'Himalaya Joggers' Park,' and The Metro Train Track, in Progress....

                                          Andheri Railway Station, Sky walk, built recently.
.Metro Train Track Work is in progress, at Andheri,..
Metro Train Track Work is in progress, at Andheri,
Then
Cotton Plant...
Joggers'  Park, during Monsoon...
'Himalaya  Co-Operative Housing Society's Joggers'  Park, Ghatkopar west'........
'Joggers Park'- A close view......



"ಹರಿಹರೇಶ್ವರರ ಕನ್ನಡ ಸಾಹಿತ್ಯ ಪರಿಚಾರಿಕೆ "  !


ವಿದೇಶದಲ್ಲಿದ್ದಾಗ ಮಾತ್ರ, ಕನ್ನಡ ಭಾಷೆಯ ಬಗ್ಗೆ ಕಳಕಳಿ ವ್ಯಕ್ತಪಡಿಸಿ, ಅಲ್ಲಿಂದ ವಾಪಸ್ಸಾದಮೇಲೆ, ಅಥವಾ ಭಾರತದಲ್ಲಿದ್ದೂ ಅಭಿಮಾನ ಶೂನ್ಯರಾಗಿರುವ ನಮ್ಮಲ್ಲಿನ ಹಲವರಂತೆ, ವರ್ತಿಸದೆ, "ಹರಿ "ಯವರು, ಅಮೆರಿಕವನ್ನು ಬಿಟ್ಟು ಬಂದಮೇಲೆ, ಮೈಸೂರಿನಲ್ಲಿ ವಾಸವಾಗಿದ್ದಾಗಲೂ, " ವಿದೇಶಿ ಒಣಜಂಬ " ಕ್ಕೆ ಬಲಿಯಾಗದೆ, "ಅಪ್ಪಟ ಭಾರತೀಯನ ತರಹ,"  "ಒಬ್ಬ ಶುದ್ಧ- ಕರ್ನಾಟಕದವನ ತರಹ," ವರ್ತಿಸುತ್ತಿದ್ದರು. ಅವರ ಪತ್ನಿ, ನಾಗಲಕ್ಷ್ಮಿಯವರಂತೂ ಪತಿಯ ನೆರಳಿನಂತೆ ಇದ್ದು,  ಹರಿಯವರ ಕನ್ನಡದ ಒಲವಿಗೆ ನೀರೆರದು, ಉಳಿಸಿ, ಬೆಳೆಸಲು ತಮ್ಮ ಎಲ್ಲಾ ಸಹಕಾರಗಳನ್ನೂ ಕೊಡುತ್ತಿದ್ದರು. ಸಿವಿಲ್ ಇಂಜಿನಿಯರ್ ಆಗಿದ್ದ, ಹರಿಹರೇಶ್ವರರು, ಅದೆಷ್ಟು "ಮದುವೆ "ಗಳನ್ನು ಕನ್ನಡದಲ್ಲಿ ಮಾಡಿಸಿದ್ದಾರೆಯೋ, ಹಾಗೂ ಅದೆಷ್ಟು "ಸತ್ಯನಾರಾಯಣ ವ್ರತ"ಗಳನ್ನೂ ಸಹಿತ. ಅದರಲ್ಲೂ ಕನ್ನಡದಲ್ಲಿ..! 
ಕನ್ನಡ ಭಾಷೆಯ ಅಳಿವು ಉಳಿವುಗಳು  ನಮ್ಮೆಲ್ಲರಿಂದ ಆಗಬೇಕಾಗಿದೆ ; ಸದ್ದಿಲ್ಲದೇ ನಿರಂತರವಾಗಿ ಸೇವೆ ಮಾಡುತ್ತಿದ್ದ  ಕನ್ನಡದ ಪರಿಚಾರಕ, ಶ್ರೀ. ಹರಿಹರೇಶ್ವರರಂತಹ ನಿಸ್ವಾರ್ಥ ಮನೋಭಾವದ ಶುದ್ಧಮನಸ್ಸಿನ ಕನ್ನಡ ಪ್ರೇಮಿಗಳಿಂದ ಆಗಬೇಕಾಗಿದೆ !
-ಈ ಲೇಖನ ಪ್ರಕಟವಾಗಿರುವುದು, " ಮಂಗಳವಾರದ, ಜುಲೈ, ೨೭ ರ,  ೨೦೧೦ ರ "ಉದಯವಾಣಿ ದಿನಪತ್ರಿಕೆ "  ಯ ಸೌಜನ್ಯದಿಂದ ’ಹೇಗಿದೆಯೋ ಹಾಗೆ"  ಪ್ರಕಟಿತ....


ಮುಂಬೈಹತ್ತಿರವಿರುವ,  "ಗಣೇಶ್ ಪುರಿಯ ಸ್ವಾಮಿ ನಿತ್ಯಾನಂದರು", ಅನೇಕ ಆಚಾರ್ಯರಿಗೆ ಪರಮಗುರುಗಳು !

ಮಲ್ಲಾಡಿಹಳ್ಳಿಯ ರಾಘವೇಂದ್ರ ರಾಯರಂತೂ ತಮ್ಮ ಗ್ರಂಥ, " ಜೋಳಿಗೆ ಪವಾಡ" ದಲ್ಲಿ ಹಲವಾರು ಬಾರಿ ತಮ್ಮ ಗುರುಗಳನೇಕರನ್ನು ನೆನೆಸಿಕೊಂಡು ತಮ್ಮ ಗ್ರಂಥ ಜೋಳಿಗೆಯ ಪವಾಡದ ಶ್ರೇಯಸ್ಸನ್ನು  ತಮ್ಮಜೀವನದಲ್ಲಿ ಬಂದುಹೋದ ಹಲವಾರು ಗುರುಗಳ ಚರಣಗಳಲ್ಲಿ ಸಮರ್ಪಿಸಿದ್ದಾರೆ. ಅವರಲ್ಲಿ ಗುರು, ನಿತ್ಯಾನಂದರು ಮಹತ್ವದ ಸ್ಥಾನವನ್ನು ಏರಿದ್ದಾರೆ. ನನಗೆ ಆ ಗುರುವಿನ ಚರಿತ್ರೆಯನ್ನು ತಿಳಿಯುವ ತವಕ ಬಹಳ ಸಮಯದಿಂದ ಇತ್ತು. ನಾನು ಗಣೇಶಪುರಿಗೆ ಹೋಗಿಬಂದೆನಾದರೂ, ತಿರುಕರ ಕಥೆಯನ್ನು ಓದಿದ ತರುವಾಯವೇ ರಲ್ಲಿ ನನಗೆ ಅತೀವ ಆಸಕ್ತಿ ಮತ್ತು ಮಮತೆ ಹೆಚ್ಚಾಯಿತು. ಈ ದಿನ ಕರ್ನಾಟಕ ಮಲ್ಲ ಪತ್ರಿಕೆಯಲ್ಲಿ ವಿಷಯಗಳೆಲ್ಲವನ್ನೂ ಓದಿದ ಮೇಲೆ ಸ್ವಾಮಿಗಳ ಪೂರ್ವಾಶ್ರಮದ ಪರಿಚಯವೂ ಆಗಿ ಸಂತೋಷವಾಯಿತು.

ಕೇರಳದ ಕಲ್ಲಿಕೋಟೆ ಜಿಲ್ಲೆಯ ತುನೇರಿ ಗ್ರಾಮದ ವಾಸಿ, ಚಾತುನಾಯರ್ ಮತ್ತು ಉಣ್ಣಿಯಮ್ಮದಂಪತಿಗಳಿಗೆ ಬೆಳಗಿನಜಾವದಲ್ಲಿ ಸ್ವಪ್ನದಲ್ಲಿ ಹರಪುರ ನದಿಯಲ್ಲಿ, ಸ್ನಾನಮಾಡಿದಂತೆಯೂ, ನದಿಯ ದಡದಲ್ಲಿ ಶಿವ-ವಿಷ್ಣುದೇವರು ಪ್ರತ್ಯಕ್ಷವಾಗಿ,  ಮಗುವನ್ನು ಅಲ್ಲೇ ಬಿಟ್ಟು ತೆರಳಿದಂತೆಯೂ, ಕನಸಾಗಲು, ಎಚ್ಚರವಾದಮೇಲೆ, ಅಯ್ಯಪ್ಪನವರು ದೇವಾಲಯದ ಹತ್ತಿರಕ್ಕೆ ಓಡಿಹೋದರು. ಅವರು ಕಂಡಿದ್ದೇನು ? ಒಂದು ದಿವ್ಯತೇಜಸ್ಸಿನ ಗಂಡುಮಹುವೊಂದು ಅಲ್ಲಿ ಮಲಗಿರುವುದನ್ನು ಕಂಡು, ಪರಮಾಶ್ಚರ್ಯದಿಂದ ಎದೆಗೊತ್ತಿಕೊಂಡು, ತಮ್ಮ ಗೃಹಕ್ಕೆ ಕರೆತಂದರು. ಆ ಶಿಶುವಿಗೆ ಇಟ್ಟ ಹೆಸರು, ರಾಮನ್ ಎಂದು !  ಪ್ರೀತಿಯ ಮಗನಂತೆ ಸಾಹಿಸಲಹಿದರು.. ರಾಮನ್ ಚಿಕ್ಕವಯಸ್ಸಿನಲ್ಲೇ ಅತ್ಯಂತ ಮೇಧಾವಿ ಮತ್ತು ದೈವಭಕ್ತಿಯನ್ನು ಹೊಂದಿದವನು. ಆ ಊರಿನ ವಕೀಲರೊಬ್ಬರು, ಈಶ್ವರ್ ಅಯ್ಯರ್, ಆ ಚಿಕ್ಕವಯಸ್ಸಿನಲ್ಲೇ  ರಾಮನ್  ಗೆ ಇದ್ದ ಪ್ರೌಢಿಮೆ, ಭಗವಂತನಲ್ಲಿದ್ದ ಅದಮ್ಯ ನಂಬಿಕೆ ಹಾಗೂ ಗೌರವಗಳನ್ನು ಕಂಡು ಆಕರ್ಷಿತರಾದರು. ಅವನನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡು ತಮ್ಮ ಮನೆಯ ದನಗಳನ್ನು ನೋಡಿಕೊಳ್ಳುವ ಕೆಲಸವನ್ನು ಕೊಟ್ಟರು. ದನಕಾಯುವ ಸಮಯದಲ್ಲೂ ಧ್ಯಾನಾಸಕ್ತನಾದ ಬಾಲಕ, ರಾಮನ್ ಕಾಡಿನಲ್ಲಿದ್ದಾಗ, ಅಲ್ಲಿಗೆ ಬಂದ ನರಭಕ್ಷಕ ಹುಲಿಯೊಂದು, ಬಂದು ನಿತ್ಯಾನಂದನ ಕಾಲಿಗೆರಗಿ, ಓಡಿಹೋದ ನೋಟವನ್ನು ಅಲ್ಲಿದ್ದ ಬೇರೆ ದನಕಾಯುವ ಹುಡುಗರು ತಮ್ಮ ಕಣ್ಣಿನಲ್ಲಿ ನಂಬಲಿಲ್ಲ. ಊರಿಗೆ ಬಂದು ಆ ಪವಾಡ ಸದೃಶವಾದ ಸನ್ನಿವೇಶವನ್ನು ಜನಗಿಗೆಲ್ಲಾ ತಿಳಿಸಿದರು. ಯಾವಾಗಲೂ ಆನಂದದಿಂದಿರುತ್ತಿದ್ದ ಹಸನ್ಮುಖಿಗೆ ನಿತ್ಯಾನಂದನೆಂಬ ಹೆಸರನ್ನೂ ಈಶ್ವರ ಅಯ್ಯರ್ ಕೊಟ್ಟರು.
ನಿತ್ಯಾನಂದ ಅಯ್ಯರ್ ರವರನ್ನು ತಂದೆಯಂತೆ ಪ್ರೀತಿಸುತ್ತಿದ್ದನು. ಸೂರ್ಯನಾರಾಯಣನ ಅವತಾರದಂತೆ, ಒಮ್ಮೊಮ್ಮೆ ದತ್ತಾತ್ರೇಯದೇವನಂತೆ, ಮುರುಳೀಲೋಲ ಕೃಷ್ಣನಂತೆ, ಕಾಣಿಸಿಕೊಂಡ ರಾಮನ್ ಅಯ್ಯರ್ ರವರಿಗೆ ಒಬ್ಬ ಪವಾಡ ಪುರುಷನಂತೆ ಕಂಡರು. ಶಿವಾನಂದನು, ಈಶ್ವರ್ ಅಯ್ಯರ್ ರವರನ್ನು ಕಾಶಿ ಪಟ್ಟಣಕ್ಕೆ ಕರೆದೊಯ್ದು, ಅಲ್ಲಿ,  ಜೀವಂತ ಶ್ರಾಧ್ಧವನ್ನು ಮಾಡಿಸಿದನು. ಕಾಲುನಡಿಗೆಯಲ್ಲೇಉತ್ತರ ಭಾರತವೆಲ್ಲಾ ಸುತ್ತಾಡಿ ವಾಪಸ್ಸಾದ ಶಿವಾನಂದರು, ತಮ್ಮ ಅಂತ್ಯಕಾಲದವರೆಗೂ  ಗಣೇಶಪುರಿಯಲ್ಲಿಯೇ  ನೆಲಸಿದರು. ೮-೦೮-೧೯೬೧ ರಲ್ಲಿ ಜೀವನ್ಮುಕ್ತರಾದರು. ಅಲ್ಲಿಯೇ ಅವರ ಸಮಾಧಿಯನ್ನು ಕಟ್ಟಲಾಗಿದೆ.
ಮುಂಬೈನಿಂದ  ಗಣೇಶಪುರಿಗೆ  ಹೋಗಲು, ಹಲವಾರು  ಮಾರ್ಗಗಳಿವೆ ಹಾಗೂ ಸೌಲಭ್ಯಗಳಿವೆ.
ಮುಂಬೈನಿಂದ  ಗಣೇಶಪುರಿಗೆ ೭೦ ಕಿ. ಮೀ,. ದೂರ.  ಉಪನಗರ, ವಸಾಯಿ ರೈಲ್ವೆ ನಿಲ್ದಾಣದಿಂದ ಕೇವಲ, ೧೫ ಕಿ. ಮೀ. ಒಳಗಡೆ ಹೋದರೆ  ಗಣೇಶಪುರಿ ಸಿಗುತ್ತದೆ. ಅಲ್ಲಿಂದ ವಜ್ರೇಶ್ವರಿಯ ದೇವಿಮಂದಿರ ೩ ಕಿ. ಮೀ. ದೂರ   ವಷ್ಟೆ. ಮಧ್ಯರೈಲ್ವೆಯ,  ಥಾಣೆ, ಕಲ್ಯಾಣ್, ಭಿವಂಡಿಗಳಿಂದಲೂ,  ರಾಜ್ಯಸಾರಿಗೆ ಬಸ್ಸಿನಲ್ಲಿ ಗಣೇಶಪುರಿಯನ್ನು ತಲುಪಬಹುದು.
ಸ್ವಾಮಿ ಶಿವಾನಂದರ ಬಗ್ಗೆ ವ್ಯಾಪಕವಾದ ಅಧ್ಯಯನಮಾಡಿ ವಿಜಯಾನಂದ ಸ್ವಾಮೀಜಿಯವರಿಂದ  ಬರೆದು ಪ್ರಕಟಿಸಿದ ಪುಸ್ತಕಗಳು ವಿಜಯಾನಂದ ಸ್ವಾಮೀಜಿಯವರ ಆನಂದಾಶ್ರಮ,  ಬೆಳಗಾವಿ ಪ್ರಕಟನಾಲಯದಲ್ಲಿ ದೊರೆಯುತ್ತವೆ.
ಸಂಪರ್ಕಿಸಿ :
* ಲೀಲಾ ವಿನೋದ,
* ಶಕ್ತಿಪಾತ ರಹಸ್ಯ ಯೋಗ


ಸರಿಯಾದ ವಿಳಾಸ :
ವಿಜಯಾನಂದ ಸ್ವಾಮಿಜಿ,
"ಆನಂದಾಶ್ರಮ", ಬೇವಿನ ಕೊಪ್ಪ,
ಬೈಲಹೊಂಗಲ-
ಜಿಲ್ಲೆ, ಬೆಳಗಾವಿ-೫೯೧೧೦೨
ಕರ್ನಾಟಕ.


Comments

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !