Chi Pranathi visited Mumbai in Dec, 2017 to her husband's sister's home is at Chembur, Mumbai. She came to our house on 24, Dec, 2017, with Chi. Karthik, Sau. Veena, 




Chi. Sow. Pranathi karthik, sang a song composed by one of famous writers of Karnataka, Dr. H.S.Venkatesh murthy. We all enjoyed hearing the song. It was quite some time, we heard Dr. H.S.V, my beloved friend ! 

Link :

https://www.facebook.com/holalkere.laxmivenkatesh/videos/10215324029433187/

ಈ ಭಾವಗೀತೆಯನ್ನು ಹಲವಾರು ಗಾಯಕಿಯರು ಅತ್ಯಂತ ಅರ್ಥಗರ್ಭಿತವಾಗಿ ಹಾಡಿದ್ದಾರೆ. ಚಿ.ಸೌ.ಪ್ರಣತಿಯ ಹಾಡುಗಾರಿಕೆಯಲ್ಲೂ ಅದೇ ಮಾಧುರ್ಯ, ಹಾಗೂ ಒಳದನಿಯನ್ನು ಕಂಡೆವು. ಡಾ. ಎಚ್.ಎಸ್.ವೆಂಕಟೇಶ ಮೂರ್ತಿಯವರು ನನ್ನ ಆತ್ಮೀಯ ಗೆಳೆಯರಲ್ಲೊಬ್ಬರು. 'ಲೋಕದ ಕಣ್ಣಿಗೆ' ತರಹದ ಹಲವಾರು ಗೀತೆಗಳನ್ನು ಬರೆದು ರಸಿಕರ ಮನ ಸೆಳೆದಿದ್ದಾರೆ. ಉದಾ :
* ಎಷ್ಟು ಕಾಲ ಒಟ್ಟಿಗಿದ್ದೂ,
* ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ,,ಇತ್ಯಾದಿ.
ಅವರ ಕವನಗಳೆಲ್ಲಾ ನಮಗೆ ಅತ್ಯಂತ ಪ್ರೀತಿದಾಯಕವಾದವುಗಳು.
ಲೋಕದ ಕಣ್ಣಿಗೆ ರಾಧೆಯು ಕೂಡ
ಎಲ್ಲರಂತೆ ಒಂದು ಹೆಣ್ಣು
ನನಗೋ ಆಕೆ ಕೃಷ್ಣನ ತೋರುವ
ಪ್ರೀತಿಯು ನೀಡಿದ ಕಣ್ಣು
ತಿಂಗಳ ರಾತ್ರಿ ತೊರೆಯ ಸಮೀಪ
ಉರಿದಿರೆ ಯಾವುದೋ ದೀಪ
ಯಾರೋ ಮೋಹನ ಯಾವ ರಾಧೆಗೋ
ಪಡುತಿರುವನು ಪರಿತಾಪ
ನಾನು ನನ್ನದು ನನ್ನವರೆನ್ನುವ
ಹಲವು ತೊಡಕುಗಳ ಮೀರಿ
ಭಾವಿಸಿ ಸೇರಲು ಬೃಂದಾವನವ
ರಾಧೆ ತೋರುವಳು ದಾರಿ
ಮಹಾಪ್ರವಾಹ ತಡೆಯುವರಿಲ್ಲ
ಪಾತ್ರವಿರದ ತೊರೆ ಪ್ರೀತಿ
ತೊರೆದರು ತನ್ನ ತೊರೆಯದು ಪ್ರಿಯನ
ರಾಧೆಯ ಪ್ರೀತಿಯ ರೀತಿ ಇದು
ರಾಧೆಯ ಪ್ರೀತಿಯ ರೀತಿ







Comments

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !