ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !
ನಾವು ಚಿಕ್ಕವರಾಗಿದ್ದಾಗ. ಯಾವಾಗಲೂ ’ಕೋಟೆ ’ ಕಡೆಯಿಂದಲೇ ಓಡಾಡುತ್ತಿದ್ದೆವು.”ಪೇಟೆ ’ ಯೆಂದರೆ ಏನೊ ಒಂದು ತರಹ ! ಕಾರಣ, ಸೊಸೈಟಿ ಹತ್ತಿರ ಹೋದರೆ ಅಪ್ಪ, ನಾಗಣ್ಣ ಇವರ್ನ್ ನೋಡಬೇಕು ; ಹೇಗೆ ಮಾತಾಡಿಸಬೇಕೊ ಗೊತ್ತಾಗ್ತಿರ್ಲಿಲ್ಲ. ಮೇಲಾಗಿ, ಏನೋ ಒಂದ್ ತರ್ಹ ಮಖೇಡಿತನ ನಮ್ಮನ್ನ ಆವರಿಸಿತ್ತು. ಈಗಿನ ತರಹ, "ನೋಡಿ, ಇವ್ನೇ ನನ್ನ ಮಗ, ಹೈಸ್ಕೂಲ್ ನಲ್ಲೋ ಮಿಡ್ಲ್ ಸ್ಕೂಲ್ ನಲ್ಲೊ ಓದ್ತಿದ್ದಾನೆ." ಅಂತ ಅಪ್ಪನಾಗಲೀ ಅಣ್ಣನಾಗಲಿ ಪರಿಚಯ ಮಾಡಿಸ್ತಿರ್ಲಿಲ್ಲ. "ಹೋಗ್ರೊ ನಿಮಗ್ಯಾಕ್ ದೊಡ್ಡೊರ್ ಸಹವಾಸ." ಅಂದ್ಬಿಡೋರು. ಇದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇದ್ದದ್ದನ್ನು ನಾನು ಕಂಡಿದ್ದೆ. ಇನ್ನು ನಮ್ಮ ಪ್ರೀತಿಯ ಹಿರೇ ಕೆರೆ, (ಹೀರೇ ಕೆರೆ) ಕಡೆಯಿಂದ ಕೋಟೆ ಮುಖಾಂತರ ಊರಿನೊಳಗೆ ಬಂದ್ರೆ, ಹಾ ಆಗ ಒಂದು ಮಣ್ಣಿನ ಗೋಡೆಯ ಕೋಟೆ ಅಂತ ಕರೆಯಬಹುದಾದ ಗೋಡೆ ಇತ್ತು. ಆ ಜಾಗನ, ಅಮ್ಮ, ಮತ್ತು ಇತರೆ ಹಿರಿಯರು, "ಅಗಳತಿ" ಅಂತ ಕರಿತಿದೃ. ಅದರ ಅರ್ಥ ನಾವೂ ಕೇಳಲಿಲ್ಲ ಅವರ್ಯರೂ ಹೇಳಲಿಲ್ಲ. ಒಟ್ಟಿನಲ್ಲಿ ಊರಿನ ಜನರೆಲ್ಲಾ ನಾನ್ ಹೇಳಿದ್ನಲ್ಲ. ಆ ಅಗಳ್ತಿನಾ ಬೇರೆದಕ್ಕೆ ಉಪಯೋಗ್ಸ್ತಿದೃ ಅನ್ನೋದ್ ನಿಜ. ಒಂದು ಭಾರಿ ಅರಳಿಮರ ಇತ್ತು. ಅದನ್ನ ದಾಟಿ ಮುಂದೆ ಬಂದರೆ ಅಗಳತಿ-ಕೋಟೆ ಗೊಡೆಗೆ ತಗುಲಿದಂತೆ, ಕೆಳಗೆ ಕೊಟ್ಟಿರುವ ದೇವರ ವಿಗ್ರಹಗಳಿದ್ದವು. ಇರಡೂ ಕಡೆ. ಮುಂದೆ ಬಂದರೆ, "ಚಿಕ್ಕ ಆಂಜನೇಯ ಸ್ವಾಮಿ ದೇವಾಲ
Comments