತ್ತಿದೆವು. ಲಲಿತ ಪ್ರಯತ್ನಮೀರಿ ನಮ್ಮಜೊತೆ ಸಹಕರಿಸಿದಳು. ವಾಲ್ಟ್ ಡಿಸ್ನಿಯವರ ಅದ್ಬುತ ಆಲೋಚನಾ-ಶಕ್ತಿಯನ್ನು ನಾವು ಇಲ್ಲಿ ಕಾಣಬಹುದು. ಕ್ಯಾಲಿಫೋರ್ನಿಯದ ತರಹವೇ ಇಲ್ಲಿಯ ’ಡಿಸ್ನಿಲ್ಯಾಂಡ್,’ ನ ಭವ್ಯ ಮನರಂಜನಾ ತಾಣಗಳನ್ನು ಹುಟ್ಟುಹಾಕಿ, ನೀರೆರೆದು ಬೆಳೆಸಿದ್ದಾರೆ. ಆದರೆ, ಪ್ರತಿ ಪ್ರದೇಶದಲ್ಲೂ ಅವುಗಳ ಥೀಮ್ ನಲ್ಲಿ ಸ್ವಲ್ಪ ವ್ಯತ್ಯಾಸವಿರುವುದು ಸಹಜ.
ಬೊಂಬೆಯ ಜೊತೆ, ನಾವಿಬ್ಬರೂ ಬೊಂಬೆಗಳಾದೆವು. ಅರರೆ....ಗೌರಿ ಬೊಂಬೆಯೆಲ್ಲಿ ?
ಪ್ರತಿಯೊಂದು ಜಾಗವನ್ನೂ ಅತ್ಯಂತ ಎಚ್ಚರಿಕೆಯಿಂದ ಅಲ್ಲಿನ ಸಂಪನ್ಮೂಲಗಳನ್ನೇ ಬಳಸಿ, ಚೆನ್ನಾಗಿ ಕಟ್ಟಿ ಅಲ್ಲಿ ಏನೋ ಒಂದು ಹೊಸ ಆಕರ್ಷಣೆಯನ್ನು ತೋರಿಸುವ ಈ ಕಲಾರಸಿಕರ ಪ್ರಯತ್ನ ನಿಜಕ್ಕೂ ಅನನ್ಯ. ವಾಲ್ಟ್ ಡಿಸ್ನಿ, ಗತಿಸಿ ಎಷ್ಟೋ ವರ್ಷಗಳಾಗಿದ್ದಾಗ್ಯೂ, ಅವರ ತನ, ಹಾಗೂ ಛಾಪನ್ನು ಚಾಚೂತಪ್ಪದೆ, ನಡೆಸುಕೊಂಡು ಬರುತ್ತಿರುವ ವಾಲ್ಟ್ ಪರಿವಾರ, ಶ್ಲಾಘನೆಗೆ ಪಾತ್ರರು !
ಮಕ್ಕಳ ಜೊತೆ-ಜೊತೆಯಲ್ಲಿ ನಾವೂ ಮಕ್ಕಳಾಗಿ ಕಳೆದ ನಿಮಿಷಗಳು, ನಮ್ಮ ಮನಸ್ಸಿನ ಅಂತರಾಳದಲ್ಲಿ ಸದಾ ಹಸಿರಾಗಿ ಉಳಿಯುತ್ತವೆ ! ಅಮೆರಿಕದ ದೈನಂದಿನ ಕೆಲಸಕಾರ್ಯಗಳಲ್ಲಿ ಅವರು ಪ್ರದರ್ಶಿಸುವ, ಶಿಸ್ತುಬದ್ಧ ಜೀವನ, ಆ ಜೀವನೋಲ್ಲಾಸ, ಹಾಗೂ ಸದಾ ಹಸನ್ಮುಖರಾಗಿ, ಮಾಡುವ ಕಾರ್ಯವೈಖರಿ, ಬೇರೆಯವರು, ಹೇಳಿದ್ದನ್ನು ಕೇಳಿಸಿಕೊಂಡು ಏನಾದರೂ ಸಹಾಯಮಾಡಲು ಸದಾ ಹಾತೊರೆಯುವ ಮುಕ್ತಮನಸ್ಸುಗಳನ್ನು ಯುವಜನರಿಂದ ಹಿಡಿದು, ಎಲ್ಲಾ ವಯೋವರ್ಗದವರೂ ಅನುಕರಿಸಿವುದು ಮೇಲೆತಿಳಿಸಿದ ಕಾರಣಗಳಿಗಾಗಿಯೇ, ಇರಬಹುದೇನೋ .....!
ಹಾ....ಅತಿಯಾದ ಸ್ವಾತಂತ್ರ, ಸ್ವಚ್ಛಂದ ಜೀವನಶೈಲಿಗೆ ಎಡೆಮಾಡಿಕೊಟ್ಟಿದೆ. ಯಾವುದು ಅತಿಯಾದರೂ ಕೆಟ್ಟದ್ದಲ್ಲವೇ ? ಅತಿಯಾದ ಲೈಂಗಿಕಜೀವನ, ಇಂದಿನ ಹಾಗೂ ಮುಂದಿನ ಪೀಳಿಗೆಗೆ, ಕೆಲವಾರು ಸಮಸ್ಯೆಗಳಿಗೆ ದಾರಿಯಾಗಿದೆ. ಲೈಂಗಿಕತೆ, ಅವರವರ, ಮಲಗುವಕೋಣೆಗೆ ಮೀಸಲಾದರೆ ಒಳ್ಳೆಯದು. ಅದು ವೈಯಕ್ತಿಕ ವಿಶಯವೆನ್ನುವುದನ್ನು ಈ ಜನಕ್ಕೆ ವಿವರಿಸಿ ಹೇಳುವರು ಯಾರು ? ಅಷ್ಟಕ್ಕೂ ಹೇಳಿದರೆ ಕೇಳುವಜನರೇನಿವರು ?
Comments