ಯುಗಾದಿ ಹಬ್ಬ ೨೦೧೮ :
Courtesy :Daily express.
Courtesy : Google photos.com
ವರಕವಿ ಡಾ. ದತ್ತಾತ್ರೇಯ ರಾಮಚಂದ್ರ ಬೆಂದ್ರೆಯವರ ಎಂದೂ ಮರೆಯದ ಈ ಗೀತೆಯಿಲ್ಲದೆ ಹೊಸವರ್ಷದ ಆಚರಣೆಯಾದರೂ ಹೇಗೆ ಸಾಧ್ಯ ?
"ಯುಗ ಯುಗಗಳು ಕಳೆದರೂ ಯುಗಾದಿ ಮರಳಿ ಬರುತಿದೆ.
ಹೊಸ ವರುಷವು ಹೊಸ ಹರುಷವ, ಹೊಸತು ಹೊಸತು ತರುತಿದೆ " !
ಹಳ್ಳಿಯಿರಲಿ, ದಿಳ್ಳಿಯಿರಲಿ, ವಿದೇಶವಿರಲಿ, ಯುಗಾದಿ ಹಬ್ಬದ ಸಡಗರ ಆಚರಿಸುವ ವಿಧಿ ವಿಧಾನಗಳು ಎಂದಿನಂತೆಯೇ ಇರುತ್ತವೆ. ನಮ್ಮ ಹರ್ಷ, ಅಜಿತಾ, ಮುದ್ದು ಗೌರಿ, ಅಮೆರಿಕದಲ್ಲಿದ್ದರೂ ಹಬ್ಬದ ಸಂಭ್ರಮ ಕಡಿಮೆಯಾಗುವುದಿಲ್ಲ. ಅಲ್ಲಿನ ಜನ ಸನ್ನಿವೇಶಗಳನ್ನು ಗಮನಕ್ಕೆ ತೆಗೆದುಕೊಂಡು ಅಲ್ಪ ಸ್ವಲ್ಪ ಬದಲಾವಣೆಗಳನ್ನು ಬಿಟ್ಟರೆ, ಎಲ್ಲವೂ ಹಾಗೆಯೇ ಹಿಂದಿದ್ದಂತೆಯೇ ಇರುತ್ತವೆ.
ಕರ್ನಾಟಕದಲ್ಲಿ ಯುಗಾದಿಯ ಆಚರಣೆ :
'ಯುಗಾದಿ' ಅಥವಾ 'ಉಗಾದಿ', ಎಂದು ಕರೆಯಲ್ಪಡುವ ಈ ಹಬ್ಬ, ಭಾರತದ ಬಹುತೇಕ ಭಾಗಗಳಲ್ಲಿ ಚೈತ್ರ ಮಾಸದ ಮೊದಲ ದಿನದ ಎಂದು ಆಚರಿಸಿಕೊಳ್ಳಲಾಗುತ್ತದೆ. ಪ್ರಮುಖವಾಗಿ ಈ ಹಬ್ಬವನ್ನು ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಲ್ಲಿ ಹೊಸ ವರ್ಷದ ಹಬ್ಬ ಎಂದು ಆಚರಿಸುತ್ತಾರೆ. ಸಾಮಾನ್ಯವಾಗಿ ಈ ಹಬ್ಬವು ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಮಾರ್ಚ್, ಅಥವಾ ಏಪ್ರಿಲ್ ತಿಂಗಳಲ್ಲಿ ಹೆಚ್ಚಾಗಿ ಬರುತ್ತದೆ.
ಈ ಸಂದರ್ಭದಲ್ಲಿ ಪಂಚಾಂಗದ ಪೂಜೆ, ಹಾಗೂ ಸರ್ವೇ-ಸಾಮಾನ್ಯವಾಗಿ "ಬೇವು-ಬೆಲ್ಲ."ವನ್ನು ಜೀವನದ ಸಿಹಿ-ಕಹಿಗಳನ್ನು ಅನುಭವಿಸಬೇಕು ಎನ್ನುವ ಕಾರಣಕ್ಕಾಗಿ ಇವರೆಡರ ಮಿಶ್ರಣವನ್ನು ಸೇವಿಸುತ್ತಾರೆ. ವಸಂತಮಾಸದ ಆಗಮನವೇ ಯುಗಾದಿ ಹಬ್ಬ ಅಂತ ಹೇಳುತ್ತಾರೆ. ಬೇವಿನ ಹೂ, ವಾಸನೆ ಮಾವಿನ ಮರದ ಮೇಲೆ ಕೋಗಿಲೆ ಹಾಡುವ ರಾಗ. ಎಲ್ಲವೂ ಹೊಸ ವರ್ಷದ ಆಗಮನದ ಸಂಖೇತ. ಹಾಗಾಗಿ ನಮ್ಮ ಹಿರಿಯರು ಈ ಹಬ್ಬವನ್ನು ಹೊಸ ವರ್ಷ ಅಂತ ಕರೆಯುತ್ತಾರೆ
ಸಾಮಾನ್ಯವಾಗಿ ಯುಗಾದಿಯಲ್ಲಿ ಒಬ್ಬಟ್ಟು, ಅಥವಾ ಹೋಳಿಗೆಯನ್ನು ಮಾಡುತ್ತಾರೆ. ಇದನ್ನು ಮರಾಠಿಯಲ್ಲಿ 'ಪೂರಣ್ ಪೋಳಿ' ಎಂದು ಕರೆಯುವರು. ಅಲ್ಲದೆ ಕನ್ನಡ ಸಾಹಿತ್ಯದಲ್ಲಿಯೂ, ಯುಗಾದಿಯ ನಂಟು ಕೂಡಾ ಅಷ್ಟೇ ಸೊಗಸಾಗಿ ಈ ಹಬ್ಬವನ್ನು ವರ್ಣಿಸಿದ್ದಾರೆ, ವರಕವಿ, ದ.ರಾ. ಬೇಂದ್ರೆಯವರು ಈ ಹಬ್ಬದ ಕುರಿತಾಗಿ ಬರೆದ ಕವಿತೆಯಂತೂ ಪ್ರತಿ ಯುಗಾದಿಯನ್ನು ಸ್ಮರಿಸುವಂತಿದೆ.ಮಹಾರಾಷ್ಟ್ರದಲ್ಲಿ :
ಈ ಯುಗಾದಿ ಹಬ್ಬವನ್ನು ಮಹಾರಾಷ್ಟ್ರದಲ್ಲಿ 'ಗುಡಿಪಾಡ್ವ' ಎಂದು ಕರೆಯುತ್ತಾರೆ ಮಹಾರಾಷ್ಟ್ರದಲ್ಲಿ ಗುಡಿಪಾಡ್ವ. ಪಾಡ್ಯಮಿ ದಿವಸ ಗುಡಿಯನ್ನು ಏರಿಸುವುದೇ ಗುಡಿಪಾಡ್ವ – ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ ‘ಗುಡಿ’ ಎಂದು ಮೂಲೆಯಲ್ಲಿ ಇರಿಸುವರು. ಇದು ಹೊಸ ವರುಷದ ಆಗಮನಕ್ಕೆ ಬಾವುಟವನ್ನು ಹಾರಿಸುವುದರ ಸಂಕೇತ.
Courtesy : Google photos.com
"ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ
"ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ
Comments