ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !
ನಾವು ಚಿಕ್ಕವರಾಗಿದ್ದಾಗ. ಯಾವಾಗಲೂ ’ಕೋಟೆ ’ ಕಡೆಯಿಂದಲೇ ಓಡಾಡುತ್ತಿದ್ದೆವು.”ಪೇಟೆ ’ ಯೆಂದರೆ ಏನೊ ಒಂದು ತರಹ ! ಕಾರಣ, ಸೊಸೈಟಿ ಹತ್ತಿರ ಹೋದರೆ ಅಪ್ಪ, ನಾಗಣ್ಣ ಇವರ್ನ್ ನೋಡಬೇಕು ; ಹೇಗೆ ಮಾತಾಡಿಸಬೇಕೊ ಗೊತ್ತಾಗ್ತಿರ್ಲಿಲ್ಲ. ಮೇಲಾಗಿ, ಏನೋ ಒಂದ್ ತರ್ಹ ಮಖೇಡಿತನ ನಮ್ಮನ್ನ ಆವರಿಸಿತ್ತು. ಈಗಿನ ತರಹ, "ನೋಡಿ, ಇವ್ನೇ ನನ್ನ ಮಗ, ಹೈಸ್ಕೂಲ್ ನಲ್ಲೋ ಮಿಡ್ಲ್ ಸ್ಕೂಲ್ ನಲ್ಲೊ ಓದ್ತಿದ್ದಾನೆ." ಅಂತ ಅಪ್ಪನಾಗಲೀ ಅಣ್ಣನಾಗಲಿ ಪರಿಚಯ ಮಾಡಿಸ್ತಿರ್ಲಿಲ್ಲ. "ಹೋಗ್ರೊ ನಿಮಗ್ಯಾಕ್ ದೊಡ್ಡೊರ್ ಸಹವಾಸ." ಅಂದ್ಬಿಡೋರು. ಇದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇದ್ದದ್ದನ್ನು ನಾನು ಕಂಡಿದ್ದೆ.
ಇನ್ನು ನಮ್ಮ ಪ್ರೀತಿಯ ಹಿರೇ ಕೆರೆ, (ಹೀರೇ ಕೆರೆ) ಕಡೆಯಿಂದ ಕೋಟೆ ಮುಖಾಂತರ ಊರಿನೊಳಗೆ ಬಂದ್ರೆ, ಹಾ ಆಗ ಒಂದು ಮಣ್ಣಿನ ಗೋಡೆಯ ಕೋಟೆ ಅಂತ ಕರೆಯಬಹುದಾದ ಗೋಡೆ ಇತ್ತು. ಆ ಜಾಗನ, ಅಮ್ಮ, ಮತ್ತು ಇತರೆ ಹಿರಿಯರು, "ಅಗಳತಿ" ಅಂತ ಕರಿತಿದೃ. ಅದರ ಅರ್ಥ ನಾವೂ ಕೇಳಲಿಲ್ಲ ಅವರ್ಯರೂ ಹೇಳಲಿಲ್ಲ. ಒಟ್ಟಿನಲ್ಲಿ ಊರಿನ ಜನರೆಲ್ಲಾ ನಾನ್ ಹೇಳಿದ್ನಲ್ಲ. ಆ ಅಗಳ್ತಿನಾ ಬೇರೆದಕ್ಕೆ ಉಪಯೋಗ್ಸ್ತಿದೃ ಅನ್ನೋದ್ ನಿಜ.
ಒಂದು ಭಾರಿ ಅರಳಿಮರ ಇತ್ತು. ಅದನ್ನ ದಾಟಿ ಮುಂದೆ ಬಂದರೆ ಅಗಳತಿ-ಕೋಟೆ ಗೊಡೆಗೆ ತಗುಲಿದಂತೆ, ಕೆಳಗೆ ಕೊಟ್ಟಿರುವ ದೇವರ ವಿಗ್ರಹಗಳಿದ್ದವು. ಇರಡೂ ಕಡೆ.
ಮುಂದೆ ಬಂದರೆ, "ಚಿಕ್ಕ ಆಂಜನೇಯ ಸ್ವಾಮಿ ದೇವಾಲಯ" ಅದರ ಎದುರಿಗೆ ದೊಡ್ಡ ಅರಳೀಮರ. (ಮೊದಲು ತಿಳಿಸಿದ ಅರಳೀಮರಕ್ಕೆ ಹೋಲಿಸಿದರೆ ಇದು ಚಿಕ್ಕದು.)
ಆ ಎರಡೂ ಅರಳೀಮರಗಳು ಕ್ರಮವಾಗಿ ಬರ-ಸಿಡಿಲಿನ ಅಬ್ಬರಕ್ಕೆ ತುತ್ತಾಗಿ, ನಮ್ಮ ಕಲ್ಪನೆಯ ಕೋಟೆಯಿಂದ ಮರೆಯಾದವು !
ಭಂಡಮ್ಮನವರ ಸಿಡಿ ಉತ್ಸವವನ್ನು ೩ ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿದ್ದರು. ಆ ಸಿಡಿ ಜಾತ್ರೆಗೆ ಉಪಯೋಗವಾಗುವ ಒಂದು ದೊಡ್ಡಗಾತ್ರದ ಮರದ ಭದ್ರವಾದ ದಿಮ್ಮಿಯನ್ನು ಬಯಲಿನಲ್ಲಿ ನೆಲದಮೇಲೆ ಒರಗಿಸಿಟ್ಟಿದ್ದರು. ಯಾಕೋ ಈ ಬಾರಿ ನಾನು ಹೋಗಿನೋಡಿದಾಗ ಅದು ಕಣ್ಣಿಗೆ ಬೀಳಲಿಲ್ಲ. ಬಹುಶಃ ಎಲ್ಲೋ ಬೇರೆ ಕಡೆ ಇಟ್ಟಿರಬಹುದು..
ಪಕ್ಕದಲ್ಲೇ ಊರಿನ ಗ್ರಾಮದೇವತೆ, ಶ್ರೀ. ಭಂಡಮ್ಮದೇವಿಯವರ ದೇವಾಲಯ, ಅದರ ಮುಂದೆ ಇದ್ದ ಬಯಲಿನಲ್ಲಿ ಈಚಲು ಚಾಪೆಯಮೇಲೆ ಬೇಯಿಸಿದ ಅಡಕೆಯನ್ನು ಒಣಗಿಸುವ ನೋಟ, ಇಂದಿಗೂ ಬದಲಾಗಿಲ್ಲ !
ಈ ದೇವತೆಗಳು ನಮ್ಮ ಹೋಳಲ್ಕೆರೆಯನ್ನು ದುಷ್ಟ ಶಕ್ತಿಗಳಿಂದ ಕಾಯುತ್ತಿದ್ದರು !
ಅಗಳತಿಯ ಮಣ್ಣಿನ ಕೋಟೆಗೆ ಹತ್ತ ಸೇರಿಕೊಂಡಂತಿದ್ದ ದೇವತೆಗಳು
'Anjaneya swamy Temple', in the entrance of 'Holalkere'.....
'Bhandammanavara devasthana'
ಇದನ್ನೇ ಹೇಳಿದ್ದು ನಾನು. ಅಡಿಕೆ ಒಣಗಿಸುವ ಪ್ರಕ್ರಿಯೆ ಅಂತ !
Shri. Venugopala swamy
Lakshmi devi..
Shri. Venugopala swamy temple, Holalkere...
Shri. Rama temple, Holalkere...
Gunderiyavara mane...Shri. Veerabhadraswamy temple, Holalkere..
Prasanna Ganapathy Temple.
"Shri. Prasanna Ganapathi temple, Holalkere .ಜೈನರ ಬಸದಿ.
ಜೈನರ ಬಸದಿ..
Malenahalliyalli :
’ಅಪ್ಪಾವರ ಕೊಠಡಿ’-ಪೂಜ್ಯ ಶ್ರೀ. ಶಂಕರಲಿಂಗ ಭಗವಾನರು ಧ್ಯಾನಮಾಡುತ್ತಿದ್ದ ಸ್ಥಳ....
ಅದೇ ಕೊಠಡಿಯಲ್ಲಿ..
ಲಕ್ಶ್ಮೀದೇವರ ಮಂದಿರ.
ಶ್ರೀ. ರಂಗನಾಥಸ್ವಾಮಿ ಮಂದಿರ..
ಶ್ರೀ. ರಂಗನಾಥಸ್ವಾಮಿ ಗರ್ಭಗುಡಿ...
ಅರ್ಚಕರು ವಿಧಿವತ್ತಾಗಿ ಪೂಜೆ ಸಲ್ಲಿಸುತ್ತಿದ್ದಾರೆ...
ಭೂತರಾಯನ ಮೂರ್ತಿ....
ರಂಗನಾಥಸ್ವಾಮಿ ಗುಡಿಯ ಅರ್ಚಕರ ಮನೆ....
ಭೂತರಾಯನ ಗುಡಿ....
ರಂಗನಾಥ ಸ್ವಾಮಿ ದೇವಾಲಯದ ಪ್ರಮುಖ ದ್ವಾರ....
ಹೊಳಲ್ಕೆರೆಯಲ್ಲಿ :
ಹೊಳಲ್ಕೆರೆಯ ಬಸದಿಯೊಳಗೆ...
ಶ್ರೀ. ಕೋದಂಡಿಯವರ ಜೊತೆ, ಅವರ ಮನೆಯೊಳಗೆ...
ಹೊಳಲ್ಕೆರೆಯಲ್ಲಿ ಕೋದಂಡಿಯವರ ಮನೆ...
ಪದ್ಮಾವತಿ ಅಮ್ಮನವರ ಗುಡಿ...
ಬೈರಪ್ಪದೇವರ ಭಾವಿ...
ಭೈರೇದೇವರ ದೇವಸ್ಥಾನ...
Our Primary school (ನಾವೆಲ್ಲಾರೂ ಅಲ್ಲೆ ಓದಿದ್ದು)
ಹೊಳಲ್ಕೆರೆಯ ನಮ್ಮ ಮನೆ.(ಹಿತ್ತಿಲ ಕಡೆ ಬಾಗಿಲು).
ಹೊಂಡ..
ಹೊಳಲ್ಕೆರೆಯ ನಮ್ಮ ಮನೆಯ ಹೊರಬಾಗಿಲಿನಿಂದ ಮುಖ್ಯ ರಸ್ತೆಯ ಕಡೆಗೆ...
ಮನೆ ಭಾವಿ...
ನಮ್ಮ ಮನೆ, ವಠಾರ.. ಅಪ್ಪನ ರೂಮಿನ ಕಿಟಕಿ ಕಾಣಿಸುತ್ತಿದೆ !
Comments
ಶ್ರೀಪಾದ್