"ಗುರುಪೂರ್ಣಿಮೆ" ಯ ಪವಿತ್ರದಿನದಂದು, ಹೊಳಲ್ಕೆರೆ ಗುರುತ್ರಯರಿಗೆ ನಮಿಸುವೆವು !


This Article was published in 'Karnataka malla, ' Kannada Daily, published from Mumbai, Dated, 7th, August, 2010 
The Paper says, To-day is  Swami Nityananda Guruji's,  Anniversary !




ಇಂದಿನ "ಗುರುಪೂರ್ಣಿಮೆ" ಯ ಪವಿತ್ರದಿನದಂದು, ನಮ್ಮ ವಂಶಜರಾದ "ಶ್ರೀ ಶಂಕರಲಿಂಗ ಭಗವಾನ್" ಮತ್ತು ಅವರ ಶಿಷ್ಯರುಗಳಾದ ,  "ಶ್ರೀ. ರಾಘವೇಂದ್ರ ಸ್ವಾಮಿಗಳು," ಮತ್ತು  "ಶ್ರೀ ಮೂರ್ತಿ" ಯವರನ್ನು ಜ್ಞಾಪಿಸಿಕೊಂಡು, ಗುರುತ್ರಯರಿಗೆ ನಮಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಇವರೆಲ್ಲಾ ಒಟ್ಟಾರೆ ಹೊಳಲ್ಕೆರೆ ಯತಿಗಳು.  ಕರ್ನಾಟಕದ ಯತಿಗಳ  ಪರಂಪರೆಯಲ್ಲಿ  ಹೆಸರಾದವರು.


ಮುಂಬೈನಿಂದ ಪ್ರಕಟವಾಗುವ "ಕರ್ನಾಟಕ ಮಲ್ಲ" ವೆಂಬ "ದಿನಪತ್ರಿಕೆ" ಯಲ್ಲಿ  ಶನಿವಾರ,  ೨೪,  ಜುಲೈ, ೨೦೧೦ ರಂದು,  "ಯತಿ ಮೂರ್ತಿ"ಯವರ ಬಗ್ಗೆ ಲೇಖನ ಓದಿ, ನನಗೆ ಅತೀವ ಸಂತೋಷವಾಯಿತು. ಬಹಳ ವರ್ಷಗಳಿಂದ ಮೂರ್ತಿಗಳ ಬಗ್ಗೆ ತಿಳಿಯುವ ಕುತೂಹಲ ನನ್ನ ಮನದಲ್ಲಿ ಬೇರುಬಿಟ್ಟಿತ್ತು. ನಾನು ಮತ್ತು ನನ್ನ ತಮ್ಮ, ಚಿಕ್ಕವರಾಗಿದ್ದಾಗ,  ನಮ್ಮ ಅಮ್ಮನ ಜೊತೆಯಲ್ಲಿ "ಮಾಳೇನಹಳ್ಳಿ ರಂಗನಾಥ ಸ್ವಾಮಿ ರಥೋತ್ಸವ" ಕ್ಕೆ ಹೋದಾಗಲೆಲ್ಲಾ  "ತೇರು" ಮುಗಿದಮೇಲೆ, ನಾವು  ಕಾಲುದಾರಿಯಲ್ಲಿ ನಡೆದೇ "ನೂಲೇನೂರಿ"ಗೆ ಹೋಗಿ ಅಲ್ಲಿನ ಆಶ್ರಮವನ್ನು ಕಂಡು "ದತ್ತಗುರು"ವಿಗೆ ನಮಿಸಿ ಬರುತ್ತಿದ್ದೆವು. ಅಮ್ಮ ಮೂರ್ತಿಗಳ ಬಗ್ಗೆ ಹಲವಾರು ವಿಷಯಗಳನ್ನು ಹೇಳಿದ್ದು ಜ್ಞಾಪಕ. ಆದರೆ ಅವುಗಳಲ್ಲಿ ಒಂದೂ  ಒಂದೂ ತಲೆಯಲ್ಲಿ ನಿಲ್ಲಲಿಲ್ಲ. ಮೂರ್ತಿಯವರಿಗೆ "ಸರ್ವಮಂಗಳ"ಎಂಬ ಮಗಳು, ಮತ್ತು "ಆತ್ಮಾರಾಮ" ರೆಂಬ ಮಕ್ಕಳಿರುವ ವಿಚಾರ ಗೊತ್ತಾಯಿತು. ಮೂರ್ತಿಗಳ ಹೆಂಡತಿಯ ಆರೋಗ್ಯ ಅಷ್ಟೇನೂ ಚೆನ್ನಾಗಿರಲಿಲ್ಲ, ಇತ್ಯಾದಿ. 
ನಂತರ ನನ್ನ ಹುಟ್ಟೂರು ಹೊಳಲ್ಕೆರೆಗೆ ಅದೆಷ್ಟು ಬಾರಿ ಹೋದಾಗಲೂ,  ನಾನು ಮಾಳೇನ ಹಳ್ಳಿಗೆ  ಅನೇಕ ಬಾರಿ ನಮ್ಮ ಪರಿವಾರದವರ ಜೊತೆಗೆ ಹೋಗಿದ್ದೇನೆ.  ಅದೇಕೆ ನೂಲೇನೂರಿನ ನೂಲು ಮತ್ತೆ ಬೆಸೆಯಲಿಲ್ಲ ಎನ್ನುವ ವಿಷಯ ಇನ್ನೂ ಸರಿಯಾಗಿ ಗೊತ್ತಾಗಲಿಲ್ಲ. ಅಧ್ಯಾತ್ಮಿಕ ವಿಷಯಗಳು ಇನ್ನೂ ತಲೆಯಲ್ಲಿ ಸರಿಯಾಗಿ ಮನೆಮಾಡಿರಲಿಲ್ಲವಾಗಿ, ನನ್ನ ಗಮನವೆಲ್ಲಾ ಬೇರೆ ಕಡೆ ಹೋಗಿರುವುದು ಅರಿವಾಯಿತು; ಇದು ನನ್ನದೇ ತಪ್ಪು.
ಬೆಳಗಾವಿಯ, ಬೈಲುಹೊಂಗಲತಾಲ್ಲುಕಿನ, ಬೇವಿನಕೊಪ್ಪಗ್ರಾಮದ,  "ಆನಂದಾಶ್ರಮ" ದ, ಶ್ರೀ. ವಿಜಯಾನಂದ ಸ್ವಾಮಿಗಳು, ಬರೆದ " ಲೇಖನದಲ್ಲಿನ  ವಿಷಯಗಳು,  ನನ್ನ ತಿಳುವಳಿಕೆಗೆ ಅನುಗುಣವಾಗಿ ದಾಖಲಾಗಿರುವ ಸಂಗತಿಗಳೂ ಆಗಿದ್ದು,  ಅವು  ಹೀಗಿವೆ.
ಭಗವಾನ್ ನಿತ್ಯಾನಂದ ಸ್ವಾಮಿಗಳ "ಚಿತ್-ಶಕ್ತಿಯ ಪ್ರಭಾವ" ದಿಂದ ಪ್ರೇರಿತರಾದ, ಶ್ರೀನಿವಾಸಮೂರ್ತಿಯವರು, ಪ್ರಪ್ರಧಮವಾಗಿ "ಚಿದಾಕಾಶ ಗೀತೆ"  ಒತ್ತುಕೊಟ್ಟು, ವ್ಯಾಖ್ಯಾನವನು ರಚಿಸಿದರು. ಈ ಚಿದಾಕಾಶ ಗೀತೆ ಲಭ್ಯವಾದದ್ದು, ಸಮೀಪವರ್ತಿ ಶಿಷ್ಯೆ, ಪೂಜ್ಯತುಳಸೀಮಾತಾಜಿ ಯವರು, ಬರೆದಿಟ್ಟುಕೊಂಡು ಸಂಗ್ರಹಿಸಿದ ದಾಖಲುಗಳಿಂದ. ಸ್ವಾಮಿಗಳ ವಿದ್ವತ್ಪೂರ್ಣ ದಿವ್ಯಮುಖವಾಣಿ,  ಗಂಗಾಜಲದಂತೆ ಪ್ರವಹಿಸುತ್ತಿರುವಾಗ, ಮಾತೆಯವರು, ಆ ಅಮೃತವಾಣಿಯನ್ನು ಒಂದೆಡೆ ಬರಿದಿಟ್ಟು ರಕ್ಷಿಸಿದರು. ಆ ವಾಣಿಯನ್ನು ಮೂರ್ತಿಯವರು ಕಂಡು ಪ್ರಭಾವಿತರಾಗಿ ಅದಕ್ಕೆ ವ್ಯಾಖ್ಯಾನವನ್ನು ಬರೆದರು ಭಗವಾನ್ ನಿತ್ಯಾನಂದ ಸ್ವಾಮಿಗಳವರ ದಿವ್ಯ ಸನ್ನಿಧಿಯಲ್ಲಿ "ಶಕ್ತಿಪಾತ ದೀಕ್ಷೆ" ಯಿಂದ ಅನುಗ್ರಹಿತರಾಗಿ, ತಾವೂ ಬೆಳೆದು,  ತಪಸ್ವಿಗಳಾದರು. ಯಾವುದೇ  ತಮ್ಮ ಕೃತಿಗಳನ್ನು ಆರಂಭಿಸುವಾಗ, "ಓಂ ಭವಗತೇ ನಿತ್ಯಾನಂದಾಯನಮಃ,"  ಎಂದೇ ಶುರುಮಾಡಿ ಮುಂದುವರೆಯುವ ಮೂರ್ತಿಯವರು, ನಿತ್ಯಾನಂದರ ಪರಮ-ಶಿಷ್ಯರಲ್ಲಿ ಪ್ರಮುಖರಾದರು. ಮೂರ್ತಿಯವರು ರಚಿಸಿದ ಪ್ರಮುಖ ಕಾವ್ಯಗಳು :

  * "ಚಿದಾಕಾಶ ಗೀತೆ"


* "ಚಿಚ್ಛಕ್ತಿ ಪ್ರಭಾವ"
          *  "ನಿತ್ಯಾನಂದ ಉವಾಚ"
ಒಟ್ಟಾರೆ,  ೨೦  ಕ್ಕಿಂತಾ ಹೆಚ್ಚು ಕೃತಿರಚನೆ ಮಾಡಿದ,  ಖ್ಯಾತಿ ಮೂರ್ತಿಯವರದು.




'Ghatkopar,  Railway Station'. 'The Sky walk', is ready now  !

Near 'The Cetral Provision Stores,'...

The Entrance to the 'Sky walk'.....


This is near 'Bharat Cafe'.....


Around  Toronto City...

Yellow Flowers, What is in a name ?


Toronto Television Tower...



Toronto Forest side.....


It is a Duck like bird, Torontduck



Food is ready.....



Comments

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !